For Quick Alerts
  ALLOW NOTIFICATIONS  
  For Daily Alerts

  ಶೂಟಿಂಗ್ ವೇಳೆ ಗಾಯಗೊಂಡ ನಿರೂಪ್ ಭಂಡಾರಿ, ಫೋಟೊ ಹಂಚಿಕೊಂಡ ಅನೂಪ್ ಭಂಡಾರಿ!

  |

  ನಿರೂಪ್ ಭಂಡಾರಿ ಅಂದಾಕ್ಷಣ ರಪ್ಪಂತ ನೆನಪಾಗೋದೆ 'ರಂಗಿತರಂಗ'. ಇದು ನಟ ನಿರೂಪ್ ಭಂಡಾರಿ ಅವರ ಮೊದಲ ಸಿನಿಮಾ. ಈ ಚಿತ್ರದಿಂದಲೆ ಅವರು ಗಮನ ಸೆಳೆದಿದ್ದರು. ಇದುವರೆಗೂ ನಾಲ್ಕು ಸಿನಿಮಾಗಳಲ್ಲಿ ನಟಿಸಿರುವ ನಿರೂಪ್ ಭಂಡಾರಿ ಒಂದೊಂದೇ ಹೆಜ್ಜೆ ಇಡುತ್ತಿದ್ದಾರೆ.

  ನಟ ನಿರೂಪ್ ಭಂಡಾರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ನಿರೂಪ್ 38ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿರೊ ನೆಚ್ಚಿನ ನಾಯಕ ನಟನಿಗೆ ಅಭಿಮಾನಿಗಳು ಮತ್ತು ಸ್ನೇಹಿತರು ಸಿನಿಮಾರಂಗದವರು ಶುಭಾಷಯ ಕೋರುತ್ತಿದ್ದಾರೆ.

  'ವಿಂಡೋಸೀಟ್‌'ನಲ್ಲಿ ಕೂತು ಕಥೆ ಹೇಳುತ್ತಿರೋರಿಗೆ ಸಾಥ್ ಕೊಟ್ಟ ಕಿಚ್ಚ ಸುದೀಪ್'ವಿಂಡೋಸೀಟ್‌'ನಲ್ಲಿ ಕೂತು ಕಥೆ ಹೇಳುತ್ತಿರೋರಿಗೆ ಸಾಥ್ ಕೊಟ್ಟ ಕಿಚ್ಚ ಸುದೀಪ್

  ಹುಟ್ಟುಹಬ್ಬದ ಸಂಭ್ರಮದಲ್ಲಿ ಇರುವ ನಟ ನಿರೂಪ್ ಭಂಡಾರಿಯ ಬಗ್ಗೆ ಸಹೋದರ ಅನೂಪ್ ಭಂಡಾರಿ ಹೊಸ ವಿಚಾರ ಹಂಚಿಕೊಂಡಿದ್ದಾರೆ. ನಿರೂಪ್ ಭಂಡಾರಿ ಮೈ ಎಲ್ಲಾ ಗಾಯಗಳಾಗಿರುವ ಫೋಟೋಗಳನ್ನು ಹಂಚಿಕೊಂಡು, ಆತಂಕ ಸೃಷ್ಟಿಸಿದ್ದಾರೆ ಅನೂಪ್. ಈ ಫೋಟೋಗಳ ಕಥೆ ಏನು? ನಿರೂಪ್‌ಗೆ ಏನಾಗಿದೆ ಎನ್ನುವುದನ್ನು ಮುಂದೆ ಓದಿ...

  ನಿರೂಪ್ ಭಂಡಾರಿ ಮೈ ಎಲ್ಲಾ ಗಾಯ!

  ನಿರೂಪ್ ಭಂಡಾರಿ ಮೈ ಎಲ್ಲಾ ಗಾಯ!

  ಹುಟ್ಟುಹಬ್ಬದ ಖುಷಿಯಲ್ಲಿದ್ದಾರೆ ನಟ ನಿರೂಪ್ ಭಂಡಾರಿ. ಆದರೆ ಅವರ ಮೈ ತುಂಬಾ ಗಾಯಗಳಾಗಿರುವ ಫೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿವೆ. ಒಂದು ಫೊಟೋದಲ್ಲಿ ಬೆನ್ನಿನ ತುಂಬಾ ಗಾಯಗಳಾಗಿದ್ದರೆ, ಮತ್ತೊಂದರಲ್ಲಿ ಭುಜಕ್ಕೆ ಪೆಟ್ಟಾಗಿದೆ, ಇನ್ನೊಂದರಲ್ಲಿ ಕಾಲಿಗೆ ಪೆಟ್ಟಾಗಿದೆ. ನಿರೂಪ್ ಈ ಫೋಟೋಗಳನ್ನು ಹಂಚಿಕೊಂಡು ಸಹೋದರ ಅನೂಪ್ ಭಂಡಾರಿ ಹುಟ್ಟುಹಬ್ಬದ ಶುಭಾಷಯ ಕೋರಿದ್ದಾರೆ.

  ಸೋದರನ ಡೆಡಿಕೇಷನ್ ಹೇಳಿದ ಅನೂಪ್!

  ಸೋದರನ ಡೆಡಿಕೇಷನ್ ಹೇಳಿದ ಅನೂಪ್!

  ಅನೂಪ್ ಭಂಡಾರಿ ಹಂಚಿಕೊಂಡಿರುವ ಫೋಟೋಗಳು ಈಗಿನವಲ್ಲ. ಅವು ಸಿನಿಮಾ ಶೂಟಿಂಗ್‌ನಲ್ಲಿ ನಡೆದ ಅವಘಡಗಳ ಫೋಟೋಗಳು. ನಿರೂಪ್ ಸಿನಿಮಾಗಾಗಿ ಎಷ್ಟು ಬದ್ಧತೆಯನ್ನು ಹೊಂದಿದ್ದಾರೆ ಎನ್ನುವುದನ್ನು ಹೇಳಲು ಈ ಫೊಟೋಗಳನ್ನು ಹಂಚಿಕೊಂಡಿದ್ದಾರೆ. " 'ರಂಗಿತರಂಗ'ದಲ್ಲಿ ಬಹುತೇಕ ಬುರುಡೆ ಬಿರುಕು ಬಿಟ್ಟಿತ್ತು. 'ರಾಜರಥ'ದಲ್ಲಿ ಮುರಿದ ಕೈ, 'ವಿಕ್ರಾಂತ್ ರೋಣ' ವೇಳೆ ಅನೇಕ ಗಾಯಗಳು. ಸಿನಿಮಾಗಾಗಿ ಎಲ್ಲವನ್ನೂ ಅರ್ಪಿಸುತ್ತಾನೆ. ನಿರೂಪ್ ನಿನಗೆ ಹುಟ್ಟುಹಬ್ಬದ ಶುಭಾಷಯಗಳು. ನಿನ್ನ ಡೆಡಿಕೇಶನ್ ನಿನ್ನನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿ." ಎಂದು ಅನೂಪ್ ಬರೆದುಕೊಂಡಿದ್ದಾರೆ.

  ಇಂಜಿನಿಯರಿಂಗ್ ಮುಗಿಸಿರುವ ನಿರೂಪ್!

  ಇಂಜಿನಿಯರಿಂಗ್ ಮುಗಿಸಿರುವ ನಿರೂಪ್!

  ಪುತ್ತೂರಿನಲ್ಲಿ ಜನಿಸಿದ ನಿರೂಪ್ ಭಂಡಾರಿ ಸುಧಾಕರ ಭಂಡಾರಿಯವರ ಮಗ. ಹಿರಿಯ ಸಹೋದರ ಅನೂಪ್ ಭಂಡಾರಿ ಕೂಡ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ, ಸಾಹಿತಿ ಮತ್ತು ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ನಿರೂಪ್ ಭಂಡಾರಿ ಇಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಬಳಿಕ ಸಿನಿಮಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡ ನಿರೂಪ್, ನಟನಾ ತರಬೇತಿ ಪಡೆದು ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ.

  5 ಸಿನಿಮಾಗಳಲ್ಲಿ ನಟನೆ!

  5 ಸಿನಿಮಾಗಳಲ್ಲಿ ನಟನೆ!

  2015 ರಲ್ಲಿ ತೆರೆಕಂಡ 'ರಂಗಿತರಂಗ' ಚಿತ್ರದ ಮೂಲಕ ನಾಯಕನಟನಾಗಿ ಚಿತ್ರರಂಗ ಪ್ರವೇಶಿಸಿದರು. ಈ ಚಿತ್ರದ ನಂತರ 'ರಾಜರಥ' ಮತ್ತು 'ಆದಿಲಕ್ಷ್ಮಿ ಪುರಾಣ' ಚಿತ್ರದಲ್ಲಿ ನಟಿಸಿದ್ದಾರೆ. ಬಳಿಕ ಶೀತಲ್ ಶೆಟ್ಟಿ ನಿರ್ದೇಶನದ ಥ್ರಿಲ್ಲರ್ ಮತ್ತು ಮರ್ಡರ್ ಮಿಸ್ಟರಿ ಚಿತ್ರ 'ವಿಂಡೋ ಸೀಟ್'ನಲ್ಲಿ ನಾಯಕ ನಟನಾಗಿಯೂ ಅಭಿನಯಿಸಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಾಯಕನಾಗಿರುವ 'ವಿಕ್ರಾಂತ್ ರೋಣ' ಚಿತ್ರದಲ್ಲಿ ನಿರೂಪ್ ಭಂಡಾರಿ ವಿಲನ್ ಆಗಿ ನಟಿಸಿದ್ದಾರೆ. ಒಟ್ಟು 5 ಸಿನಿಮಾಗಳಲ್ಲಿ ನಟಿಸಿದ್ದಾರೆ ನಿರೂಪ್ ಭಂಡಾರಿ.

  Recommended Video

  D Boss Darshan 25 ವರ್ಷಕ್ಕೆ ಅದ್ಧೂರಿಯಾಗಿ ಸಂಭ್ರಮಾಚರಣೆ | Filmibeat Kannada
  English summary
  Actor Nirup Bhandari Badly Injured, Anup Bhandari Shares Pics On His Birthday, know more,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X