For Quick Alerts
  ALLOW NOTIFICATIONS  
  For Daily Alerts

  ಜನಸಾಮಾನ್ಯರ ಸಂಕಷ್ಟಗಳಿಗೆ ಸದಾ ಮಿಡಿಯುವ ಸಹೃದಯಿ ಕುಮಾರಣ್ಣ- ತಂದೆಗೆ ವಿಶ್ ಮಾಡಿದ ನಿಖಿಲ್

  |

  ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಗೆ ಇಂದು (ಡಿ.16) ಹುಟ್ಟುಹಬ್ಬದ ಸಂಭ್ರಮ. ಅನೇಕ ರಾಜಕೀಯ ಗಣ್ಯರು ಕುಮಾರಣ್ಣನ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸುತ್ತಿದ್ದಾರೆ. ಪ್ರಧಾನಿ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಸಾಮಾಜಿಕ ಜಾಲತಾಣದ ಮೂಲಕ ವಿಶ್ ಮಾಡುತ್ತಿದ್ದಾರೆ.

  ಕುಮಾರಣ್ಣನಿಗೆ ವಿಶ್ ಮಾಡಿದ Modi, Yeddyurappa | Filmibeat Kannada

  ವಿಶೇಷ ಎಂದರೆ ಕುಮಾರಸ್ವಾಮಿ ಹುಟ್ಟುಹಬ್ಬಕ್ಕೆ ಪ್ರೀತಿಯ ಪುತ್ರ ನಿಖಿಲ್ ಕುಮಾರಸ್ವಾಮಿ ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ಕೋರಿದ್ದಾರೆ. ಅಪ್ಪ ಕುಮಾರಸ್ವಾಮಿಗೆ ನಿಖಿಲ್ ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ. ತಂದೆಯ ಜೊತೆ ಇರುವ ಸುಂದರ ಫೋಟೋವನ್ನು ಶೇರ್ ಮಾಡುವ ಮೂಲಕ ತಂದೆಗೆ ವಿಶ್ ಮಾಡಿದ್ದಾರೆ.

  ಸಿನಿಮಾ ಹಾಗೂ ರಾಜಕೀಯ: ಮಂಡ್ಯದಲ್ಲಿ ನಿಖಿಲ್ ಮಾತುಸಿನಿಮಾ ಹಾಗೂ ರಾಜಕೀಯ: ಮಂಡ್ಯದಲ್ಲಿ ನಿಖಿಲ್ ಮಾತು

  'ರಾಜ್ಯದ ಅಭಿವೃದ್ಧಿ, ರೈತರ ಕಲ್ಯಾಣ, ಜನಸಾಮಾನ್ಯರ ಸಂಕಷ್ಟಗಳಿಗೆ ಸದಾ ಮನಮಿಡಿಯುವ ಸಹೃದಯಿ ರಾಜಕಾರಣಿ ಕುಮಾರಣ್ಣನವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು' ಎಂದು ಹೇಳಿದ್ದಾರೆ.

  ನಿಖಿಲ್ ವಿಶ್ ಮಾಡುತ್ತಿದ್ದಂತೆ ಅಭಿಮಾನಿಗಳು ಸಹ ಶುಭಾಶಯ ತಿಳಿಸಿ ಕಾಮೆಂಟ್ಸ್ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿಶ್ ಮಾಡಿ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಭಗವಂತನು ಉತ್ತಮ ಆರೋಗ್ಯ ನೀಡಲಿ, ದೀರ್ಘಕಾಲ ಜೀವನವನ್ನು ಕರುಣಿಸಲಿ' ಎಂದು ವಿಶ್ ಮಾಡಿದ್ದಾರೆ.

  ಇನ್ನು ಮುಖ್ಯಮಂತ್ರಿ 'ಮಾಜಿ ಮುಖ್ಯಮಂತ್ರಿಗಳು, ಆತ್ಮೀಯರೂ ಆಗಿರುವ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರ ಆಶೀರ್ವಾದ ಸದಾ ಇರಲಿ ಎಂದು ಹಾರೈಸುತ್ತೇನೆ.' ಎಂದು ಹೇಳಿದ್ದಾರೆ.

  ಕುಮಾರಸ್ವಾಮಿ ರಾಜಕೀಯದ ಜೊತೆಗೆ ಸಿನಿಮಾರಂಗದಲ್ಲೂ ಸಕ್ರೀಯರಾಗಿದ್ದಾರೆ. ಚೆನ್ನಾಂಬಿಕಾ ಫಿಲ್ಮ್ ಹೆಸರಿನಲ್ಲಿ ತನ್ನದೆ ಆದ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿ ಉತ್ತಮ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಚಂದ್ರ ಚಕೋರಿ, ಸೂರ್ಯವಂಶ ಹಾಗೂ ಪುತ್ರ ನಿಖಿಲ್ ಅಭಿನಯದ ಮೊದಲ ಸಿನಿಮಾ ಜಾಗ್ವರ್ ಮತ್ತು ಸೀತಾರಾಮ ಕಲ್ಯಾಣ ಸಿನಿಮಾಗಳನ್ನು ನಿರ್ಮಿಸುವ ಮೂಲಕ ಚಿತ್ರರಂಗದಲ್ಲೂ ಖ್ಯಾತಿಗಳಿಸಿದ್ದಾರೆ. ಇನ್ನೂ ನಿಖಿಲ್ ಸದ್ಯ ರಾಜಕೀಯದ ಜೊತೆಗೆ ಸಿನಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ನಿಖಿಲ್ ಹೊಸ ಸಿನಿಮಾ ರೈಡರ್ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ.

  English summary
  Actor Nikhil Kumar Wishes H D Kumaraswamy on his Birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X