For Quick Alerts
  ALLOW NOTIFICATIONS  
  For Daily Alerts

  ತಾರೆ ಮಮತಾ ಒಂದು ವರ್ಷದ ದಾಂಪತ್ಯ ಅಂತ್ಯ

  By Rajendra
  |

  ದಕ್ಷಿಣ ಭಾರತದ ತಾರೆ ಮಮತಾ ಮೋಹನ್ ದಾಸ್ ಹಾಗೂ ಆಕೆಯ ಪತಿ ಪ್ರಜಿತ್ ಪದ್ಮನಾಭನ್ ಅವರಿಗೆ ಎರ್ನಾಕುಲಂ ಕೌಟುಂಬಿಕ ನ್ಯಾಯಾಲಯ ವಿವಾಹ ವಿಚ್ಛೇದನಕ್ಕೆ ಸೋಮವಾರ (ಆ.19) ಅನುಮತಿ ನೀಡಿದೆ. ಈ ಮೂಲಕ ಮಮತಾಗೆ ತನ್ನ ಪತಿಯಿಂದ ವಿಮುಕ್ತಿ ಸಿಕ್ಕಿದೆ.

  ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನಕ್ಕೆ ಕೋರ್ಟ್ ಅಂಗೀಕರಿಸಿದೆ. ತಮ್ಮಿಬ್ಬರಲ್ಲಿ ಹೊಂದಾಣಿಕೆ ಇಲ್ಲ. ಇನ್ನು ಮುಂದೆ ತಾವಿಬ್ಬರೂ ಒಟ್ಟಿಗೆ ಬಾಳ್ವೆ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಇಬ್ಬರೂ ಅರ್ಜಿಯಲ್ಲಿ ಕೋರಿದ್ದರು. ಕಡೆಗೂ ಒಂದು ವರ್ಷದ ದಾಂಪತ್ಯ ಜೀವನ ಮುರಿದುಬಿದ್ದಿದೆ.

  ಈ ಕೇಸಿನ ವಿಚಾರಣೆಯನ್ನು ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಎನ್ ಲೀಲಾಮಣಿ ನಡೆಸಿ ಇಬ್ಬರನ್ನೂ ಕೌನ್ಸೆಲಿಂಗ್ ಗೆ ಕಳುಹಿಸಿದ್ದರು. ಅಲ್ಲೂ ಇಬ್ಬರೂ ತಮಗೆ ಒಟ್ಟಿಗೆ ಬಾಳ್ವೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದರು. ಇದಿಷ್ಟು ಬಿಟ್ಟರೆ ಇಬ್ಬರ ಕಡೆಯಿಂದಲೂ ಯಾವುದೇ ಆರೋಪಗಳು ಇರಲಿಲ್ಲ.

  ಸಂಧಾನ ಮಾಡಲು ಎರಡೂ ಕುಟುಂಬಗಳು ಪ್ರಯತ್ನಿಸಿ ವಿಫಲವಾಗಿದ್ದವು. ಮಧ್ಯಸ್ಥಿಕೆ ಕೇಂದ್ರದಲ್ಲೂ ಇವರಿಬ್ಬರನ್ನು ಒಂದು ಮಾಡಲು ಸಾಧ್ಯವಾಗಿರಲಿಲ್ಲ. ಡಿಸೆಂಬರ್ 28, 2011ರಲ್ಲಿ ಇವರಿಬ್ಬರ ಮದುವೆ ಕೋಳಿಕೋಡ್ ನ ಖಾಸಗಿ ರೆಸಾರ್ಟ್ ನಲ್ಲಿ ನಡೆದಿತ್ತು.

  ಇಬ್ಬರ ಮನೋಭಾವಗಳು ಭಿನ್ನವಾಗಿದ್ದು ನಾವಿಬ್ಬರೂ ಒಟ್ಟಿಗೆ ಬಾಳಲು ಸಾಧ್ಯವಿಲ್ಲ. ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು ಎಂಬಂತೆ ತಮ್ಮ ಬಾಳ ಬಂಡಿ ಸಾಗುತ್ತಿದೆ ಎಂದಿದ್ದರು ಮಮತಾ. ಆದರೆ ಸೂಕ್ತವಾದ ಕಾರಣ ಇದಿರಲಿಕ್ಕಿಲ್ಲ. ಇನ್ನೇನೋ ಇರಬೇಕು ಎಂಬ ಅನುಮಾಮವೂ ಮಮತಾ ಆತ್ಮೀಯರನ್ನು ಕಾಡುತ್ತಿದೆ. ಕೋಜಿಕೋಡ್‌ನಲ್ಲಿ ಇವರಿಬ್ಬರ ಮದುವೆ ಸರಳವಾಗಿ ನೆರವೇರಿತ್ತು. ಬಹ್ರೇನ್‌ನಲ್ಲಿ ಉದ್ಯಮಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಪ್ರಜಿತ್.

  ಮಮತಾ ಅವರ ತಂದೆ ಬ್ಯಾಂಕ್ ಆಫ್ ಅಮೆರಿಕಾದಲ್ಲಿ ಹಿರಿಯ ಅಧಿಕಾರಿ. ಇವರಿಬ್ಬರ ಮದುವೆ ಕೇವಲ ಆತ್ಮೀಯರು ಸಮ್ಮುಖದಲ್ಲಿ ನೆರವೇರಿತ್ತು. ಮಮತಾ ಮೋಹನ್ ದಾಸ್ ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಸಖತ್ ಬಿಸಿ ತಾರೆ. ಸಾಲದಕ್ಕೆ ಈಕೆ ಗಾಯಕಿ ಕೂಡ. 'ಗೂಳಿ' ಚಿತ್ರದ ಮೂಲಕ ಕನ್ನಡ ಬೆಳ್ಳಿತೆರೆಗೆ ಪರಿಚಯವಾಗಿದ್ದರು. ಮತ್ತೆ ಈಕೆಗೆ ಕನ್ನಡದಲ್ಲಿ ನಟಿಸುವ ಚಾನ್ಸ್ ಸಿಗಲೇ ಇಲ್ಲ. (ಏಜೆನ್ಸೀಸ್)

  English summary
  The Ernakulam Family Court on Monday granted divorce to actor Mamta Mohandas and Bahrain-based businessman Prajith Padmanabhan. The court allowed a mutual consent divorce plea.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X