twitter
    For Quick Alerts
    ALLOW NOTIFICATIONS  
    For Daily Alerts

    ಸಹಾಯಕ್ಕೆ ಮನವಿ ಮಾಡಿದವರಿಗೆ ಆಗುವುದಿಲ್ಲ ಎಂದ ನಾಯಕ ನಟ

    |

    ಕೊರೊನಾ ಸಂಕಷ್ಟದ ಸ್ಥಿತಿಯಲ್ಲಿ ಸಿನಿಮಾರಂಗದವರು ತಮ್ಮ ತಮ್ಮ ಶಕ್ತ್ಯಾನುಸಾರ ಸಹಾಯ ಮಾಡಿದ್ದಾರೆ, ಈಗಲೂ ಮಾಡುತ್ತಿದ್ದಾರೆ. ಆದರೆ ತೆಲುಗಿನ ನಾಯಕ ನಟನೊಬ್ಬ ಮಾತ್ರ ಸಹಾಯ ಮಾಡಿ ಎಂದು ಮನವಿ ಮಾಡಿದವರಿಗೆ 'ಆಗುವುದಿಲ್ಲ' ಎಂದು ನೇರವಾಗಿ ಹೇಳಿದ್ದಾರೆ.

    ಹಲವು ತೆಲುಗು ಸಿನಿಮಾಗಳಲ್ಲಿ ನಾಯಕ ನಟನಾಗಿ ನಟಿಸಿರುವ ನವದೀಪ್‌ಗೆ ಹಲವರು ಸಹಾಯ ಕೇಳಿ ಸಂದೇಶಗಳನ್ನು ಕಳಿಸುತ್ತಿದ್ದಾರಂತೆ ಆದರೆ 'ನನಗೆ ಸಹಾಯ ಮಾಡಲು ಆಗುತ್ತಿಲ್ಲ' ಎಂದು ಸಾಮಾಜಿಕ ಜಾಲತಾಣ ಮೂಲಕ ನವದೀಪ್ ಹೇಳಿದ್ದಾರೆ.

    'ಹಲವಾರು ಮಂದಿ ಆರ್ಥಿಕ ಸಹಾಯ, ವೈದ್ಯಕೀಯ ಸಹಾಯ ಕೋರಿ ಸಂದೇಶಗಳನ್ನು ಕಳಿಸುತ್ತಿದ್ದಾರೆ. ಆದರೆ ನನಗೆ ಸಹಾಯ ಮಾಡಲು ಆಗುತ್ತಿಲ್ಲ. ಈ ವಿಷಯ ಹೇಳಲು ನನಗೆ ಹೃದಯ ಒಡೆಯುತ್ತದೆ' ಎಂದಿದ್ದಾರೆ ನವದೀಪ್.

    Actor Navdeep Said He Can Not Help People Who Were Approaching Him for Help

    ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವಿನ ವೈಮಸ್ಯದ ಬಗ್ಗೆ ಅಸಮಾಧಾನ ಹೊರಹಾಕಿರುವ ನವದೀಪ್, 'ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಿನ ಸಂಬಂಧ ಸೂಕ್ತವಾಗಿಲ್ಲ' ಎಂದಿದ್ದಾರೆ ನವದೀಪ್.

    ನವದೀಪ್ ಕಳೆದ ಬಾರಿ ಲಾಕ್‌ಡೌನ್ ಸಮಯದಲ್ಲಿ ಸಾಕಷ್ಟು ಸಹಾಯ ಮಾಡಿದ್ದರು. ಆದರೆ ಈ ಬಾರಿ ಸ್ವತಃ ಅವರೇ ಸಹಾಯ ಮಾಡುವ ಸ್ಥಿತಿಯಲ್ಲಿಲ್ಲ ಎನ್ನಲಾಗುತ್ತಿದೆ. ದಶಕದ ಹಿಂದೆ ನಾಯಕನಾಗಿ ಒಳ್ಳೆಯ ಹೆಸರು ಮಾಡಿದ್ದ ನವದೀಪ್‌ಗೆ ನಿಧಾನಕ್ಕೆ ಅವಕಾಶಗಳು ಕಡಿಮೆಯಾದವು. ಪ್ರಸ್ತುತ ವಿಲನ್, ಹೀರೋನ ಗೆಳೆಯನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ ನವದೀಪ್. ಜೊತೆಗೆ ಟಿವಿ ಶೋಗಳಲ್ಲಿ ಜಡ್ಜ್ ಆಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ.

    Recommended Video

    ಕೊರೊನಾ ಪಾಸಿಟಿವ್ ಬಂದಿರೋ ಮಕ್ಕಳನ್ನು ಮನೆಯಲ್ಲಿ ಕೇರ್ ಮಾಡೋದು ಹೇಗೆ? | Filmibeat Kannada

    ತೆಲುಗು ಖ್ಯಾತ ನಟ ಚಿರಂಜೀವಿ ಅವರು ಸಿನಿಮಾ ಕರ್ಮಿಗಳಿಗೆಲ್ಲಾ ಉಚಿತವಾಗಿ ಕೊರೊನಾ ಲಸಿಕೆ ವಿತರಣೆ ಮಾಡುತ್ತಿದ್ದಾರೆ. ಈ ಹಿಂದೆಯೂ ಕೊರೊನಾ ವಿರುದ್ಧ ಹೋರಾಟಕ್ಕೆ ಸರ್ಕಾರಕ್ಕೆ ದೊಡ್ಡ ಮೊತ್ತವನ್ನು ದೇಣಿಗೆಯಾಗಿ ನೀಡಿದ್ದರು ಚಿರಂಜೀವಿ. ಚಿರಂಜೀವಿ ಮಾತ್ರವೇ ಅಲ್ಲದೆ ತೆಲುಗಿನ ಸಾಕಷ್ಟು ಮಂದಿ ನಟರು ಕೊರೊನಾ ವಿರುದ್ಧ ಹೋರಾಟಕಕೆ ಬೆಂಬಲ ನೀಡಿದ್ದಾರೆ.

    English summary
    Navdeep said many people approaching him for financial and medical help but he said 'I can not help'.
    Friday, April 23, 2021, 23:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X