»   » ನಟ ಪ್ರಕಾಶ್ ರೈ ಸುದೀರ್ಘ ಕನಸು ಕಡೆಗೂ ನನಸು

ನಟ ಪ್ರಕಾಶ್ ರೈ ಸುದೀರ್ಘ ಕನಸು ಕಡೆಗೂ ನನಸು

Posted By:
Subscribe to Filmibeat Kannada

ನಟ, ನಿರ್ದೇಶಕ ಹಾಗೂ ನಿರ್ಮಾಪಕ ಪ್ರಕಾಶ್ ರೈ ಅವರ ದೀರ್ಘ ಕಾಲದ ಕನಸು ಕಡೆಗೂ ನನಸಾಗಿದೆ. ಅವರು ಹೊಸ ವಾಹನವೊಂದನ್ನು ಕೊಂಡುಕೊಂಡಿದ್ದಾರೆ. ಇದರಲ್ಲೇನು ವಿಶೇಷವಿದೆ ಬಿಡಿ ಅಂತೀರಾ? ಈ ಫೋಟೋ ನೋಡಿದರೆ ನಿಮಗೇ ಎಲ್ಲವೂ ಅರ್ಥವಾಗುತ್ತದೆ.

ಈ ಬಗ್ಗೆ ಅವರು ಟ್ವೀಟಿಸಿದ್ದು, ನನ್ನ ಹೊಸ ಗಾಡಿ ನೋಡಿ ...ಶೂಟಿಂಗ್ ನಲ್ಲಿ ಬಿಜಿಯಾಗಿದ್ದೇನೆ. ಆದಕಾರಣ ಇದರ ಮೇಲೆ ಸವಾರಿ ಮಾಡಲು ಸಮಯ ಸಿಗುತ್ತಿಲ್ಲ. ಯಾವಾಗ ಈ ಇದರ ಮೇಲೆ ಸವಾರಿ ಮಾಡುತ್ತೀನಪ್ಪಾ ಎಂದು ಕಾತುರದಿಂದ ಎದುರು ನೋಡುತ್ತಿದ್ದಾರೆ ಪ್ರಕಾಶ್ ರೈ. [ಪ್ರಕಾಶ್ ರಾಜ್ ಹೊಸ ಚಿತ್ರ 'ದೇವರ ನಾಡಲ್ಲಿ' ಟ್ರೇಲರ್]

Actor Prakash Raj dream comes true

ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಲೇಸು ಎಂಬ ಗಾದೆ ಮಾತೊಂದಿದೆ. ಆ ಮಾತನ್ನು ಪ್ರಕಾಶ್ ರೈ ಸಹ ಒಪ್ಪುತ್ತಾರೆ. ಒಪ್ಪುವುದೇನು ಬಂತು ಅದನ್ನು ಕಾರ್ಯಗತ ಮಾಡಿ ತೋರಿಸಿದ್ದಾರೆ. ಟ್ರ್ಯಾಕ್ಟರ್ ಕೊಂಡುಕೊಂಡಿರುವ ಪ್ರಕಾಶ್ ರೈ ಉತ್ತು ಬಿತ್ತು ಬೆಳೆ ತೆಗೆಯಲು ಸಿದ್ಧವಾಗಿದ್ದಾರೆ.

ಸದ್ಯಕ್ಕೆ ಪ್ರಕಾಶ್ ರೈ ಅವರು ಮೋಸ್ಟ್ ಸೇಲಬರ್ ಸ್ಟಾರ್. ಸದಾ ಶೂಟಿಂಗ್ ನಲ್ಲಿ ಬಿಜಿಯಾಗಿರುವ ಪ್ರಕಾಶ್ ರೈ ಕೋಟ್ಯಾಂತರ ರುಪಾಯಿ ಸಂಭಾವನೆ ತೆಗೆದುಕೊಳ್ಳುತ್ತಿರುವ ಕಲಾವಿದ. ಸ್ವಲ್ಪ ಸಮಯ ಸಿಕ್ಕಿದರೆ ಸಾಕು ತೋಟದ ಮನೆಯಲ್ಲಿ ಕಾಲ ಕಳೆಯುತ್ತಾರೆ.

ಸದ್ಯಕ್ಕೆ ಪ್ರಕಾಶ್ ರೈ ಅವರು ಬಿ ಸುರೇಶ್ ಅವರ ದೇವರ ನಾಡಲ್ಲಿ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಜಾತಿ ಧರ್ಮದ ಸಂಘರ್ಷ, ಪ್ರೀತಿ ಪ್ರೇಮ, ಬಾಂಬು, ಭಯ, ಹೀಗೆ ಅನೇಕ ಕುತೂಹಲಕಾರಿ ಅಂಶಗಳು 'ದೇವರ ನಾಡಲ್ಲಿ' ಚಿತ್ರದಲ್ಲಿದೆ. (ಫಿಲ್ಮಿಬೀಟ್ ಕನ್ನಡ)

English summary
Actor, director and producer Prakash Raj's long term dream comes true. Prakash Raj tweet about his new Tractor, "my new vehicle....... Cute lil one .... Can't wait to come back from shoot n take a ride ... Dreams come true".

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada