»   » 'ಓ ಮೈ ಗಾಡ್', 'ಆರ್ಮುಗಂ' ರವಿಶಂಕರ್ ಸ್ವಾಮೀಜಿ ಆಗ್ತಾರಂತೆ

'ಓ ಮೈ ಗಾಡ್', 'ಆರ್ಮುಗಂ' ರವಿಶಂಕರ್ ಸ್ವಾಮೀಜಿ ಆಗ್ತಾರಂತೆ

Posted By:
Subscribe to Filmibeat Kannada

ಕಿಚ್ಚ ಸುದೀಪ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಅವರು ಒಂದಾಗಿ ಕಾಣಿಸಿಕೊಳ್ಳುತ್ತಿರುವ ಹಿಂದಿ ಸಿನಿಮಾ 'ಓ ಮೈ ಗಾಡ್' ರಿಮೇಕ್ ಕನ್ನಡದಲ್ಲಿ 'ಕೃಷ್ಣ ನೀ ಬೇಗನೆ ಬಾರೋ' ಸಿನಿಮಾದಿಂದ ಖಾಸ್ ಖಬರ್ ಒಂದು ಹೊರಬಿದ್ದಿದೆ.

ಹಿಂದಿಯಲ್ಲಿ ಅಕ್ಷಯ್ ಕುಮಾರ್ ಮಾಡಿದ ಪಾತ್ರವನ್ನು ಕನ್ನಡದಲ್ಲಿ ಕಿಚ್ಚ ಸುದೀಪ್ ಅವರು ಮಾಡಿದರೆ, ಪರೇಶ್ ರಾವಲ್ ಪಾತ್ರವನ್ನು ಉಪೇಂದ್ರ ಅವರು ಮಾಡಲಿದ್ದಾರೆ. ಆದರೆ ಹಿಂದಿಯಲ್ಲಿ ಮಿಥುನ್ ಚಕ್ರವರ್ತಿ ಮಾಡಿದ ಪಾತ್ರವನ್ನು ಯಾರೂ ಮಾಡುತ್ತಾರೆ ಎಂದು ಪಕ್ಕಾ ಆಗಿರಲಿಲ್ಲ.[ಕಿಚ್ಚ-ಉಪ್ಪಿ ಅವರ ಹೊಸ ಚಿತ್ರದ ಹೆಸರೇನು ಗೊತ್ತಾ?]

Actor P Ravishankar is to play Mithun Chakraborty role in 'Krishna Ni Begane Baaro'

ಇದೀಗ ಅದೂ ನಿರ್ಧಾರ ಆಗಿದ್ದು, ಹಿಂದಿಯಲ್ಲಿ ದೇವಮಾನವನಾಗಿ ಅಂದರೆ ಸ್ವಾಮೀಜಿಯಾಗಿ ಖ್ಯಾತ ನಟ ಮಿಥುನ್ ಚಕ್ರವರ್ತಿ ಮಾಡಿದ್ದ ಪಾತ್ರವನ್ನು ಕನ್ನಡದಲ್ಲಿ ಖಳನಟನಾಗಿ ಖ್ಯಾತಿ ಗಳಿಸಿರುವ ಖಳನಟ 'ಆರ್ಮುಗಂ' ರವಿಶಂಕರ್ ಅವರು ಮಾಡಲಿದ್ದಾರೆ.

ಒಬ್ಬ ನಾಸ್ತಿಕ ಮತ್ತು ಇನ್ನೊಬ್ಬ ಸ್ವಯಂಘೋಷಿತ ದೇವಮಾನವರ ನಡುವೆ ನಡೆಯುವ ವೈಚಾರಿಕ ಯುದ್ಧವೇ ಈ ಸಿನಿಮಾದ ಕಥಾ ವಸ್ತು. ಇಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು ನಾಸ್ತಿಕನಾಗಿ ಮಿಂಚಿದರೆ, ಕಿಚ್ಚ ಸುದೀಪ್ ಅವರು ಶ್ರೀಕೃಷ್ಣ ಪರಮಾತ್ಮನಾಗಿ ನಟಿಸೋದು ಅಂತ ಈಗಾಗಲೇ ಪಕ್ಕಾ ಆಗಿದೆ.[ಉಪ್ಪಿ-ಕಿಚ್ಚನ ಸಿನಿಮಾ ಶೂಟಿಂಗ್ ದಿನಾಂಕ ಯಾವಾಗ ಗೊತ್ತಾ?]

Actor P Ravishankar is to play Mithun Chakraborty role in 'Krishna Ni Begane Baaro'

ಅಂದಹಾಗೆ ಹಿಂದಿಯ 'ಓ ಮೈ ಗಾಡ್' ಸಿನಿಮಾದಲ್ಲಿ ಸ್ವಾಮೀಜಿ ಪಾತ್ರದಲ್ಲಿ ನಟ ಮಿಥುನ್ ಚಕ್ರವರ್ತಿ ಅವರು ಬಹಳ ಅದ್ಭುತವಾಗಿ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದರು. ಇದೀಗ ಅದೇ ಪಾತ್ರವನ್ನು ಖಳನಟ ರವಿಶಂಕರ್ ಅವರು ಯಾವ ರೀತಿ ಮಾಡಬಹುದು ಎಂಬುದು ಸದ್ಯಕ್ಕೆ ಪ್ರೇಕ್ಷಕರಲ್ಲಿರುವ ಕುತೂಹಲ.[ಕಿಚ್ಚನ ನೋಡಿ 'ಓ ಮೈ ಗಾಡ್' ಅಂದ ಉಪ್ಪಿ.!]

ಜನವರಿ 22 ರಿಂದ ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು, 'ರನ್ನ' ಮತ್ತು 'ವಿಕ್ಟರಿ' ಖ್ಯಾತಿಯ ನಿರ್ದೇಶಕ ನಂದ ಕಿಶೋರ್ ಅವರು ಆಕ್ಷನ್-ಕಟ್ ಹೇಳಲಿದ್ದಾರೆ.

English summary
Actor P Ravishankar is to play Mithun Chakraborty role in the remake of Bollywood hit movie 'OMG-Oh My God'. The Kannada remake of OMG has been titled as 'Krishna Ni Begane Baaro', which is all set to go on the floors very soon. The movie is directed by Nanda Kishore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada