Just In
Don't Miss!
- Automobiles
ಬಿಡುಗಡೆಗೆ ಸಜ್ಜಾಗುತ್ತಿದೆ 2021ರ ಮಾರುತಿ ಎಕ್ಸ್ಎಲ್5 ಕಾರು
- Sports
ನೇಥನ್ ಲಿಯಾನ್ಗೆ ಅವಿಸ್ಮರಣೀಯ ಉಡುಗೊರೆ ಕೊಟ್ಟ ಅಜಿಂಕ್ಯ ರಹಾನೆ
- News
ನಮಗೆ ಮಾತ್ರ ಏಕೆ ಕೋವ್ಯಾಕ್ಸಿನ್ ಲಸಿಕೆ?: ಸರ್ಕಾರಕ್ಕೆ ನಿವಾಸಿ ವೈದ್ಯರ ಪ್ರಶ್ನೆ
- Lifestyle
ಚೀನಾದ ಐಸ್ ಕ್ರೀಮ್ ನಲ್ಲಿ ಕೊರೊನಾ ವೈರಸ್ ಪತ್ತೆ!!!
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- Education
NBT Recruitment 2021: 26 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮತ್ತೆ ಕನ್ನಡಕ್ಕೆ ಬಂದ 'ಮನಸೆಲ್ಲಾ ನೀನೆ' ನಟ ನಾಗೇಂದ್ರ ಪ್ರಸಾದ್
'ಮನಸೆಲ್ಲಾ ನೀನೆ' ಸಿನಿಮಾವನ್ನು ಕನ್ನಡ ಸಿನಿಪ್ರೇಮಿಗಳು ಮರೆತಿರಲಿಕ್ಕಿಲ್ಲ. ತೆಲುಗಿನಲ್ಲಿ ಹಿಟ್ ಆಗಿದ್ದ 'ಮನಸಂತಾ ನೂವೆ' ಸಿನಿಮಾದ ಕನ್ನಡ ರೀಮೇಕ್ ಆದ ಈ ಸಿನಿಮಾ ಕನ್ನಡದಲ್ಲಿಯೂ ಸಖತ್ ಹಿಟ್ ಆಗಿತ್ತು.
ಸಿನಿಮಾದ ನಾಯಕ ಪ್ರಸಾದ್ ಅಲಿಯಾಸ್ ನಾಗೇಂದ್ರ ಪ್ರಸಾದ್ ತಮ್ಮ ಅಮಾಯಕ ಭಾವದ ಅಭಿನಯ, ಅದ್ಭುತವಾದ ಡಾನ್ಸ್ ನಿಂದ ಎಲ್ಲರ ಗಮನ ಸೆಳೆದಿದ್ದರು. ಆದರೆ ಅದ್ಯಾಕೊ ಏನೊ ಕನ್ನಡದಲ್ಲಿ ಅದೇ ಅವರ ಕೊನೆಯ ಸಿನಿಮಾ ಆಗಿಬಿಟ್ಟಿತು.
ಆದರೆ ಈಗ ಅದೇ ನಾಗೇಂದ್ರ ಪ್ರಸಾದ್ ಕನ್ನಡಕ್ಕೆ ವಾಪಸ್ ಬಂದಿದ್ದಾರೆ. ಆದರೆ ಈ ಬಾರಿ ನಟನಾಗಿ ಅಲ್ಲದೆ ನಿರ್ದೇಶಕನಾಗಿ ಬಂದಿದ್ದಾರೆ. ಕನ್ನಡದಲ್ಲಿ ಸಿನಿಮಾವೊಂದನ್ನು ನಿರ್ದೇಶಿಸಲಿದ್ದಾರೆ ನಾಗೇಂದ್ರ ಪ್ರಸಾದ್.
ತಮಿಳಿನಲ್ಲಿ ಈಗಾಗಲೇ ಹಿಟ್ ಆಗಿರುವ ಕಾಮಿಡಿ-ಪ್ರೇಮಕತಾ ಸಿನಿಮಾ 'ಓಹ್ ಮೈ ಕಡವಲೆ' ಸಿನಿಮಾವನ್ನು ಕನ್ನಡಕ್ಕೆ ತರುತ್ತಿದ್ದಾರೆ ಪ್ರಸಾದ್. ನಟ-ನಟಿಯರು ಇನ್ನೂ ಅಂತಿಮವಾಗಿಲ್ಲ, ಆದರೆ ಕೆಲವು ಹೆಸರಾಂತ ನಟ-ನಟಿಯರ ಹೆಸರನ್ನು ಪಟ್ಟಿಮಾಡಿಕೊಂಡಿದ್ದಾರಂತೆ ನಾಗೇಂದ್ರಪ್ರಸಾದ್.

ತಮಿಳಿನಲ್ಲಿ ಹಿಟ್ ಸಿನಿಮಾ 'ಓಹ್ ಮೈ ಕಡವುಲೆ'
ತಮಿಳಿನಲ್ಲಿ ಓಹ್ ಮೈ ಕಡವುಲೆ ಸಿನಿಮಾದಲ್ಲಿ ಅಶೋಕ್ ಸೆಲ್ವನ್, ರಿತಿಕಾ ಸಿಂಗ್, ಶಾ ರಾ, ರಮೇಶ್ ತಾಯಿಕ್ ನಟಿಸಿದ್ದಾರೆ. ಸಿನಿಮಾದಲ್ಲಿ ವಿಜಯ್ ಸೇತುಪತಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾವನ್ನು ಅಶ್ವತ್ಥ ಮಾರಿಮುತ್ತು ನಿರ್ದೇಶಿಸಿದ್ದಾರೆ.

ನೃತ್ಯ ನಿರ್ದೇಶಕನಾಗಿ ಯಶಸ್ವಿಯಾಗಿರುವ ನಾಗೇಂದ್ರ ಪ್ರಸಾದ್
ಜೀನ್ಸ್, ಚಾಕಲೇಟ್, ಮಿನ್ನಲೆ, ಉದಯಂ ಎನ್‌ಎಚ್ 4 ಇನ್ನೂ ಹಲವು ಸಿನಿಮಾಗಳಿಗೆ ನೃತ್ಯ ನಿರ್ದೇಶಕನಾಗಿ ಕೆಲಸ ಮಾಡಿರುವ ನಾಗೇಂದ್ರ ಪ್ರಸಾದ್, ಪ್ರಸ್ತುತ ವಿಜಯ್ ಸೇತುಪತಿ ನಟನೆಯ 'ಲಾಭಂ' ಕಂಗನಾ ನಟನೆಯ 'ತಲೈವಿ' ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ.

'ಅನುಭವ ಗಳಿಸಿದ ಬಳಿಕವೇ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದೇನೆ'
ಸಾಕಷ್ಟು ಸಿನಿಮಾಗಳಿಗೆ ನೃತ್ಯ ನಿರ್ದೇಶಕನಾಗಿ ಹಾಗೂ ಅಣ್ಣ ಪ್ರಭುದೇವಾ ನಿರ್ದೇಶಿಸುವ ಸಿನಿಮಾಗಳಿಗೆ ಸಹಾಯಕನಾಗಿ ಕೆಲಸ ಮಾಡಿದ್ದೇನೆ. ಸೂಕ್ತ ಅನುಭವ ಗಳಿಸಿದ ಬಳಿಕವೇ ನಿರ್ದೇಶನ ಆರಂಭಿಸಬೇಕು ಎಂದುಕೊಂಡಿದ್ದೆ ಈಗ ಅನುಭವ ದೊರೆತಿದ್ದು, ಮೊದಲ ಸಿನಿಮಾ ನಿರ್ದೇಶನ ಮಾಡಲು ತಯಾರಿ ಆರಂಭಿಸಿದ್ದೇನೆ ಎಂದಿದ್ದಾರೆ ನಾಗೇಂದ್ರಪ್ರಸಾದ್.

ಕನ್ನಡದಲ್ಲಿ ಕೆಲವು ಸಿನಿಮಾಗಳಲ್ಲಿ ನಟನೆ
ಕನ್ನಡಿಗ ಮೂಗೂರು ಸುಂದರಂ ಮಗನಾಗಿರುವ, ಡಾನ್ಸ್ ಮಾಸ್ಟರ್‌ಗಳಾದ ಪ್ರಭುದೇವಾ, ರಾಜಸುಂದರಂ ಅವರುಗಳ ಕಿರಿಯ ತಮ್ಮ ಪ್ರಸಾದ್ ಕನ್ನಡದಲ್ಲಿ ಚಿತ್ರ, 123, ಮನಸೆಲ್ಲಾ ನೀನೆ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳಿನಲ್ಲಿ ಸಹ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ನಾಗೇಂದ್ರ ಪ್ರಸಾದ್.