»   » ಬಿಲ್ಡಪ್ ಗಾಗಿ 'ಅಡ್ವಾಣಿ'ಯವರನ್ನ ಭೇಟಿ ಮಾಡಿದ ನಟ ಪ್ರಥಮ್

ಬಿಲ್ಡಪ್ ಗಾಗಿ 'ಅಡ್ವಾಣಿ'ಯವರನ್ನ ಭೇಟಿ ಮಾಡಿದ ನಟ ಪ್ರಥಮ್

Posted By:
Subscribe to Filmibeat Kannada
ಎಲ್ ಕೆ ಅಡ್ವಾಣಿಯವರನ್ನ ಭೇಟಿ ಮಾಡಿದ ಒಳ್ಳೆ ಹುಡುಗ ಪ್ರಥಮ್ | Filmibeat Kannada

ಬಿಗ್ ಬಾಸ್ ರಿಯಾಲಿಟಿ ಶೋ ನಿಂದಲೇ ಪ್ರಖ್ಯಾತಿ ಪಡೆದುಕೊಂಡಿರೋ ನಟ ಹಾಗೂ ನಿರ್ದೇಶಕ ಪ್ರಥಮ್ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚಿಗಷ್ಟೇ ಮೈಸೂರು ಮೂಲದ ಹುಡುಗಿಯನ್ನ ಮದುವೆಯಾಗುತ್ತಿದ್ದೇನೆ ಎಂದು ಘೋಷಣೆ ಮಾಡಿದ್ದ ಪ್ರಥಮ್ ಈಗ ಬಿಜೆಪಿ ಪಕ್ಷದ ಬೀಷ್ಮ ಅಂತಾನೆ ಹೆಸರುಗಳಿಸಿರೋ 'ಎಲ್ ಕೆ ಅಡ್ವಾಣಿ'ಯವರನ್ನ ಭೇಟಿ ಮಾಡಿದ್ದಾರೆ.

ರಿಯಾಲಿಟಿ ಶೋಗೆ ಹೋಗುವ ಮುಂಚಿನಿಂದಲೂ ರಾಜಕಾರಣಿಗಳ ಜೊತೆ ಉತ್ತಮ ಬಾಂದವ್ಯವನ್ನ ಹೊಂದಿದ್ದ ಪ್ರಥಮ್ ತಮ್ಮ ಸಿನಿಮಾಗಳಿಗೆ ರಾಜ್ಯದ ಪ್ರಮುಖ ರಾಜಕೀಯ ವ್ಯಕ್ತಿಗಳಿಂದ ಕ್ಲಾಪ್ ಮಾಡಿಸಿದ್ದರು. ಈಗ ತಾವೇ ನಿರ್ದೇಶನ ಮಾಡುತ್ತಿರುವ ಸಿನಿಮಾದ ವಿಚಾರವಾಗಿ ಅಡ್ವಾಣಿಯನ್ನ ಭೇಟಿ ಮಾಡಿದ್ದಾರೆ ಪ್ರಥಮ್.

ಸಿನಿಮಾದಿಂದ ರಾಜಕೀಯದತ್ತ

ನಟ, ನಿರ್ದೇಶಕ ಪ್ರಥಮ್ ಇತ್ತಿಚಿಗಷ್ಟೇ ಎಲ್ ಕೆ ಅಡ್ವಾಣಿಯವರನ್ನ ಬೇಟಿ ಮಾಡಿದ್ದಾರೆ. ತಾವೇ ನಿರ್ದೇಶನ ಮಾಡುತ್ತಿರುವ 'ಬಿಲ್ಡಪ್' ಪ್ರಥಮ್ ಸಿನಿಮಾದ ಕ್ಲಾಪ್ ಬೋರ್ಡ್ ಅನ್ನ ಅಡ್ವಾಣಿಯವರಿಗೆ ನೀಡಿ ಆರ್ಶೀವಾದವನ್ನ ಪಡೆದುಕೊಂಡಿದ್ದಾರೆ.

ಸಿನಿಮಾಗಾಗಿ ರಾಜಕೀಯ ವ್ಯಕ್ತಿಗಳ ಭೇಟಿ

ಎಲ್ ಕೆ ಅಡ್ವಾಣಿಯವರನ್ನ ಮಾತ್ರವಲ್ಲದೆ ಪ್ರಥಮ್ ಪ್ರಧಾನಮಂತ್ರಿ ಮೋದಿಯವರನ್ನೂ ಭೇಟಿ ಮಾಡಿದ್ದಾರೆ. ತಮ್ಮ ಸಿನಿಮಾ ಟೈಟಲ್ ನಂತೇ ಎಲ್ಲಾ ವಿಚಾರಗಳಿಗೂ ಬಿಲ್ಡಪ್ ಇರಬೇಕು ಅನ್ನೋದು ಪ್ರಥಮ್ ಅನಿಸಿಕೆ. ಈ ಕಾರಣದಿಂದ ರಾಜಕೀಯದಲ್ಲಿ ಸಾಕಷ್ಟು ಪ್ರಖ್ಯಾತಿ ಪಡೆದಿರೋ ವ್ಯಕ್ತಿಗಳನ್ನ ಬೇಟಿ ಮಾಡುತ್ತಿದ್ದಾರೆ.

ಆಕ್ಷನ್ ಕಟ್ ಹೇಳಲು ಪ್ರಥಮ್ ಸಜ್ಜು

ಪ್ರಥಮ್ ಆಕ್ಷನ್ ಕಟ್ ಹೇಳ್ತಿರೋ ಬಿಲ್ಡಪ್ ಪ್ರಥಮ್ ಸಿನಿಮಾ ಇನ್ನ ಕೆಲವೇ ದಿನಗಳಲ್ಲಿ ಶುರುವಾಗಲಿದೆ. ಈಗಾಗ್ಲೆ ಫೋಟೋ ಶೂಟ್ ಮುಗಿಸಿದ್ದು ಮುಂದಿನವಾರದಲ್ಲಿ ಶೂಟಿಂಗ್ ಪ್ರಾರಂಭವಾಗಲಿದೆ. ದೇಶದಲ್ಲಿ ಹೆಚ್ಚು ಪ್ರಖ್ಯಾತಿ ಪಡೆದಿರೋ ನಾಯಕಿ ಪ್ರಥಮ್ ಜೋಡಿಯಾಗಿ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ.

ಏಳು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್

ಸದ್ಯ ಕನ್ನಡ ಸಿನಿಮಾರಂಗದಲ್ಲಿ ಪ್ರಥಮ್ ಕೂಡ ಬ್ಯುಸಿ ಇರೋ ನಾಯಕ. ಏಳು ಸಿನಿಮಾಗಳು ಪ್ರಥಮ್ ಕೈನಲ್ಲಿದ್ದು ಒಂದಾದ ನಂತ್ರ ಮತ್ತೊಂದರಂತೆ ಸಿನಿಮಾಗಳ ಚಿತ್ರೀಕರಣದಲ್ಲಿ ಪ್ರಥಮ್ ಭಾಗಿಯಾಗುತ್ತಿದ್ದಾರೆ.

English summary
Actor ,director pratam meets L K Advani. and received blessings for his next direction film

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada