For Quick Alerts
  ALLOW NOTIFICATIONS  
  For Daily Alerts

  ಕೋವಿಡ್‌ನಿಂದ ಕುಟುಂಬದವರನ್ನು ಕಳೆದುಕೊಂಡ ನಟ ಪವನ್, ಸರ್ಕಾರಕ್ಕೆ ಹಾಕಿದರು ಶಾಪ

  |

  ಗಟ್ಟಿಮೇಳ ಧಾರಾವಾಹಿ ನಟ ಪವನ್ ಕುಮಾರ್ ಅವರು ಕೋವಿಡ್‌ನಿಂದಾಗಿ ತಮ್ಮ ಭಾವ ಹಾಗೂ ಅವವರ ತಂದೆಯನ್ನು ಕೇವಲ ಎರಡು ದಿನಗಳ ಅಂತರದಲ್ಲಿ ಸೂಕ್ತ ಸಮಯದಲ್ಲಿ ಆಸ್ಪತ್ರೆ ಬೆಡ್ ಸಿಗದೆ, ಆಮ್ಲಜನಕ ಸಿಗದೆ ಕಳೆದುಕೊಂಡಿದ್ದಾರೆ.

  ಕೊರೋನಾ ಹೆಸರಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ ಕಿರುತೆರೆ ನಟ| Filmibeat Kannada

  ಆ ಭಯಾನಕ ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಮಾಹಿತಿ ನೀಡಿರುವ ಪವನ್, 'ಸರ್ಕಾರ ಜನಗಳನ್ನು ಸಾಮೂಹಿಕವಾಗಿ ಕೊಲೆ ಮಾಡುತ್ತಿದೆ' ಎಂದಿದ್ದಾರೆ. ಕೋವಿಡ್‌ ಸೋಂಕಿತರಾಗಿದ್ದ ಪವನ್ ಅವರ ಭಾವನವರಿಗೆ ಸೂಕ್ತ ಸಮಯಕ್ಕೆ ಆಮ್ಲಜನಕ ಸಿಗದೇ ಸಾವನ್ನಪ್ಪಿದ್ದಾರೆ. ಭಾವನವರ ತಂದೆಯವರು ಸಹ ಕೋವಿಡ್‌ನಿಂದಾಗಿಯೇ ಮೃತಪಟ್ಟಿದ್ದಾರೆ.

  'ರಾಮ ಮಂದಿರ, ಹೊಸ ಪಾರ್ಲಿಮೆಂಟು, ಎತ್ತರದ ಪ್ರತಿಮೆಗಳು ಇವುಗಳೆಲ್ಲ ನಮ್ಮಂಥಹವರ ಹೆಣಗಳ ಮೇಲೆ ಕಟ್ಟಲಾಗಿದೆ ಎನಿಸುತ್ತಿದೆ. ಇದನ್ನೆಲ್ಲಾ ನೆನಪಿಸಿಕೊಂಡರೆ ಮೈಯೆಲ್ಲಾ ಕುದಿಯುತ್ತಿದೆ' ಎಂದು ಆಕ್ರೋಶದಿಂದ ಹೇಳಿದ್ದಾರೆ ಪವನ್.

  'ಸೂಕ್ತವಾದ ವ್ಯವಸ್ಥೆ ಇಲ್ಲದೆ ಈ ಮಹಾಮಾರಿಯನ್ನು ಸೋಲಿಸಲು ಸಾಧ್ಯವೇ ಇಲ್ಲ. ವೈದ್ಯಕೀಯ ಸಿಬ್ಬಂದಿಗಳು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ ಆದರೆ ವ್ಯವಸ್ಥೆಯೇ ಸರಿಯಿಲ್ಲದಿರುವಾಗ ರೋಗಿಗಳು ಹೆಚ್ಚಾಗುತ್ತಲೇ ಇರುತ್ತಾರೆ. ಸರ್ಕಾರ ಸೂಕ್ತವಾಗಿ ಪ್ಯಾಂಡೆಮಿಕ್ ಅನ್ನು ಮ್ಯಾನೇಜ್ ಮಾಡಬೇಕಿದೆ' ಎಂದಿದ್ದಾರೆ ಪವನ್.

  ಆಮ್ಲಜನಕ ಹುಡುಕಿಕೊಂಡು ರಾತ್ರಿಯೆಲ್ಲಾ ಅಲೆದೆ: ಪವನ್

  ಆಮ್ಲಜನಕ ಹುಡುಕಿಕೊಂಡು ರಾತ್ರಿಯೆಲ್ಲಾ ಅಲೆದೆ: ಪವನ್

  'ನಾನು ಕಣ್ಣಾರೆ ನೋಡಿದ್ದೇನೆ ಆಸ್ಪತ್ರೆಗಳಲ್ಲಿ ಬೆಡ್‌ಗಳಿಲ್ಲ, ಆಮ್ಲಜನಕವಿಲ್ಲ. ಆಂಬುಲೆನ್ಸ್‌ಗಳಲ್ಲಿ ರೋಗಿಗಳನ್ನು ಇಟ್ಟುಕೊಂಡು ಆಸ್ಪತ್ರೆಯಿಂದ ಆಸ್ಪತ್ರೆಗೆ ತಿರುಗುತ್ತಿದ್ದಾರೆ. ಸ್ವತಃ ನಾನೇ ಭಾವನಿಗೆ ಆಮ್ಲಜನಕ ಅರೆಂಜ್ ಮಾಡಲು ರಾತ್ರಿಯೆಲ್ಲ ಬೀದಿಗಳಲ್ಲಿ ಅಲೆದಿದ್ದೇನೆ' ಎಂದಿದ್ದಾರೆ ಪವನ್.

  ರೆಮ್ಡಿಸಿವಿರ್‌ಗಳನ್ನು ರಫ್ತು ಮಾಡಿದೆ ಸರ್ಕಾರ: ಪವನ್

  ರೆಮ್ಡಿಸಿವಿರ್‌ಗಳನ್ನು ರಫ್ತು ಮಾಡಿದೆ ಸರ್ಕಾರ: ಪವನ್

  'ಜನರ ಜೀವ ಉಳಿಸುವ ರೆಮ್ಡಿಸಿವರ್‌ ಅನ್ನು ಬೇರೆ ದೇಶಕ್ಕೆ ರಫ್ತು ಮಾಡುತ್ತಾ ಕೂತಿದ್ದಾನೆ. ಹೌದು ಈಗ ನಿಲ್ಲಿಸಿದ್ದಾರೆ. ಆದರೂ ನಮಗೆ ಸಿಗುತ್ತಾ ಇಲ್ಲ. ಇನ್ನೂ ಎಷ್ಟು ದಿನ ಒದ್ದಾಡಬೇಕು, ಎಷ್ಟು ಜನ ಸಾಯಬೇಕು. ಈ ಹಿಂದೆ ಕೊರೊನಾ ಬಂದಾಗ ನಾವು ತಯಾರಾಗಿರಲಿಲ್ಲ, ಓಕೆ ಆದರೆ ಈಗ ಏನಾಗಿದೆ ಸರ್ಕಾರಕ್ಕೆ' ಎಂದು ಪ್ರಶ್ನಿಸಿದರು ಪವನ್.

  ಸರ್ಕಾರದಿಂದಾಗಿ ಭಾವ ತೀರಿಕೊಂಡರು: ಪವನ್

  ಸರ್ಕಾರದಿಂದಾಗಿ ಭಾವ ತೀರಿಕೊಂಡರು: ಪವನ್

  'ಈ ಹಿಂದೆ 10,000 ಬೆಡ್‌ಗಳನ್ನು ಹಾಕಿದ್ದರಲ್ಲ ಎಲ್ಲಿ ಹೋಯಿತು ಅದು. ಸರ್ಕಾರ ಸರಿಯಾಗಿ ಮುನ್ನೆಚ್ಚರಿಕೆ ವಹಿಸಿದ್ದಿದ್ದರೆ ಈಗ ಹೀಗೆ ಆಗುತ್ತಿರಲಿಲ್ಲ. ನಮ್ಮ ಭಾವ ಬದುಕಿರುತ್ತಿದ್ದರು. ಒಂದೇ ದಿನ ಆರು ಸಾವುಗಳನ್ನು ನಾನು ನೋಡಿದೆ. ಮಾನಸಿಕವಾಗಿ ಜರ್ಜರಿತವಾಗಿ ಹೋಗಿದ್ದೇನೆ' ಎಂದಿದ್ದಾರೆ ಪವನ್.

  ಕಾಲು ಹಿಡಿಯುವ ಸ್ಥಿತಿ ನಿರ್ಮಾಣವಾಗಿದೆ: ಪವನ್

  ಕಾಲು ಹಿಡಿಯುವ ಸ್ಥಿತಿ ನಿರ್ಮಾಣವಾಗಿದೆ: ಪವನ್

  'ಪರಿಸ್ಥಿತಿ ಕೈ ಮೀರಿ ಹೋಗಿದೆ. ಒಂದು ಆಸ್ಪತ್ರೆ ಬೆಡ್‌ಗಾಗಿ ಒಂದು ಆಮ್ಲಜನಕದ ಸಿಲಿಂಡರ್‌ಗಾಗಿ ಕಾಲುಗಳನ್ನು ಹಿಡಿಯುತ್ತಿದ್ದಾರೆ ಹೊರಗೆ ಜನ. ದಯವಿಟ್ಟು ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಿ. ಯಾರೂ ಮನೆಯಿಂದ ಹೊರಗೆ ಹೋಗಬೇಡಿ'' ಎಂದಿದ್ದಾರೆ ಪವನ್.

  English summary
  Kannada serial actor Pawan Kumar blames government for not handling COVID 19 situation. He lost two people from his family.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X