»   » ಹಾಸ್ಯ ನಟ 'ಮಿತ್ರ' ಅವರಿಂದ ನಿಮ್ಗೆಲ್ಲಾ ಫೋನ್ ಕಾಲ್ ಬರುತ್ತೆ! ಯಾಕೆ?

ಹಾಸ್ಯ ನಟ 'ಮಿತ್ರ' ಅವರಿಂದ ನಿಮ್ಗೆಲ್ಲಾ ಫೋನ್ ಕಾಲ್ ಬರುತ್ತೆ! ಯಾಕೆ?

Posted By:
Subscribe to Filmibeat Kannada

ನಿಮ್ಮ ಮೊಬೈಲ್ ಗೆ ಒಂದು ಅನೌನ್ ನಂಬರ್ ನಿಂದ ಫೋನ್ ಬರುತ್ತೆ. ನೀವು ಆ ಫೋನ್ ಕಾಲ್ ಸ್ವೀಕರಿಸಿದ ತಕ್ಷಣ ಆ ಕಡೆಯಿಂದ ಕನ್ನಡದ ಹಾಸ್ಯ ನಟ ಮಿತ್ರ ಅವರು ಮಾತಾಡ್ತಾರೆ. ನೀವು ಒಂದು ಕ್ಷಣ ಶಾಕ್ ಆದ್ರೂ ಇದು ನಿಜ. ಹೌದು, ಸ್ಯಾಂಡಲ್ ವುಡ್ ಹಾಸ್ಯ ನಟ ಮಿತ್ರ ಅವರು ಫೋನ್ ಮಾಡಿ ನಿಮ್ ಜೊತೆ ಮಾತಾಡ್ತಾರೆ.

ಅರೇ....ಮಿತ್ರ ಅವರು ನಿಮಗ್ಯಾಕೆ ಫೋನ್ ಮಾಡ್ತಾರೆ ಅಂತ ಯೋಚನೆನಾ...! ಇದು ಹಾಸ್ಯ ನಟ ಮಿತ್ರ ಅವರು ನಿರ್ಮಾಣ ಮಾಡಿ ನಟಿಸಿರುವ 'ರಾಗ' ಚಿತ್ರದ ವಿಭಿನ್ನ ಪ್ರಚಾರ.[ಕನ್ನಡ ಚಿತ್ರರಂಗದ ಮತ್ತೊಂದು 'ಅದ್ಭುತ' ಮಿತ್ರನ 'ರಾಗ'!]

Actor Mitra Starring 'Raaga' Movie Ready to Release

ಮಿತ್ರ ಹಾಗೂ ಭಾಮಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ರಾಗ' ಚಿತ್ರ, ಬಿಡುಗಡೆಗೆ ಸಜ್ಜಾಗಿದ್ದು, ''ನಮ್ಮ ಚಿತ್ರವನ್ನ ನೋಡಿ ಬೆಂಬಲಿಸಿ'' ಎಂದು ಸ್ವತಃ ಮಿತ್ರ ಅವರೇ ಫೋನ್ ಮಾಡಿ ನಿಮ್ಮನ್ನು ಕೇಳಿಕೊಳ್ಳುತ್ತಿದ್ದಾರೆ. ಆದ್ರೆ, ಈ ಫೋನ್ ಕಾಲ್ ನಲ್ಲಿ ಮಿತ್ರ ಅವರ ಬದಲು, ಮಿತ್ರ ಅವರು ಧ್ವನಿಯಲ್ಲಿ ರೆಕಾರ್ಡ್ ಮಾಡಿರುವ ಸಂಭಾಷಣೆ ಮಾತ್ರ ಕೇಳಿಸುತ್ತೆ.['ರಾಗ' ಟ್ರೈಲರ್ ಗೆ ದನಿ ನೀಡಿದ ಕಿಚ್ಚ ಸುದೀಪ್.!]

''ಹಲೋ ನಮಸ್ಕಾರ. ನಾನು ನಿಮ್ಮ ಪ್ರೀತಿಯ ಹಾಸ್ಯ ನಟ ಮಿತ್ರ ಮಾತಾಡ್ತಿದ್ದಿನಿ. ನಾನು ನಿರ್ಮಾಣ ಮಾಡಿ, ನಟಿಸಿರುವ 'ರಾಗ' ಚಿತ್ರ ಆದಷ್ಟೂ ಬೇಗ ರಿಲೀಸ್ ಆಗ್ತಿದೆ. ಎಲ್ಲರೂ ಈ ಚಿತ್ರವನ್ನ ನೋಡಿ, ನಮಗೆ ಹಾರೈಸಿ'' ಎಂದು ಮನವಿ ಮಾಡಿಕೊಂಡಿದ್ದಾರೆ.[ಮಿತ್ರನ 'ರಾಗ'ಕ್ಕೆ 'ಚಕ್ರವರ್ತಿ' ಅತಿಥಿ]

Actor Mitra Starring 'Raaga' Movie Ready to Release

'ರಾಗ' ಚಿತ್ರವನ್ನ ಪಿ.ಸಿ ಶೇಖರ್ ನಿರ್ದೇಶನ ಮಾಡಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಅವಿನಾಶ್, ಜೈಜಗದೀಶ್, ರಮೇಶ್ ಭಟ್, ಸಿಹಿ ಕಹಿ ಚಂದ್ರು ರಂತಹ ದೊಡ್ಡ ಕಲಾವಿದರು ಅಭಿನಯಿಸಿದ್ದಾರೆ. ಸದ್ಯ ಟ್ರೈಲರ್ ಮತ್ತು ಹಾಡುಗಳ ಮೂಲಕ ವಿಭಿನ್ನವೆನ್ನಿಸಿರುವ 'ರಾಗ' ಸದ್ಯದಲ್ಲೇ ಬಿಡುಗಡೆಯ ದಿನಾಂಕವನ್ನ ಘೋಷಣೆ ಮಾಡಲಿದೆ.

English summary
Sandalwood Comedy Actor Mitra and Bhama Starring 'Raaga' Movie is Ready to Release. the Movie Directed by PC Shekar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada