For Quick Alerts
  ALLOW NOTIFICATIONS  
  For Daily Alerts

  ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ಪುನೀತ್ ರಾಜ್ ಕುಮಾರ್

  By Naveen
  |
  ಮೋದಿಯನ್ನು ಭೇಟಿ ಆದ ಪವರ್ ಸ್ಟಾರ್ | Puneeth rajkumar meets modi | FIlmibeat Kannada

  ಕರ್ನಾಟಕದ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನ ಇಂದು (ಮೇ 3) ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಭೇಟಿ ಮಾಡಿದ್ದಾರೆ.

  ಬೆಂಗಳೂರಿನಲ್ಲಿ ಬಿಜೆಪಿ ಸಮಾವೇಶಕ್ಕಾಗಿ ಆಗಮಿಸಿದ್ದ ಮೋದಿ ಅವರನ್ನ ಪತ್ನಿ ಅಶ್ವಿನಿ ಜೊತೆ ಪುನೀತ್ ಭೇಟಿ ಮಾಡಿದ್ದಾರೆ. ಈ ಬಗ್ಗೆ ಫೇಸ್ ಬುಕ್ ನಲ್ಲಿ ಫೋಟೋ ಹಾಕಿ ತಮ್ಮ ಸಂತಸ ಹಂಚಿಕೊಂಡಿರುವ ಪುನೀತ್ ಮೋದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ಇದೇ ವೇಳೆ ಡಾ ರಾಜ್ ಕುಮಾರ್ ಅವರ ಬಗ್ಗೆ ಪುನೀತ್ ರಾಜ್ ಕುಮಾರ್ ಬರೆದಿರುವ 'ವ್ಯಕ್ತಿತ್ವದ ಹಿಂದಿರುವ ವ್ಯಕ್ತಿ' (person behind the personality) ಪುಸ್ತಕವನ್ನ ಪ್ರಧಾನಿಗೆ ಉಡುಗೊರೆಯಾಗಿ ನೀಡಿ ಗೌರವಿಸಿದ್ದಾರೆ. ಅಂದಹಾಗೆ, ಪುನೀತ್ ರಾಜ್ ಕುಮಾರ್ ಚುನಾವಣಾ ಆಯೋಗದ ರಾಯಭಾರಿ ಆಗಿರುವುದು ವಿಶೇಷ.

  ಕರ್ನಾಟಕದಲ್ಲಿ ಮೋದಿ ಭಾಷಣ ಮಾಡುವಾಗ ಡಾ ರಾಜ್ ಕುಮಾರ್ ಅವರ ಹೆಸರನ್ನ ಮರೆಯದೆ ಸ್ಮರಿಸುವುದು ಅಣ್ಣಾವ್ರಿಗೆ ನೀಡುವ ಗೌರವಾಗಿದೆ.

  ಸದ್ಯ, ಪವನ್ ಒಡೆಯರ್ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ನಟ ಸಾರ್ವಭೌಮ' ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯಿಸುತ್ತಿದ್ದಾರೆ. ರಚಿತಾ ರಾಮ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

  English summary
  Kannada actor Puneeth Rajkumar met Prime Minister Narendra Modi along with his wife Ashwini Today (May3rd)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X