For Quick Alerts
  ALLOW NOTIFICATIONS  
  For Daily Alerts

  ನಿಖಿಲ್ ಕುಮಾರ್ 'ಜಾಗ್ವಾರ್' ಚಿತ್ರಕ್ಕೆ ಹಾಲಿವುಡ್ ಟಚ್

  By Suneetha
  |

  ನಟ ನಿಖಿಲ್ ಕುಮಾರ್ ಅಭಿನಯದ ಚೊಚ್ಚಲ ಸಿನಿಮಾ 'ಜಾಗ್ವಾರ್' ಚಿತ್ರದ ಶೂಟಿಂಗ್ ಭರ್ಜರಿಯಾಗಿ ಸಾಗುತ್ತಿದೆ. ಜೊತೆಗೆ ಚಿತ್ರೀಕರಣದ ಗುಣಮಟ್ಟದ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದಿರುವ ಚಿತ್ರತಂಡ ಚಿತ್ರದಲ್ಲಿ ಹಲವಾರು ವಿಶೇಷತೆಗಳನ್ನು ಅಳವಡಿಸಿಕೊಂಡಿದೆ.

  ಅಂದಹಾಗೆ 'ಜಾಗ್ವಾರ್' ಚಿತ್ರದ ತಂತ್ರಜ್ಞಾನ ಹಾಲಿವುಡ್ ಚಿತ್ರದ ಮಾದರಿಯಲ್ಲಿದೆ ಎಂಬ ಮಾತುಗಳು ಎಲ್ಲಾ ಕಡೆಯಿಂದಲೂ ಕೇಳಿ ಬರುತ್ತಿದೆ. ಹಾಲಿವುಡ್ ಚಿತ್ರಗಳಾದ 'ಟ್ರಾಯ್', 'ಹೊಬ್ಬಿಟ್' ಮತ್ತು '300' ಎಂಬ ಬಿಗ್ ಬಜೆಟ್ ನ ಚಿತ್ರಗಳಿಗೆ ಕಾಸ್ಟ್ಯೂಮ್ ಹಾಗೂ ಸೆಟ್ ಹಾಕಿರುವ ನ್ಯೂಜಿಲೆಂಡ್ ನ ವೆಟಾ ವರ್ಕ್ ಶಾಪ್ ಎಂಬ ಸಂಸ್ಥೆ ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ.[ಸದ್ದಿಲ್ಲದೇ ಎಚ್.ಡಿ.ಕುಮಾರಸ್ವಾಮಿ ವಿದೇಶಕ್ಕೆ ಹಾರಿದ್ದು ಯಾಕೆ?]

  ಎಸ್ ಎಸ್ ರಾಜಮೌಳಿ ಅವರ ಶಿಷ್ಯ ಮಹದೇವ್ ಅವರು ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ನಟ ನಿಖಿಲ್ ಕುಮಾರ್ ಅವರು ಪಕ್ಕಾ ಸೂಪರ್ ಹೀರೋ ರೀತಿ ಕಾಣಿಸುತ್ತಿದ್ದಾರೆ. ಸುಮಾರು 14 ಕೆ.ಜಿ ತೂಕದ ವಿಶೇಷ ಸೂಟ್ ಒಂದನ್ನು ನಿಖಿಲ್ ಅವರಿಗೋಸ್ಕರ ಅಂತಾನೇ ತಯಾರಿಸಲಾಗಿದೆ. ಈ ಗೆಟಪ್ ನಲ್ಲಿ ನಟ ನಿಖಿಲ್ ಅವರು ಥೇಟ್ ಸೂಪರ್ ಮ್ಯಾನ್ ತರ ಕಾಣಿಸುತ್ತಿದ್ದಾರೆ.

  ಇನ್ನು ನಿಖಿಲ್ ಅವರಿಗೆ ಈ ವಿಭಿನ್ನ ಸೂಟ್ ತಯಾರಿಸಲು ತಂತ್ರಜ್ಞರು ಸಾಕಷ್ಟು ಪರಿಶ್ರಮ ಪಟ್ಟಿದ್ದು, ಮೊದಲು ನಿಖಿಲ್ ಕುಮಾರ್ ಅವರ ದೇಹದ ಅಚ್ಚು ತಯಾರಿಸಿ ಆ ಬಳಿಕ ಪ್ರಾಸ್ಟರ್ ಆಫ್ ಪ್ಯಾರಿಸ್ ಮತ್ತು ಸಿಂಥೆಟಿಕ್ ರಬ್ಬರ್ ನಿಂದ ಸೂಟ್ ತಯಾರಿಸಲಾಗಿದೆ.['ಜಾಗ್ವಾರ್' ತಂಡದಿಂದ ಯುಗಾದಿಗೆ ಸ್ಪೆಷಲ್ ಗಿಫ್ಟ್]

  ಬಹುತೇಕ ಆಕ್ಷನ್ ದೃಶ್ಯಗಳಲ್ಲಿ ಈ ವಿಶೇಷ ಸೂಟ್ ಅನ್ನು ನಿಖಿಲ್ ಕುಮಾರ್ ಅವರು ಧರಿಸಿದ್ದಾರೆ. ಈ ಸೂಟ್ ನಿಖಿಲ್ ಅವರಿಗೆ ತುಂಬಾನೇ ಬೆವರಿಳಿಸಿದೆಯಂತೆ, ಜೀವಮಾನದಲ್ಲಿ ಇಷ್ಟು ಬೆವರು ಇಳಿಸಲಿಲ್ಲ ಎನ್ನುತ್ತಾರೆ ನಿಖಿಲ್ ಕುಮಾರ್.

  'ಜಾಗ್ವಾರ್' ಚಿತ್ರದಲ್ಲಿ ನಟ ನಿಖಿಲ್ ಅವರು ಎರಡು ಶೇಡ್ ನಲ್ಲಿ ಮಿಂಚಿದ್ದು, ಒಂದು ವೈದ್ಯಕೀಯ ವಿದ್ಯಾರ್ಥಿ ಶೇಡ್ ನಲ್ಲಿ ಮಿಂಚಿದರೆ, ಇನ್ನೊಂದು 'ಜಾಗ್ವಾರ್' ಹೆಸರಿನ ಸೂಪರ್ ಹೀರೋ ಆಗಿದ್ದಾರೆ. ಸೂಪರ್ ಹೀರೋ ಆಗಲು ನಿಖಿಲ್ ಅವರು ಕುದುರೆ ಸವಾರಿ, ಮಾರ್ಷಲ್ ಆರ್ಟ್ಸ್ ತರಬೇತಿ ಪಡೆದು ತಮ್ಮ ದೇಹವನ್ನು ಹುರಿಗೊಳಿಸಿ ಸಿದ್ಧವಾಗಿದ್ದಾರೆ.[ಆಗಸ್ಟ್ ನಲ್ಲಿ 'ಜಾಗ್ವಾರ್' ಅಬ್ಬರ ಶುರುವಾಗುತ್ತೆ ಕಣ್ರೀ]

  ವಿಶೇಷ ಏನಪ್ಪಾ ಅಂದ್ರೆ 'ಜಾಗ್ವಾರ್' ಚಿತ್ರದ ಆಂಧ್ರದ ವಿತರಣಾ ಹಕ್ಕನ್ನು ಪಿವಿಪಿ ಎಂಬ ದೊಡ್ಡ ಬ್ಯಾನರ್ ಸಂಸ್ಥೆ ಪಡೆದುಕೊಂಡಿದ್ದು, ಚಿತ್ರವನ್ನು ತೆಲುಗಿನಲ್ಲೂ ಡಬ್ ಮಾಡಿ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡಲಿದ್ದಾರೆ. (ಚಿತ್ರದ ಸ್ಟಿಲ್ಸ್ ನೋಡಿ ಸ್ಲೈಡುಗಳಲ್ಲಿ...)

  -ನಟ ನಿಖಿಲ್ ಕುಮಾರ್

  -ಎಸ್ ಎಸ್ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್: 'ಜಾಗ್ವಾರ್' ಕಥೆಗಾರ

  -ಸೆಟ್ ನಲ್ಲಿ ತಂದೆ-ಮಗನ ಆಪ್ತ ಸಮಾಲೋಚನೆ

  -ನಟ ನಿಖಿಲ್ ಕುಮಾರ್

  -ಸ್ಟಂಟ್ ಮಾಸ್ಟರ್ ರವಿವರ್ಮಾ ಜೊತೆ ನಟ ನಿಖಿಲ್ ಕುಮಾರ್

  -ತಾಯಿ ಅನಿತಾ ಕುಮಾರಸ್ವಾಮಿ ಜೊತೆ ನಿಖಿಲ್ ಕುಮಾರ್

  -ತಂದೆ ಹಾಗೂ ಚಿತ್ರತಂಡದ ಜೊತೆ ಸೆಟ್ ನಲ್ಲಿ ನಿಖಿಲ್ ಕುಮಾರ್

  -ಸೆಟ್ ನಲ್ಲಿ ನಿಖಿಲ್ ಕುಮಾರ್

  -ವರ್ಕೌಟ್ ಮಾಡುತ್ತಿರುವ ನಿಖಿಲ್ ಕುಮಾರ್

  -ವರ್ಕೌಟ್ ಮಾಡುತ್ತಿರುವ ನಿಖಿಲ್ ಕುಮಾರ್

  English summary
  Kannada Actor Nikhil Kumar wearing a tight, jacketed suit for Kannada Movie 'Jaguar'. Actress Deepthi Sati in the lead role. The movie is directed by A Mahadev.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X