»   » ತಮಿಳು-ತೆಲುಗು ಅಂಗಳಕ್ಕೆ ಜಿಗಿದ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು'

ತಮಿಳು-ತೆಲುಗು ಅಂಗಳಕ್ಕೆ ಜಿಗಿದ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು'

Posted By:
Subscribe to Filmibeat Kannada

'ಸಿಂಪಲ್ ಹುಡುಗ' ರಕ್ಷಿತ್ ಶೆಟ್ಟಿ ಮತ್ತು ನಟಿ ಶ್ರುತಿ ಹರಿಹರನ್ ಅವರ ಕಾಂಬಿನೇಷನ್ ನಲ್ಲಿ ಮೂಡಿಬಂದಿದ್ದ ಹಿಟ್ ಸಿನಿಮಾ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಗಾಂಧಿನಗರದಲ್ಲಿ ಮೈಲಿಗಲ್ಲು ಹುಟ್ಟುಹಾಕಿದ್ದು, ಅನಂತ್ ನಾಗ್ ಅವರ ನಟನೆಗೆ ಇಡೀ ಪ್ರೇಕ್ಷಕವರ್ಗವೇ ಮೂಗಿನ ಮೇಲೆ ಬೆರಳಿಟ್ಟಿತ್ತು.

ಸಾಕಷ್ಟು ಹವಾ ಸೃಷ್ಟಿ ಮಾಡಿದ್ದ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಇದೀಗ ಮತ್ತೆ ಸುದ್ದಿಯಲ್ಲಿದೆ. ಈ ಬಾರಿ ಕನ್ನಡ ಸಿನಿಪ್ರೇಮಿಗಳು ಫುಲ್ ಖುಷ್ ಆಗೋ ತರ ಸುದ್ದಿ ಮಾಡಿದೆ.[ಅನಂತ್ ನಾಗ್ ಜೊತೆ ಕಳೆದು ಹೋದ ವಿಮರ್ಶಕರು ]


Actor Prakash Raj all set to remake 'GBSM' in Tamil and Telugu

ಹೌದು ನವ ನಿರ್ದೇಶಕ ಹೇಮಂತ್ ರಾವ್ ಆಕ್ಷನ್-ಕಟ್ ಹೇಳಿದ್ದ ಅದ್ಭುತ ಸಿನಿಮಾ ಇದೀಗ ತಮಿಳು ಮತ್ತು ತೆಲುಗು ಭಾಷೆಗೆ ರೀಮೇಕ್ ಆಗುತ್ತಿದೆ. ಅಂದಹಾಗೆ ರೀಮೇಕ್ ಹಕ್ಕನ್ನು ಖರೀದಿ ಮಾಡಿದವರು ನಮ್ಮ ಕನ್ನಡದವರೇ ಆದ ನಟ ಪ್ರಕಾಶ್ ರಾಜ್ ಅವರು.


Actor Prakash Raj all set to remake 'GBSM' in Tamil and Telugu

ನಟ ಪ್ರಕಾಶ್ ರಾಜ್ ಅವರು ತಮ್ಮ ಪ್ರಕಾಶ್ ರಾಜ್ ಪ್ರೊಡಕ್ಷನ್ಸ್ ಅಡಿಯಲ್ಲಿ ಈ ಸಿನಿಮಾವನ್ನು ಕಾಲಿವುಡ್ ಮತ್ತು ಟಾಲಿವುಡ್ ನಲ್ಲಿ ನಿರ್ಮಾಣ ಮಾಡಲಿದ್ದಾರೆ. ಈ ಸಿಹಿ ಸುದ್ದಿಯನ್ನು ಖುದ್ದು ನಿರ್ಮಾಪಕ ಪುಷ್ಕರ ಮಲ್ಲಿಕಾರ್ಜುನ ಮತ್ತು ನಟ ಪ್ರಕಾಶ್ ರಾಜ್ ಅವರು ಫೇಸ್ ಬುಕ್ ಹಾಗೂ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.['ಗೋಧಿ ಬಣ್ಣ' ಇರುವವರು ಕಳೆದು ಹೋಗಿದ್ದಾರೆ ಹುಡುಕಿ ಕೊಡಿ ಪ್ಲೀಸ್...]


Actor Prakash Raj all set to remake 'GBSM' in Tamil and Telugu

"ಗೋಧಿ ಬಣ್ಣ ಸಾಧಾರಣ ಮೈಕಟ್ಟು ತಮಿಳು-ತೆಲುಗಿಗೆ ಪ್ರಕಾಶ್ ರಾಜ್ ಪ್ರೊಡಕ್ಷನ್ಸ್ ಅಡಿಯಲ್ಲಿ ರೀಮೇಡ್ ಆಗುತ್ತಿದೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ..ಚಿಯರ್ಸ್" ಎಂದು ಬಹುಭಾಷಾ ನಟ ಕಮ್ ನಿರ್ದೇಶಕ-ನಿರ್ಮಾಪಕ ಪ್ರಕಾಶ್ ರಾಜ್ ಅವರು ಟ್ವೀಟ್ ಮಾಡಿದ್ದಾರೆ.'GBSM' ಚಿತ್ರತಂಡದವರು ಚಿತ್ರದ ವಿಶೇಷ ಪ್ರದರ್ಶನವನ್ನು ಏರ್ಪಡಿಸಿದ್ದ ಸಂದರ್ಭದಲ್ಲಿ ಸಿನಿಮಾ ವೀಕ್ಷಿಸಿದ ನಟ ಪ್ರಕಾಶ್ ರೈ ಅವರು ಚಿತ್ರವನ್ನು ಬಹಳ ಮೆಚ್ಚಿಕೊಂಡಿದ್ದಾರೆ. ಮಾತ್ರವಲ್ಲದೇ ಸಿನಿಮಾ ನೋಡಿ ಅತಿಯಾಗಿ ಮೆಚ್ಚಿಕೊಂಡ ಪ್ರೇಕ್ಷಕರಿಗೆ ಅವರು ಮನಸಾರೆ ಧನ್ಯವಾದ ತಿಳಿಸಿದ್ದಾರೆ.ಈ ಚಿತ್ರದಲ್ಲಿ ನಟ ಅನಂತ್ ನಾಗ್ ಅವರು ವೆಂಕೋಬ್ ರಾವ್ ಎಂಬ ಮನಮುಟ್ಟುವ ಪಾತ್ರ ವಹಿಸಿ ಎಲ್ಲರ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ.['ಗೋಧಿ ಬಣ್ಣ' ವಿಮರ್ಶೆ: ಅಪ್ಪ-ಮಗನ ಅ'ಸಾಧಾರಣ' ಭಾವ-ಬಂಧ]


Actor Prakash Raj all set to remake 'GBSM' in Tamil and Telugu

ಇನ್ನುಳಿದಂತೆ ಕೆಲಸದ ಹಿಂದೆ ಓಡಿ ಹೋಗಿ ಅಪ್ಪನನ್ನು ನಿರ್ಲಕ್ಷ್ಯ ಮಾಡುವ ಪಾತ್ರದಲ್ಲಿ ನಟ ರಕ್ಷಿತ್ ಶೆಟ್ಟಿ, ಸಹನೆಯುಳ್ಳ, ಸಹನಾಮೂರ್ತಿ ಡಾ.ಸಹನಾ ಪಾತ್ರದಲ್ಲಿ ನಟಿ ಶ್ರುತಿ ಹರಿಹರನ್, ಕೊಲೆ ಮಾಡಿ ಕಟುಕ ಆದರೂ ಕೊನೆಗೂ ಬದಲಾಗುವ ಪಾತ್ರದಲ್ಲಿ ನಟ ವಸಿಷ್ಠ ಇವರೆಲ್ಲರೂ ಕೂಡ ಎಲ್ಲರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.


English summary
Actor Prakash Raj is all set to remake Rakshit Shetty and Ananth Nag-starrer Kannada Movie "Godhi Banna Sadharana Mykattu" (GBSM) in Tamil and Telugu. He watched the Kannada movie recently at a special screening organised by the makers of the film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada