For Quick Alerts
  ALLOW NOTIFICATIONS  
  For Daily Alerts

  'ಅಡ್ಡ' ಶೂಟಿಂಗ್‌ನಲ್ಲಿ ಬಸವಳಿದು ಕುಸಿದುಬಿದ್ದ ಪ್ರೇಮ್

  By Rajendra
  |
  ಪ್ರೇಮ್ ಪುಟ್ಟದೊಂದು ಅವಘಡ ಮಾಡಿಕೊಂಡಿದ್ದಾರೆ. ಯಾವುದೇ ಅಪಾಯವಾಗಿಲ್ಲ. ಆದರೆ ಸ್ಟಡಿ ಕ್ಯಾಮೆರಾವೊಂದು ಈ ಅವಘಡಕ್ಕೆ ತುತ್ತಾಗಿ ನಾಶವಾದದ್ದು ಸತ್ಯ. ಆದದ್ದೇನೆಂದರೆ, ಪ್ರೇಮ್ ಈಗ 'ಪ್ರೇಮ್ ಅಡ್ಡಾ' ಎಂಬ ಸಿನಿಮಾವೊಂದರಲ್ಲಿ ಅಭಿನಯಿಸುತ್ತಿರುವುದು ಗೊತ್ತಿರಬೇಕು.

  ಆ ಚಿತ್ರದ ಚಿತ್ರೀಕರಣ ಬೆಂಗಳೂರಿನ ಸುತ್ತಮುತ್ತ ನಡೆಯುತ್ತಿದೆ. ಆಕ್ಷನ್ ಸನ್ನಿವೇಶವೊಂದರಲ್ಲಿ ಅಭಿನಯಿಸುತ್ತಿದ್ದ ಪ್ರೇಮ್‌ಗೆ ಸ್ಟಡಿ ಕ್ಯಾಮೆರಾವೊಂದನ್ನ ಕಟ್ಟಿ ದೃಶ್ಯ ಚಿತ್ರೀಕರಿಸಿಕೊಳ್ಳಲಾಗುತ್ತಿತ್ತು. ಭರ್ತಿ ಮೂವತ್ತು ಕೆಜಿಯಿದ್ದ ಆ ಕ್ಯಾಮೆರಾವನ್ನ ಹೊತ್ತುಕೊಂಡೇ ಪ್ರೇಮ್ ಗಲ್ಲಿಗಳೊಳಕ್ಕೆ ನುಸುಳಬೇಕಿತ್ತು. ಹೀಗೆ ಎರಡು ಬಾರಿ ಅದನ್ನ ಕಟ್ಟಿಕೊಂಡು ಓಡಿದ ಪ್ರೇಮ್‌ಗೆ ಮೂರನೆ ಟೇಕ್‌ನ ಹೊತ್ತಿಗೆ ಬಸವಳಿದು ಬಂದಂತಾಗಿದೆ. ಬಿಸಿಲಿನ ಧಗೆ ಮತ್ತು ಆಯಾಸ ಪ್ರೇಮ್ ಕುಸಿದು ಬಿದ್ದಿದ್ದಾರೆ.

  ಅವರ ಮೈಗೆ ಕಟ್ಟಿದ್ದ ಕ್ಯಾಮೆರಾ ಅವರ ಬಿದ್ದ ಬಿರುಸಿಗೆ ಎರಡು ಭಾಗವಾಗಿದೆ. ಪ್ರೇಮ್ ಐದು ನಿಮಿಷಗಳ ಕಾಲ ಪ್ರಜ್ಞಾಹೀನರಾಗಿದ್ದಾರೆ. ನಂತರ ಚಿತ್ರತಂಡದವರು ಓಡಿ ಬಂದು ಆರೈಕೆ ಮಾಡಿದ ಮೇಲಷ್ಟೇ ಪ್ರೇಮ್‌ಗೆ ಆದದ್ದೇನು ಎನ್ನುವುದು ಅರಿವಾದದ್ದು. ಎನರ್ಜಿ ಡ್ರಿಂಕ್ ಕುಡಿದ ಪ್ರೇಮ್ ನಿಧಾನವಾಗಿ ಸುಧಾರಿಸಿಕೊಂಡು ಮತ್ತೆ ಶೂಟಿಂಗ್‌ಗೆ ಮರಳಿದ್ದಾರೆ. ಪ್ರೇಮ್ ಅಡ್ಡಾ ಪ್ರಗತಿಯಲ್ಲಿದೆ. (ಒನ್‌ಇಂಡಿಯಾ ಕನ್ನಡ)

  English summary
  Kannada actor Prem breaks down on his upcoming Prem Adda shooting spot and his study camera also broken. Prem Adda movie begins on the backdrop of the 80s. It is the story of group of five friends.
  Tuesday, May 15, 2012, 19:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X