For Quick Alerts
  ALLOW NOTIFICATIONS  
  For Daily Alerts

  ಬೀಟ್ 'ರೂಟ್'ನಲ್ಲಿದ್ದ ಪಟ್ರೆ ಅಜಿತ್ ಈಗ ಡವ್ ರಾಜಾ

  |

  ಪಟ್ರೆ ಅಜಿತ್ ಡವ್ ರಾಜಾ ಆಗಿದ್ದಾರೆ. 'ಈ ಭೂಮಿ ಆ ಭಾನು' ಹಾಗೂ 'ಬೀಟ್' ಚಿತ್ರಗಳು ಬಿಡುಗಡೆಗೆ ಸಿದ್ಧವಾದ ಬೆನ್ನಲ್ಲೆ ನಟ ಪಟ್ರೆ ಅಜಿತ್ 'ಡವ್ ರಾಜಾ' ಚಿತ್ರಕ್ಕೆ ನಾಯಕರಾಗಿ ಆಯ್ಕೆಯಾಗಿದ್ದಾರೆ. ಈ ಚಿತ್ರದ ನಿರ್ದೇಶಕರು ವೇಣು.

  ಈ ಮೊದಲು ನಿರ್ದೇಶಕ ವೇಣು, 'ಈ ಭೂಮಿ ಆ ಭಾನು' ಚಿತ್ರವನ್ನು ನಿರ್ದೇಶಿಸಿದ್ದಾರೆ. ಅಂದಹಾಗೆ, ಅದರಲ್ಲೂ ಇದೇ ಅಜಿತ್ ನಾಯಕರು. ಈಗ ಮತ್ತೆ ಅಜಿತ್ ಹಾಗೂ ವೇಣು ಡವ್ ರಾಜಾದಲ್ಲಿ ಮತ್ತೊಮ್ಮೆ ಜತೆಯಾಗಲಿದ್ದಾರೆ. ಮಂಗಳೂರು ಮೂಲದ ಉದ್ಯಮಿಯೊಬ್ಬರು ಈ ಚಿತ್ರವನ್ನು ನಿರ್ಮಿಸಲಿದ್ದಾರೆ.

  ಪಟ್ರೆ ಲವ್ಸ್ ಪದ್ಮ ಚಿತ್ರದ ಮೂಲಕ ನಾಯಕರಾಗಿ ಕನ್ನಡಕ್ಕೆ ಎಂಟ್ರಿಕೊಟ್ಟಿದ್ದ ನಟ ಅಜಿತ್ ನಂತರ ಪಟ್ರೆ ಅಜಿತ್ ಎಂದೇ ಪ್ರಸಿದ್ಧರಾದವರು. ನಂತರ ಗುಬ್ಬಿ ಚಿತ್ರದಲ್ಲಿ ಪ್ರೇಕ್ಷಕರು ಹಾಗೂ ವಿಮರ್ಶಕರ ಗಮನಸೆಳೆದಿದ್ದಾರೆ. ಬೀಟ್ ಹಾಗೂ ಈ ಭೂಮಿ ಆ ಭಾನು ಚಿತ್ರಗಳು ಸದ್ಯದಲ್ಲೇ ಬಿಡುಗಡೆಯಾಗಲಿವೆ.

  ಬರಲಿರುವ ಶುಕ್ರವಾರ (ಮೇ 25, 2012), ಈ ಭೂಮಿ ಆ ಭಾನು ಚಿತ್ರದ ಧ್ವನಿಸುರುಳಿ ಬಿಡುಗಡೆಯಾಗಲಿದೆ. ಆದರೆ ಬೀಟ್ ಚಿತ್ರದ ಆಡಿಯೋ ಬಿಡುಗಡೆಯ ದಿನಾಂಕವಿನ್ನೂ ಪಕ್ಕಾ ಆಗಿಲ್ಲ. ಅಷ್ಟರಲ್ಲೇ ಹೊಸ ಚಿತ್ರಕ್ಕೆ ಅಜಿತ್ ನಾಯಕ.

  ಚಿತ್ರದಲ್ಲಿ ಮೂವರು ನಾಯಕಿಯರಿದ್ದು ಅವರ ಆಯ್ಕೆ ಇನ್ನಷ್ಟೇ ಆಗಬೇಕಿದೆ. AK-47, ನಿಷ್ಕರ್ಷ ಹಾಗೂ ಬೆಳದಿಂಗಳ ಬಾಲೆಗೆ ಕ್ಯಾಮರಾ ಹಿಡಿದಿದ್ದ ಪಿ. ರಾಜನ್ ಡವ್ ರಾಜಾನ ಛಾಯಾಗ್ರಾಹಕರು. ಸಂಗೀತ ನಿರ್ದೇಶಕರು ಪಕ್ಕಾ ಆಗಿಲ್ಲ.

  ಇದೊಂದು ಯುವಜನರಿಗೆ ಇಷ್ಟವಾಗುವ ಪಕ್ಕಾ ಮನರಂಜನೆಯ ಚಿತ್ರ. ಲವ್ ಆಕ್ಷನ್ ಸೆಂಟಿಮೆಂಟ್ ಎಲ್ಲವೂ ಹದವಾಗಿ ಬೆರೆತಿರುವ ಸಿನಿಮಾ. ತುಂಬಾ ಒಳ್ಳೆಯ 'ಫೀಲ್' ಚಿತ್ರದುದ್ದಕ್ಕೂ ಇದೆ ಎಂದಿದ್ದಾರೆ ನಾಯಕ ಅಜಿತ್. ಚಿತ್ರ ಜುಲೈ ಕೊನೆಯ ವಾರ ಸೆಟ್ಟೇರಲಿದೆ. (ಒನ್ ಇಂಡಿಯಾ ಕನ್ನಡ)

  English summary
  Actor Patre Ajith acts in a new movie called Dove Raja. This movie to launch on July end, 2002. Venu, the director of recent movie 'Ee bhoomi Aa Bhaanu', directs this movie once again for Patre Ajith. There are 3 Heroines and not selected yet.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X