»   » ನಟ ಪ್ರಕಾಶ್ ರೈಗೆ ಮೂರು ದಿನಗಳ ಕಾಲ ಬೆಡ್ ರೆಸ್ಟ್

ನಟ ಪ್ರಕಾಶ್ ರೈಗೆ ಮೂರು ದಿನಗಳ ಕಾಲ ಬೆಡ್ ರೆಸ್ಟ್

By: ಅನಂತರಾಮು, ಹೈದರಾಬಾದ್
Subscribe to Filmibeat Kannada

ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಂಡು ತಮ್ಮ ಅಭಿಮಾನಿಗಳನ್ನು ನಿರಂತರ ಕನೆಕ್ಟ್ ಆಗುತ್ತಿರುವ ತಾರೆಗಳಲ್ಲಿ ನಟ, ನಿರ್ದೇಶಕ ಪ್ರಕಾಶ್ ರೈ ಸಹ ಒಬ್ಬರು. ಟ್ವಿಟ್ಟರ್ ಮೂಲಕ ತಮ್ಮ ಚಿತ್ರಗಳು ಹಾಗೂ ತಮ್ಮ ಬಗ್ಗೆ ತಾಜಾ ಸಮಾಚಾರ ನೀಡುತ್ತಲೇ ಇರುತ್ತಾರೆ.

ಇದೀಗ ಅವರು ಟ್ವೀಟ್ ಮಾಡಿದ್ದು, ಹದಗೆಟ್ಟ ತಮ್ಮ ಆರೋಗ್ಯದ ಬಗ್ಗೆ ಸ್ಫುಟವಾಗಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟಿಸಿರುವ ಅವರು, "ಕೋಲ್ಡ್... ಫೀವರ್... ಡಾಕ್ಟರ್ಸ್... ಮೂರು ದಿನಗಳ ಕಾಲ ಬೆಡ್ ರೆಸ್ಟ್ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ..." ಎಂದಿದ್ದಾರೆ. [ಪ್ರಕಾಶ್ ರೈ ಪುತ್ರಿ ಈಗ ಕುಹೂ ಕುಹೂ ಕೋಗಿಲೆ]

Actor Prakash Raj under bed rest for 3 days

ಸದ್ಯಕ್ಕೆ ಅವರು ಹೈದರಾಬಾದಿನ ತನ್ನ ಫಾಮ್ ಹೌಸ್ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಬಿಡುವಿಲ್ಲದ ಚಿತ್ರೀಕರಣದಲ್ಲಿ ಪ್ರಕಾಶ್ ರೈ ತೊಡಗಿಕೊಂಡಿದ್ದೇ ಅವರ ಶೀತ ಜ್ವರಕ್ಕೆ ಕಾರಣವಾಗಿದೆ. ಸದ್ಯಕ್ಕೆ ಜೂನಿಯರ್ ಎನ್ಟಿಆರ್ ನಾಯಕನಟನಾಗಿರುವ 'ಟೆಂಪರ್' ಎಂಬ ಚಿತ್ರದಲ್ಲಿ ಪ್ರಕಾಶ್ ರೈ ಬಿಜಿಯಾಗಿದ್ದಾರೆ.


ಕಿಚ್ಚ ಸುದೀಪ್ ಅವರ 'ರನ್ನ' ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ಐರಾವತ' ಚಿತ್ರಗಳಲ್ಲೂ ಪ್ರಕಾಶ್ ರೈ ಅವರು ಪ್ರಮುಖ ಪಾತ್ರ ಪೋಷಿಸುತ್ತಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆಗಿನ 'ಮಂಜಿನಹನಿ' ಸೇರಿದಂತೆ ಸಾಗುವ ದಾರಿಯಲ್ಲಿ, ದೇವರ ನಾಡಿನಲ್ಲಿ ಹಾಗೂ ಝಾನ್ಸಿ ಐಪಿಎಸ್ ಚಿತ್ರಗಳು ಪ್ರಕಾಶ್ ರೈ ಕೈಯಲ್ಲಿರುವ ಕನ್ನಡ ಸಿನಿಮಾಗಳು. [ಒಗ್ಗರಣೆ ಚಿತ್ರ ವಿಮರ್ಶೆ]ಪ್ರಕಾಶ್ ರೈ ನಟಿಸಿ, ನಿರ್ದೇಶಿಸಿ, ನಿರ್ಮಿಸಿದ್ದ 'ಒಗ್ಗರಣೆ' ಚಿತ್ರದ ಬಳಿಕ ಅವರು ಕನ್ನಡದಲ್ಲಿ ಸಾಕಷ್ಟು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಸದಭಿರುಚಿಯ ಕಥೆಯ 'ಒಗ್ಗರಣೆ' ಚಿತ್ರ ಎಲ್ಲರ ಮೆಚ್ಚುಗೆ ಪಾತ್ರವಾಗಿದ್ದು ಗೊತ್ತೇ ಇದೆ. ಪ್ರಕಾಶ್ ರೈ ಆದಷ್ಟು ಬೇಗ ಚೇತರಿಕೊಳ್ಳಲಿ ಎಂಬ ಹಾರೈಸೋಣ.

English summary
Prakash Raj shared his thoughts like this - 'Cold..fever..doctors order 3 day bed rest .This winters campfire's Chilly misty nights by my pond. And yesssss ...my cigarettes grrrrrrr'-

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada