»   » ಕನ್ನಡದ 'ರಿವಾಲ್ವರ್ ರಾಣಿ' ಆಗಲಿದ್ದಾರಾ ನೀತೂ?

ಕನ್ನಡದ 'ರಿವಾಲ್ವರ್ ರಾಣಿ' ಆಗಲಿದ್ದಾರಾ ನೀತೂ?

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಬಬ್ಲಿ ತಾರೆ ನೀತೂ ಒಂದು ಭರ್ಜರಿ ಬ್ರೇಕ್ ನಿರೀಕ್ಷೆಯಲ್ಲಿದ್ದಾರೆ. ಇದೀಗ ಆ ರೀತಿಯ ಪಾತ್ರವೊಂದು ಅವರ ಪಾಲಿಗೆ ಪಂಚಾಮೃತವಾಗುವ ಎಲ್ಲಾ ಸೂಚನೆಗಳನ್ನೂ ಕೊಟ್ಟಿದೆ. ಬಾಲಿವುಡ್ ನಲ್ಲಿ ಇತ್ತೀಚೆಗೆ ಬಿಡುಗಡೆಯಾದ 'ರಿವಾಲ್ವರ್ ರಾಣಿ' ಚಿತ್ರವನ್ನು ಕನ್ನಡಕ್ಕೆ ರೀಮೇಕ್ ಮಾಡಿದರೆ ತಾನು ಆ ಪಾತ್ರಕ್ಕೆ ನ್ಯಾಯ ಸಲ್ಲಿಸುತ್ತೇನೆ ಎಂದಿದ್ದಾರೆ ನೀತೂ.

ಗಾಂಧಿನಗರ ಮೂಲಗಳ ಪ್ರಕಾರ ನೀತೂ ಅವರು ಕನ್ನಡದ 'ರಿವಾಲ್ವರ್ ರಾಣಿ' ಆಗಲಿದ್ದಾರೆ. ಕಂಗನಾ ರನೌತ್ ಅವರು 'ರಿವಾಲ್ವರ್ ರಾಣಿ' ಚಿತ್ರದಲ್ಲಿ ಪ್ರೇಕ್ಷಕರನ್ನು ಬೆರಗಾಗಿಸುವ ಅಭಿನಯ ನೀಡಿದ್ದರು. ಇದೀಗ ಕನ್ನಡದಲ್ಲಿ ನೀತೂ ಅದೇ ಮೋಡಿ ಮಾಡಲು ಹೊರಟಿದ್ದಾರೆ. [ಸ್ಯಾಂಡಲ್ ವುಡ್ ಮಂದಿ ನೀ ತೂ... ಅಂದಿದ್ಯಾಕೆ...]


ಸದ್ಯಕ್ಕೆ ನೀತೂ ಅವರು ಪೂಜಾಗಾಂಧಿ ಮುಖ್ಯಭೂಮಿಕೆಯಲ್ಲಿರುವ 'ಅಭಿನೇತ್ರಿ' ಚಿತ್ರದಲ್ಲಿ ಒಂದು ಪಾತ್ರ ಮಾಡುತ್ತಿದ್ದಾರೆ. 'ಕ್ರೇಜಿಸ್ಟಾರ್' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡು ಒಂದು ಹಾಡಿನಲ್ಲೂ ತಮ್ಮ ಸೊಂಟ ಬಳುಕಿಸಿದ್ದರು. 'ರಿಂಗ್ ರೋಡ್ ಶುಭ' ಚಿತ್ರದಲ್ಲೂ ಅವರು ಅತಿಥಿ ಪಾತ್ರ ಪೋಷಿಸುತ್ತಿದ್ದಾರೆ.

ರಿವಾಲ್ವರ್ ರಾಣಿ ಚಿತ್ರವನ್ನು ನೋಡಿರುವ ನೀತೂ ಅವರು ಕಂಗನಾ ಅವರ ಅಭಿನಯಕ್ಕೆ ಮಾರುಹೋಗಿದ್ದಾರಂತೆ. ಒಂದು ವೇಳೆ ಯಾರಾದರೂ ಈ ಚಿತ್ರವನ್ನು ಕನ್ನಡಕ್ಕೆ ತಂದರೆ ತಾನು ಖಂಡಿತ ಕಂಗನಾರ ಅಲ್ಕಾ ಸಿಂಗ್ ಪಾತ್ರಕ್ಕೆ ಜೀವ ತುಂಬುತ್ತೇನೆ ಎಂಬ ಭರವಸೆ ನೀಡಿದ್ದಾರೆ. ಆಫ್ ಕೋರ್ಸ್ ನೀತೂ ಬೋಲ್ಡ್ ತಾರೆ ಎಂಬುದು ಎಲ್ಲರಿಗೂ ಗೊತ್ತೇ ಇದೆ.

ರಾಜಕೀಯ ವಿಡಂಬನಾತ್ಮಕ ಹಾಗೂ ಒಂದು ಅಸಹಜ ಲವ್ ಸ್ಟೋರಿ ಚಿತ್ರವಾಗಿರುವ ರಿವಾಲ್ವರ್ ರಾಣಿ ಚಿತ್ರಕ್ಕೆ ಸಾಯಿ ಕಬೀರ್ ಅವರು ಆಕ್ಷನ್ ಕಟ್ ಹೇಳಿದ್ದಾರೆ. ಕಪ್ಪುಹಣ ಹಾಗೂ ರಾಜಕೀಯದ ಸುತ್ತ ಸುತ್ತುವ ಈ ಚಿತ್ರವನ್ನು ಚಂಬಲ್ ಕಣಿವೆಯಲ್ಲಿ ಚಿತ್ರಿಸಲಾಗಿದೆ. ಬಿ ಗ್ರೇಡ್ ಎಂಟರ್ ಟೈನ್ ಮೆಂಟ್ ಚಿತ್ರವಾಗಿರುವ ಇದು ಪಕ್ಕಾ ಮನರಂಜನಾ ಚಿತ್ರ ಎಂಬುದು ವಿಶೇಷ. (ಏಜೆನ್ಸೀಸ್)

English summary
If sources from Gandhinagara are to believed then Neetu will turn 'Revolver Rani' of Sandalwood, in the Kannada remake of Bollywood's recent release Revolver Rani. I liked the gritty nature of the movie and of course Kangana's acting," said Neetu.
Please Wait while comments are loading...