ನಟ ಉಪೇಂದ್ರ ಅವರ ಕುಟುಂಬದ ಮತ್ತೊಬ್ಬ ಕುಡಿ ಚಿತ್ರರಂಗಕ್ಕೆ ಕಾಲಿಟ್ಟಿದೆ. ಉಪೇಂದ್ರ ಅಣ್ಣ ಸುನೀಂದ್ರ ಅವರ ಪುತ್ರ ನಿರಂಜನ್ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು, ತಮ್ಮ ಚಿಕ್ಕಮ್ಮ ಪ್ರಿಯಾಂಕಾ ಉಪೇಂದ್ರ ಅವರ ಸಿನಿಮಾದಲ್ಲಿ ನಟಿಸಿದ್ದಾರೆ.
ಪೊಲೀಸ್ ಕಾನ್ಸ್ಟೇಬಲ್ ಆಗಿ ಖದರ್ ತೋರಿಸಲಿದ್ದಾರೆ ಪ್ರಿಯಾಂಕಾ ಉಪೇಂದ್ರ!
ಪ್ರಿಯಾಂಕಾ ಉಪೇಂದ್ರ ನಟನೆಯ 'ಸೆಕೆಂಡ್ ಹಾಫ್' ಚಿತ್ರದಲ್ಲಿ ನಿರಂಜನ್ ನಟಿಸುತ್ತಾರೆ ಎಂಬ ಸುದ್ದಿ ಇತ್ತು. ಅದೇ ರೀತಿ ಚಿತ್ರದಲ್ಲಿ ನಿರಂಜನ್ ಕಾಣಿಸಿಕೊಂಡಿದ್ದಾರೆ. ಚಿತ್ರದ ಶೂಟಿಂಗ್ ನಲ್ಲಿ ಭಾಗಿಯಾಗಿರುವ ಅವರ ಮೇಕಿಂಗ್ ಫೋಟೋಗಳು ಈಗ ರಿವೀಲ್ ಆಗಿದೆ.
ಭೀಮನ ಅಮಾವಾಸ್ಯೆ: ಪತಿಯ ಪೂಜೆ ಮಾಡಿದ ಪ್ರಿಯಾಂಕಾ ಉಪೇಂದ್ರ
ಅಂದಹಾಗೆ, ನವ ನಿರ್ದೇಶಕ ಯೋಗಿ 'ಸೆಕೆಂಡ್ ಹಾಫ್' ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಪ್ರಿಯಾಂಕಾ ಉಪೇಂದ್ರ ಇಲ್ಲಿ ಪೊಲೀಸ್ ಕಾನ್ಸ್ಟೇಬಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಪ್ರಿಯಾಂಕಾ ಉಪೇಂದ್ರ ಫಸ್ಟ್ ಲುಕ್ ರಿಲೀಸ್ ಆಗಿ ಟಾಕ್ ಆಫ್ ದಿ ಟೌನ್ ಆಗಿತ್ತು.
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ | Subscribe to Kannada Filmibeat.