For Quick Alerts
  ALLOW NOTIFICATIONS  
  For Daily Alerts

  ನಿಜವೇ! ತಿರುಪತಿ ತಿಮ್ಮಪ್ಪ ದೇಗುಲಕ್ಕೆ ನಟ ಮೋಹನ್ ಬಾಬು ಬಾಸ್?

  By ಜೇಮ್ಸ್ ಮಾರ್ಟಿನ್
  |

  ಜಗದೇಕ ಒಡೆಯ, ಅತ್ಯಂತ ಶ್ರೀಮಂತ ದೇಗುಲ ತಿರುಪತಿ ತಿರುಮಲದ ಉಸ್ತುವಾರಿ ಯಾರಾಗಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ. ಈ ನಡುವೆ ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಬೋರ್ಡ್ ನ ಮುಖ್ಯಸ್ಥ ಸ್ಥಾನಕ್ಕೆ ನಟ ಮೋಹನ್ ಬಾಬು ಅವರನ್ನು ಆಯ್ಕೆ ಮಾಡಲಾಗುತ್ತದೆ ಎಂಬ ಸುದ್ದಿ ದಟ್ಟವಾಗಿದೆ.

  ಜಗನ್ ರೆಡ್ಡಿಯಿಂದ ಐತಿಹಾಸಿಕ ನಿರ್ಣಯ, ಆಂಧ್ರಕ್ಕೆ 5 ಡಿಸಿಎಂಗಳು

  ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಸಂಬಂಧಿಕರಾದ ಮೋಹನ್ ಬಾಬು ಅವರಿಗೆ ಈ ಪ್ರತಿಷ್ಠಿತ ಹುದ್ದೆ ಸುಲಭವಾಗಿ ದಕ್ಕಲಿದೆ ಎಂದೇ ಎಲ್ಲರೂ ಭಾವಿಸಿದ್ದಾರೆ. ಆದರೆ, ಈ ಬಗ್ಗೆ ಯಾವುದೇ ನಿರ್ಧಾರವನ್ನು ಜಗನ್ ರೆಡ್ಡಿ ಪ್ರಕಟಿಸಿಲ್ಲ, ಪೊಲೀಸ್ ಇಲಾಖೆ ಉನ್ನತಾಧಿಕಾರಿಗಳನ್ನು ಬದಲಾಯಿಸಿದ್ದು, ಸದ್ಯ ಸಚಿವ ಸಂಪುಟ ವಿಸ್ತರಣೆ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

  ವೈಎಸ್ ಜಗನ್ ಅವರ ಕಸಿನ್ ವಿರಾನಿಕಾ ಅವರನ್ನು ಮೋಹನ್ ಬಾಬು ಅವರ ಪುತ್ರ ವಿಷ್ಣು ಮಂಚು ವರಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ವೈಎಸ್ ಜಗನ್ ರೆಡ್ಡಿ ಪರ ಪ್ರಚಾರ ಕೈಗೊಂಡಿದ್ದ ಮೋಹನ್ ಬಾಬು ಅವರು, ಎನ್ ಚಂದ್ರಬಾಬು ನಾಯ್ಡು ವಿರುದ್ಧ ವಾಕ್ಸಮರ ನಡೆಸಿದ್ದರು.

  ಮೈಕೊಡವಿಗೊಂಡು ಎದ್ದ ಪವನ್, ಪಕ್ಷದ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್ಮೈಕೊಡವಿಗೊಂಡು ಎದ್ದ ಪವನ್, ಪಕ್ಷದ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್

  ಟಿಟಿಡಿ ಹುದ್ದೆ ಸಿಗಲಿದೆ ಎಂಬ ಸುದ್ದಿಯ ಬಗ್ಗೆ ಪ್ರತಿಕ್ರಿಯಿಸಿರುವ ಮೋಹನ್ ಬಾಬು, 'ನನಗೂ ಈ ಬಗ್ಗೆ ತಿಳಿದು ಬಂದಿದೆ. ಅನೇಕ ಮಂದಿ ಕರೆ ಮಾಡಿ ಇದು ನಿಜವೇ ಎಂದು ಪ್ರಶ್ನಿಸಿದ್ದಾರೆ. ನನ್ನ ಆಸೆ ಜಗನ್ ಅವರನ್ನು ಮುಖ್ಯಮಂತ್ರಿಯಾಗಿ ನೋಡುವುದು ಮಾತ್ರ ಆಗಿತ್ತು. ಇದಕ್ಕಾಗಿ ಶ್ರಮಿಸಿದ್ದೇನೆ, ಆದರೆ, ಇದರ ಪ್ರತಿಫಲವಾಗಿ ಯಾವುದೇ ಹುದ್ದೆಯನ್ನು ಅಪೇಕ್ಷಿಸಿಲ್ಲ, ಯಾವ ಹುದ್ದೆಗಾಗಿ ಲಾಬಿ ನಡೆಸುವುದಿಲ್ಲ' ಎಂದು ಪ್ರತಿಕ್ರಿಯಿಸಿದ್ದಾರೆ.

  English summary
  Speculations are rife that actor Mohan Babu will be offered the post of chairman of Tirumala Tirupathi Devasthanam (TTD) board, a very coveted post.Mohan Babu is relative of CM Jagan. His son Vishnu Manchu married YS Jagan’s cousin Viranica.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X