»   » ಕನ್ನಡಿಗ ಪ್ರಕಾಶ್ ರೈ ಈಗ ಮಿಲಿಯನೇರ್ ನಟ

ಕನ್ನಡಿಗ ಪ್ರಕಾಶ್ ರೈ ಈಗ ಮಿಲಿಯನೇರ್ ನಟ

Posted By:
Subscribe to Filmibeat Kannada

ಪರಭಾಷಾ ಚಿತ್ರಗಳಲ್ಲಿ ಮಿಂಚುತ್ತಿರುವ ಕನ್ನಡಿಗ ಪ್ರಕಾಶ್ ಈಗ ಮಿಲಿಯನೇರ್ ನಟ. ಸಾಮಾನ್ಯವಾಗಿ ಫೇಸ್ ಬುಕ್, ಟ್ವಿಟ್ಟರ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ನಾಯಕಿಯರಿಗೆ ಹೆಚ್ಚು ಲೈಕ್ಸ್ ಇರುತ್ತವೆ. ಆದರೆ ಪ್ರಕಾಶ್ ರೈ ಅವರ ಫೇಸ್ ಬುಕ್ ಖಾತೆ ಮೂವತ್ತು ಲಕ್ಷ (ಮೂರು ಮಿಲಿಯನ್) ಲೈಕ್ಸ್ ಪಡೆದಿದೆ.

ಫೇಸ್ ಬುಕ್, ಟ್ವಿಟ್ಟರ್, ಜೀಪ್ಲಸ್ ನಂತಹ ಸಾಮಾಜಿಕ ಜಾಲತಾಣಗಳು ಸಿನಿಮಾ ತಾರೆಗಳ ಪಾಲಿಗೆ ಹೊಸ ವೇದಿಕೆಯನ್ನೇ ಕಲ್ಪಿಸಿವೆ. ಈ ಜಾಲತಾಣಗಳ ಮೂಲಕ ತಮ್ಮ ಅಭಿಮಾನಿ ದೇವರುಗಳನ್ನು ತಲುಪಲು ತಾರೆಗಳಿಗೆ ಸಾಧ್ಯವಾಗಿದೆ. [ಒಗ್ಗರಣೆ ಚಿತ್ರ ವಿಮರ್ಶೆ]


ತಮ್ಮ ಚಿತ್ರದ ಬಗ್ಗೆ, ತಮ್ಮ ಮುಂದಿನ ಕನಸುಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾ ಅವರಿಗೆ ಇನ್ನಷ್ಟು ಆಪ್ತವಾಗುತ್ತಿದ್ದಾರೆ. ಕೆಲವು ತಾರೆಗಳು ಈ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ. ಅಂತಹ ತಾರೆಗಳಲ್ಲಿ ನಮ್ಮ ಪ್ರಕಾಶ್ ರೈ ಉರುಫ್ ಪ್ರಕಾಶ್ ರಾಜ್ ಸಹ ಒಬ್ಬರು.

ತಮ್ಮ 'ಒಗ್ಗರಣೆ' ಚಿತ್ರದ ವೇಳೆ ಅವರು ಫೇಸ್ ಬುಕ್ಕನ್ನು ತುಂಬಾ ಪರಿಣಾಮಕಾರಿಯಾಗಿ ಬಳಸಿಕೊಂಡು ಅಭಿಮಾನಿಗಳ ಹೃದಯಕ್ಕೆ ಇನ್ನಷ್ಟು ಹತ್ತಿರವಾಗಿದ್ದರು. ಇದೀಗ ಅವರ ಫೇಸ್ ಬುಕ್ ಖಾತೆಯನ್ನು ಮೂವತ್ತು ಲಕ್ಷ ಮಂದಿ ಲೈಕ್ ಮಾಡಿದ್ದು ಫೇಸ್ ಬುಕ್ ನಲ್ಲೂ ಹೊಸ ಮೈಲಿಗಲ್ಲು ಸಾಧಿಸಿದ್ದಾರೆ.

ಈ ಬಗ್ಗೆ ಪ್ರಕಾಶ್ ರೈ ಅವರು, ತಮ್ಮ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದು ತಮ್ಮ ಪ್ರೀತಿ ಅಭಿಮಾನ ಹೀಗೇ ಮುಂದುವರಿಯಲಿ. ನಿಮ್ಮ ಈ ಅಭಿಮಾನ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಅದೇ ರೀತಿ ಇನ್ನೂ ಹೆಚ್ಚಿನ ಹೊಸ ಹೊಸ ಚಿತ್ರಗಳನ್ನು ಮಾಡಲು ನನಗೆ ಹೊಸ ಶಕ್ತಿ ಸಾಮರ್ಥ್ಯಗಳನ್ನು ನೀಡಿದೆ. ನಿಮ್ಮ ಪ್ರೀತಿ ವಿಶ್ವಾಸ ಹೀಗೇ ಇರಲಿ ಎಂದಿದ್ದಾರೆ. (ಫಿಲ್ಮಿಬೀಟ್ ಕನ್ನಡ)

Post by Prakash Raj.
English summary
Facebook is the new media and film stars got as many fans on the net. Recently single take actor Prakash Raj too entered in to 3 millionaire club which is most common for heroes and heroines. It is a big and rare surprise. Isn’t it? Yes, it is, for Prakash Raj too. Crossing a million likes made him very happy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada