»   » ಬೆನ್ನಿಗೆ ಗಾಯವಾಗಿ ಆಸ್ಪತ್ರೆಗೆ ದಾಖಲಾದ 'ಡ್ಯಾನ್ಸ್ ಕಿಂಗ್' ಪ್ರಭುದೇವ

ಬೆನ್ನಿಗೆ ಗಾಯವಾಗಿ ಆಸ್ಪತ್ರೆಗೆ ದಾಖಲಾದ 'ಡ್ಯಾನ್ಸ್ ಕಿಂಗ್' ಪ್ರಭುದೇವ

By: Suni
Subscribe to Filmibeat Kannada

ಡ್ಯಾನ್ಸ್ ನಲ್ಲಿ ಕಿಂಗ್ ಆಗಿರುವ ಕನ್ನಡಿಗ ಪ್ರಭುದೇವ ಅವರಿಗೆ (Tutak Tutak Tutiya) 'ಟುಟಕ್ ಟುಟಕ್ ಟುಟಿಯಾ' (ತೆಲುಗಿನಲ್ಲಿ 'ಅಭಿನೇತ್ರಿ') ಚಿತ್ರದ ಹಾಡಿನ ಶೂಟಿಂಗ್ ಸಂದರ್ಭದಲ್ಲಿ ಬೆನ್ನಿಗೆ ತೀವ್ರ ಗಾಯವಾಗಿದೆ. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಖಳನಟನಾಗಿ ಖ್ಯಾತಿ ಪಡೆದಿರುವ ಸೋನು ಸೂದ್ ಅವರ ಹೋಮ್ ಪ್ರೊಡಕ್ಷನ್ ನಲ್ಲಿ ಮೂಡಿಬರುತ್ತಿರುವ ಚೊಚ್ಚಲ ಸಿನಿಮಾದಲ್ಲಿ, ಪ್ರಭುದೇವ ಅವರು ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ಮೂಡಿಬರುತ್ತಿದ್ದು, ಏಕಕಾಲದಲ್ಲಿ ತೆರೆ ಕಾಣಲಿದೆ.[ಮುಂಬೈ ಡಾನ್ಸರ್ ಜತೆ ಪ್ರಭುದೇವ ಎರಡನೇ ಮದುವೆ?]

Actor Prabhu Deva rushed to hospital due to back injury

ಚಿತ್ರದ ಟೈಟಲ್ ಸಾಂಗ್ ನ ಶೂಟಿಂಗ್ ನಡೆಯುತ್ತಿತ್ತು, ಸುಮಾರು 500 ಸಹ ಕಲಾವಿದರು ಮತ್ತು 350 ಪ್ರೊಫೆಶನಲ್ ಡ್ಯಾನ್ಸರ್ ಗಳು ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಹಾಡಿನ ಚಿತ್ರೀಕರಣ ಭರದಿಂದ ಸಾಗುತ್ತಿತ್ತು, ಜೊತೆಗೆ ನಟ ಪ್ರಭುದೇವ ಅವರು ಕೂಡ ಜಬರ್ದಸ್ತ್ ಆಗಿ ಡ್ಯಾನ್ಸ್ ಮಾಡುತ್ತಿದ್ದರು.

ಸಡನ್ ಆಗಿ ಅವರ ಬೆನ್ನು ಉಳುಕಿದ ಪರಿಣಾಮ ಇದೀಗ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಂದಹಾಗೆ ಈ ಹಾಡಿಗೆ ಪ್ರಭುದೇವ ಅವರೇ ಕೊರಿಯೋಗ್ರಾಫರ್ ಆದ ಕಾರಣ, ಹಾಡಿನ ಶೂಟಿಂಗ್ ಕೂಡ ಮುಂದೂಡಲಾಗಿದೆ.[ತುಪ್ಪದ ಬೆಡಗಿ ರಾಗಿಣಿ ಬಾಲಿವುಡ್ ಐಟಂ ಡಾನ್ಸ್ ರೆಡಿ]

Actor Prabhu Deva rushed to hospital due to back injury

ವೈದ್ಯರು 2 ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದ್ದು, ಪ್ರಭುದೇವ ಅವರು ಸಂಫೂರ್ಣ ಗುಣಮುಖರಾದ ಮೇಲೆ ಶೂಟಿಂಗ್ ಅಂತ ಸೋನು ಸೂದ್ ಅವರು ಕೂಡ ಘೋಷಣೆ ಮಾಡಿದ್ದಾರೆ. ಚಿತ್ರದಲ್ಲಿ ಪ್ರಭುದೇವ ಅವರಿಗೆ ನಾಯಕಿಯಾಗಿ ತಮನ್ನಾ ಭಾಟಿಯಾ ಅವರು ಅಭಿನಯಿಸಿದ್ದಾರೆ.[ಕೋಟ್ಯಾಧಿಪತಿಯಲ್ಲಿ ಪ್ರಭುದೇವ ಗೆದ್ದದೆಷ್ಟು? ಈ ಶೋ ನೋಡಿ]

English summary
Actor Sonu Sood's debut trilingual production, 'Tutak Tutak Tutiya' will have dance master and director Prabhu Dheva romancing Tamannaah Bhatia. Unfortunately, while shooting, Prabhu Dheva who was also choreographing the number met with an accident and injured his back. As a result, the shoot was stalled for five hours and he had to be rushed to a hospital.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada