For Quick Alerts
  ALLOW NOTIFICATIONS  
  For Daily Alerts

  ಪುನೀತ್ ನೋಡಿಕೊಳ್ಳುತ್ತಿದ್ದ 1800 ಮಕ್ಕಳ ಶಿಕ್ಷಣ ಜವಾಬ್ದಾರಿ ವಿಶಾಲ್ ವಹಿಸಿಕೊಳ್ಳಲು ಕಾರಣವೇನು?

  |

  ಪರಭಾಷಾ ನಟರೊಂದಿಗೆ ಪುನೀತ್ ವಿಶೇಷವಾದ ನಂಟು ಹೊಂದಿದ್ದರು. ಅಂಥವರಲ್ಲಿ ನಟ ವಿಶಾಲ್ ಕೂಡ ಒಬ್ಬರು. ವಿಶಾಲ್ ಕರ್ನಾಟಕದಲ್ಲಿ ರಾಕ್ಷಸಿ ಸಿನಿಮಾದ ಆಡಿಯೋ ಲಾಂಚ್ ಮಾಡಿದಾಗ ಪುನೀತ್ ರಾಜಕುಮಾರ್ ಕೂಡ ವಿಶಾಲ್‌ಗೆ ಸಾಥ್ ನೀಡಿದ್ದರು. ಬಳಿಕ ಇವರ ಇವರ ಸ್ನೇಹ ಮತ್ತು ನಂಟು ಹಾಗೆಯೇ ಮುಂದುವರೆದಿತ್ತು. ಕೆಲ ವರ್ಷಗಳ ಬಳಿಕ ಪುನೀತ್‌ ರಾಜಕುಮಾರ್‌ ವಿಶಾಲ್‌ ಅಭಿನಯದ ಪೂಜೈ ಸಿನಿಮಾ ಕನ್ನಡಕ್ಕೆ ತಂದರು.

  ತಮಿಳು ನಟ ವಿಶಾಲ್ ಸಿನಿಮಾವನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇಷ್ಟಪಟ್ಟು ಕನ್ನಡಕ್ಕೆ ತಂದಿದ್ದರು. ಕನ್ನಡದಲ್ಲಿ ಪುನೀತ್ ರಾಜಕುಮಾರ್ ಅಭಿನಯಿಸಿದ ಅಂಜನಿಪುತ್ರ ಸಿನಿಮಾ ತಮಿಳಿನ ಪೂಜೈ ಚಿತ್ರದ ರಿಮೇಕ್. ಈ ಸಿನಿಮಾವನ್ನು ಪುನೀತ್ ರಾಜಕುಮಾರ್ ಮನಸಾರೆ ಇಷ್ಟಪಟ್ಟಿದ್ದರು. ಹಾಗಾಗಿ ಈ ಸಿನಿಮಾವನ್ನು ಕನ್ನಡಕ್ಕೆ ತಂದಿದ್ದರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದು ಎ.ಹರ್ಷ. ಅಪ್ಪು ಬಗ್ಗೆ ಮಾತನಾಡುತ್ತಾ ನಟ ವಿಶಾಲ್‌ ಈ ವಿಚಾರವನ್ನು ಕೂಡ ಸ್ಟೇಟ್ ಮೇಲೆ ಹಂಚಿಕೊಂಡರು.

  ಇಂತಹದ್ದೊಂದು ಉತ್ತಮ ಸ್ನೇಹ ಪುನೀತ್ ರಾಜ್‌ಕುಮಾರ್ ಮತ್ತು ವಿಶಾಲ್ ಮಧ್ಯೆ ಇತ್ತು. ಈ ಕಾರಣದಿಂದಲೇ ಸ್ನೇಹಿತನ ಜವಾಬ್ದಾರಿಯನ್ನು ತನ್ನ ಜವಾಬ್ದಾರಿ ಎಂದು ತಿಳಿದು ತಮ್ಮ ಉತ್ತಮ ನಿರ್ಧಾರವೊಂದನ್ನು ಪ್ರಕಟಿಸಿದ್ದಾರೆ.

  ಪುನೀತ್‌ ರಾಜ್‌ಕುಮಾರ್‌ ಗಾಗಿ ವಿಶೇಷ ಜವಾಬ್ದಾರಿ ಹೊತ್ತ ನಟ ವಿಶಾಲ್

  ನಟ ಪುನೀತ್‌ ರಾಜ್‌ಕುಮಾರ್‌ ಇಲ್ಲ ಎನ್ನುವ ಸಂಗತಿ ಯಾರೊಬ್ಬರಿಗೂ ನಂಬಲು ಸಾಧ್ಯವಿಲ್ಲ. ಅದರಲ್ಲೂ ಅಪ್ಪು ಗೊತ್ತಿರುವ ಸಿನಿಮಾ ಮಂದಿ ಅವರನ್ನ ಮರೆಯಲು ಸಾಧ್ಯವೇ ಇಲ್ಲ. ತಮಿಳು ನಟ ವಿಶಾಲ್‌ ಅಪ್ಪು ನೆನೆಪು ಭಾವುಕರಾಗಿದ್ದಾರೆ. ಜೊತೆಗೆ ಅಪ್ಪು ಪಾಳಿನ ದೊಡ್ಡ ಜವಾಬ್ದಾರಿಯನ್ನ ವಹಿಸಿಕೊಂಡಿದ್ದಾರೆ.

  ತಮಿಳು ನಟ ವಿಶಾಲ್ ಪುನೀತ್ ರಾಜ್‌ಕುಮಾರ್‌ ಅವರನ್ನ ನೆನೆದು ಭಾವುಕರಾಗಿದ್ದಾರೆ. ಹೈದರಾಬಾದ್ ನಲ್ಲಿ ಭಾನುವಾರ ನಡೆದ ಎನಿಮಿ ಚಿತ್ರದ ಪ್ರೀ-ರಿಲೀಸ್‌

  ಕಾರ್ಯಕ್ರಮದಲ್ಲಿ ವಿಶಾಲ್ ಪುನೀತ್‌ ನೆನದು ಭಾವುಕ ನುಡಿಗಳನ್ನ ಆಡಿದ್ದಾರೆ. ಪುನೀತ್ ರಾಜಕುಮಾರ್ ಇನ್ನಿಲ್ಲದ ಸುದ್ದಿ ವಿಶಾಲ್ ಮನಸ್ಸನ್ನು ಭಾರ ಮಾಡಿದ. ಈ ಸುದ್ದಿಯಿಂದ ವಿಶಾಲ್ ಅವರಿಗೂ ಶಾಕ್‌ ಆಗಿದೆ. "ಈ ಕಾರ್ಯಕ್ರಮವನ್ನು ಮಾಡಬೇಕೋ ಬೇಡವೋ ಎನ್ನುವಂತಹ ಒಂದು ಅಳಕು ಕೂಡ ಕಾಡುತ್ತಿತ್ತು. ಯಾಕಂದ್ರೆ ಪುನೀತ್ ರಾಜಕುಮಾರ್ ನನಗೆ ಒಬ್ಬ ಒಳ್ಳೆಯ ಸ್ನೇಹಿತ ಕೂಡ. ಅವರು ಇನ್ನಿಲ್ಲ ಅನ್ನೋ ಸುದ್ದಿ ಯೋಚನೆ ಮಾಡೋದಕ್ಕೆ ಆಗ್ಲಿ, ಅಥವಾ ನಂಬುವುದಕ್ಕೆ ಆಗಲಿ ಸಾಧ್ಯವೇ ಆಗಿರಲಿಲ್ಲ. ಪುನೀತ್ ರಾಜಕುಮಾರ್ ಅಂತಹ ಒಬ್ಬ ಡೌನ್ ಟು ಅರ್ಥ್ ವ್ಯಕ್ತಿಯನ್ನು ಸಿನಿಮಾರಂಗದಲ್ಲಿ ನಾನು ನೋಡಿಯೇ ಇಲ್ಲ. ಅವರು ಮನೆಯಲ್ಲಿ ಆಗಲಿ, ಸಿನಿಮಾದಲ್ಲಿ ಆಗಲಿ ಅಥವಾ ಹೊರಗೆ ಎಲ್ಲೇ ಸಿಕ್ಕರು ಒಂದೇ ರೀತಿ ಇತುತ್ತಿದ್ದರು" ಎಂದು ವಿಶಾಲ್‌ ಅಪ್ಪು ಕುತು ಮಾತನಾಡಿದರು.

  ಇದೇ ಕಾರ್ಯಕ್ರಮದಲ್ಲಿ ಪುನೀತ್ ರಾಜಕುಮಾರ್ ಗೆ ಇಡೀ ಚಿತ್ರತಂಡ ಶ್ರದ್ಧಾಂಜಲಿಯನ್ನು ಅರ್ಪಿಸಿತು. ಇನ್ನೂ ಇದೇ ವೇಳೆ ವಿಶಾಲ್ ಅಪ್ಪು ಕುರಿತು ಸ್ಪೂರ್ತಿದಾಯಕ ಮಾತುಗಳನ್ನಾಡಿದರು. ಜೊತೆಗೆ ಪುನೀತ್ ರಾಜಕುಮಾರ್ ಅವರ ಜೊತೆಗಿನ ತಮ್ಮ ಬಾಂಧವ್ಯವನ್ನು ಹಂಚಿಕೊಂಡರು. "ಪುನೀತ್ ರಾಜಕುಮಾರ್ ಕೇವಲ ಸಿನಿಮಾರಂಗಕ್ಕೆ ಒಬ್ಬ ನಟನಾಗಿ ಸೀಮಿತವಾಗಿರಲಿಲ್ಲ. ಅವರು ಇಲ್ಲದೇ ಇರುವುದು ಸಮಾಜಕ್ಕೆ ಒಂದು ದೊಡ್ಡ ನಷ್ಟ" ಎಂದಿದ್ದಾರೆ. ಇದೇ ವೇಳೆ ವಿಶಾಲ ಪುನೀತ್ ರಾಜಕುಮಾರ್ ಅವರ ಸಾಮಾಜಿಕ ಕಾರ್ಯವನ್ನು ಮುಂದುವರೆಸಿಕೊಂಡು ಹೋಗುವುದಾಗಿ ಹೇಳಿಕೊಂಡಿದ್ದಾರೆ.

  ನಟ ಪುನೀತ್ ರಾಜಕುಮಾರ್ ಕೇವಲ ಸ್ಟಾರ್ ಆಗಿ ತೆರೆ ಮೇಲೆ ಮಿಂಚಿದ್ದು ಮಾತ್ರವಲ್ಲ. ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದರು. ಜೊತೆಗೆ ಎಡಗೈನಲ್ಲಿ ಕೊಟ್ಟಿದ್ದು ಬಲಗೈಗೆ ಗೊತ್ತಾಗಬಾರದು ಎನ್ನುವಂತಹ ರೀತಿಯಲ್ಲಿ ಪುನೀತ್ ರಾಜಕುಮಾರ್ ಅವರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾರೆ. ಅದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಅವರು 1800 ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಹೊತ್ತಿದ್ದರು. ಈ ವಿಚಾರದ ಬಗ್ಗೆಯೂ ನಟ ವಿಶಾಲ್ ಮಾತನಾಡಿ ಈ ಜವಾಬ್ದಾರಿಯನ್ನು ಇನ್ನುಮುಂದೆ ತಾವೇ ನೋಡಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ.

  "ಪುನೀತ್ ರಾಜಕುಮಾರ್ 1800 ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನೂ ಹೊತ್ತುಕೊಂಡಿರುವ ವಿಚಾರದ ಬಗ್ಗೆ ನನಗೆ ತುಂಬಾ ಹೆಮ್ಮೆಯಿಂದ. ಈ ಕಾರ್ಯವನ್ನು ಮುಂದುವರಿಸುತ್ತೇನೆ ಎಂದು ನಾನು ಮಾತು ಕೊಡುತ್ತಿದ್ದೇನೆ. ನಾನು ಇನ್ನು ಮುಂದೆ ಈ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನೂ ಹೊತ್ತುಕೊಳ್ಳುತ್ತೇನೆ" ಎಂದು ವಿಶಾಲ್ ವೇದಿಕೆ ಮೇಲೆ ನುಡಿದಿದ್ದಾರೆ.

  "ಈ ರೀತಿಯ ಕಾರ್ಯವನ್ನು ಸರ್ಕಾರ ಮಾಡುತ್ತದೆ ಎಂದರೆ ನಂಬಬಹುದು. 1800 ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡುವುದು ಸುಲಭದ ಮಾತಲ್ಲ. ಆದರೆ ಒಬ್ಬ ವ್ಯಕ್ತಿ ತಾನೊಬ್ಬನೇ ಇಂತಹ ದೊಡ್ಡ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ ಎಂದರೇ ಅದು ನಿಜಕ್ಕೂ ಶ್ಲಾಘನಿಯ" ಎಂದಿದ್ದಾರೆ.

  ಪುನೀತ್‌ ರಾಜ್‌ಕುಮಾರ್‌ ಇಂಥಹ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದರು. ಆದರೆ ಈ ಬಗ್ಗೆ ಅಷ್ಟಾಗಿ ಯಾರಿಗೂ ಗೊತ್ತಿರಲಿಲ್ಲ. ಯಾಕೆಂದರೆ ತಾನು ಮಾಡಿದ್ದನ್ನ ಹೇಳಿಕೊಂಡು ತಿರುಗುವ ವ್ಯಕ್ತಿ ಅಪ್ಪು ಆಗಿರಲಿಲ್ಲ. ಹಾಗಾಗಿ ಅವರ ಈ ಕಾರ್ಯಗಳು ತೆರೆಮರೆಯಲ್ಲಿಯೇ ನಡೆಯುತ್ತಿದ್ದವು. ಇಂತಹ ಅನೇಕ ಕಾರ್ಯಗಳಲ್ಲಿ ಅಪ್ಪು ತೊಡಿಸಿ ಕೊಂಡಿದ್ದರು. ಅಂಥಹ ಉತ್ತಮ ಜವಾಬ್ದಾರಿಗಳಲ್ಲಿ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಜವಾಬ್ದಾರಿಯನ್ನ ನಟ ವಿಶಾಲ್‌ ಹೊತ್ತುಕೊಂಡಿದ್ದಾರೆ.

  English summary
  Actor Puneeth Rajkumar Has Special Bonding with Other Industry Stars,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X