ಕನ್ನಡದ ಸ್ಟಾರ್ ನಟನ ಮಗಳ ಸ್ಟೈಲಿಶ್ ಫೋಟೋಶೂಟ್ ವೈರಲ್
'ನೆನಪಿರಲಿ' ಪ್ರೇಮ್ ಮಗಳು ಅಮೃತಾ ಸಿನಿ ಇಂಡಸ್ಟ್ರಿ ಪ್ರವೇಶ ಸಜ್ಜಾಗಿದ್ದಾರೆ ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಅದಕ್ಕೆ ಕಾರಣ, ಪ್ರೇಮ್ ಮಗಳ ಸ್ಟೈಲಿಶ್ ಫೋಟೋಶೂಟ್.
Recommended Video

ಅಮೃತಾ ಪ್ರೇಮ್ ಅವರ ಫೋಟೋಶೂಟ್‌ನ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ. ಸ್ವತಃ ಪ್ರೇಮ್ ಅವರೇ ತಮ್ಮ ಮಗಳು ಫೋಟೋ ಹಂಚಿಕೊಂಡಿದ್ದು ''ಮಗಳೆಂದರೆ ತಂದೆಗೆ ದೇವತೆಯಂತೆ'' ಎಂದಿದ್ದಾರೆ.
''ಮಗಳೆಂದರೆ ತಂದೆಗೆ ದೇವತೆಯಂತೆ. ದೇವತೆಯನ್ನು ಪಡೆಯುವ ಅದೃಷ್ಟ ಎಲ್ಲ ತಂದೆಯರಿಗೂ ಸಿಗುವುದಿಲ್ಲ.. ಅಭಿನಂದನೆಗಳು ನನ್ನ ಅದೃಷ್ಟದ ದೇವತೆಗೆ..'' ಎಂದು ಕ್ಯಾಪ್ಷನ್ ಹಾಕಿದ್ದಾರೆ.

ಅಂದ್ಹಾಗೆ, ಅಮೃತಾ ಈ ಫೋಟೋಶೂಟ್ ಏಕೆ ಮಾಡಿಸಿದ್ದಾರೆ ಎನ್ನುವುದಕ್ಕೆ ಉತ್ತರ ಇಲ್ಲ. ಯಾವ ವಿಶೇಷ ಕಾರಣದಿಂದ ಈ ಫೋಟೋಶೂಟ್ ಮಾಡಲಾಗಿದೆ ಎಂಬ ಕುತೂಹಲ ಅಭಿಮಾನಿಗಳು ಕಾಡುತ್ತಿದೆ.
ಪ್ರೇಮ್ ಮಗಳ ಫೋಟೋಶೂಟ್ ನೋಡಿದ ಅಭಿಮಾನಿಗಳು ''ತುಂಬಾ ಚೆನ್ನಾಗಿದ್ದಾರೆ, ಮುದ್ದಾಗಿದ್ದಾರೆ ಪ್ರೇಮ್ ಸರ್'' ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಸಿನಿಮಾ ಇಂಡಸ್ಟ್ರಿ ಪ್ರವೇಶ ಮಾಡಲು ತಯಾರಿ ನಡೆಸುತ್ತಿದ್ದಾರಾ ಎಂದು ಪ್ರಶ್ನಿಸುತ್ತಿದ್ದಾರೆ.

ಸದ್ಯಕ್ಕೆ ಅಮೃತಾ ಪ್ರೇಮ್ ಸಿನಿಮಾ ಜಗತ್ತಿಗೆ ಪ್ರವೇಶ ಮಾಡುವುದು ಅನುಮಾನ. ಏಕಂದ್ರೆ ಅವರು ಕಳೆದ ವರ್ಷವಷ್ಟೇ ದ್ವಿತೀಯ ಪಿಯುಸಿ ಮುಗಿಸಿದ್ದರು. ದ್ವಿತೀಯ ಪಿಯುಸಿಯಲ್ಲಿ ಪರೀಕ್ಷೆಯಲ್ಲಿ 91 % ಅಂಕ ಪಡೆದು ಉತ್ತೀರ್ಣರಾಗಿದ್ದರು. ಪ್ರೇಮ್ ಪುತ್ರ ಏಕಾಂತ್ ಕಳೆದ ವರ್ಷ ಎಂಟನೇ ತರಗತಿಯಲ್ಲಿ 3ನೇ ರಾಂಕ್ ಪಡೆದುಕೊಂಡಿದ್ದರು.


Click it and Unblock the Notifications











