For Quick Alerts
  ALLOW NOTIFICATIONS  
  For Daily Alerts

  ಪವರ್ ಸ್ಟಾರ್ ಪ್ರೊಡಕ್ಷನ್ಸ್ ನ ಮೂರನೇ ಸಿನಿಮಾ ಲಾಂಚ್

  |
  ಪುನೀತ್ ರಾಜ್ ಕುಮಾರ್ ಪ್ರೊಡಕ್ಷನ್ಸ್ ನ ಮೂರನೇ ಸಿನಿಮಾ ಲಾಂಚ್ | FILMIBEAT KANNADA

  ಪುನೀತ್ ರಾಜ್ ಕುಮಾರ್ ತಮ್ಮದೆ ಆದ ಪಿ ಆರ್ ಕೆ ಪ್ರೊಡಕ್ಷನ್ಸ್ ನಲ್ಲಿ ಸಿನಿಮಾಗಳನ್ನು ನಿರ್ಮಾಣ ಮಾಡಿಕೊಂಡು ಬರುತ್ತಿದ್ದಾರೆ. ಅವರ ಪ್ರೊಡಕ್ಷನ್ಸ್ ನಲ್ಲಿ ನಿರ್ಮಾಣ ಆದ ಮೊದಲ ಸಿನಿಮಾದ ಬಿಡುಗಡೆಗೆ ಮುಂಚೆಯೇ ತಮ್ಮ ಮೂರನೇ ಸಿನಿಮಾವನ್ನು ಅಪ್ಪು ಶುರು ಮಾಡಿದ್ದಾರೆ.

  'ಕವಲುದಾರಿ' ಚಿತ್ರದ ಮೂಲಕ ನಿರ್ಮಾಪಕ ಆದ ಪುನೀತ್ ರಾಜ್ ಕುಮಾರ್ ಬಳಿಕ 'ಮಯಾಬಜಾರ್' ಚಿತ್ರವನ್ನು ಪ್ರಾರಂಭ ಮಾಡಿದರು. ಅವುಗಳ ನಂತರ ಈಗ ಮತ್ತೊಂದು ಹೊಸ ಸಿನಿಮಾಗೆ ಅಪ್ಪು ಬಂಡವಾಳ ಹಾಕಿದ್ದಾರೆ. ಈ ಸಿನಿಮಾದ ಮುಹೂರ್ತ ಸರಳವಾಗಿ ಇಂದು ನೆರವೇರಿದೆ.

  ಪುನೀತ್ ನಿರ್ಮಾಣದಲ್ಲಿ ಮತ್ತೊಂದು ಹೊಸ ಸಿನಿಮಾ : ಹೀರೋ ಯಾರ್ ಗೊತ್ತಾ?

  ಅಂದಹಾಗೆ, ಇಂದು ಲಾಂಚ್ ಆಗಿರುವ ಪುನೀತ್ ರಾಜ್ ಕುಮಾರ್ ಅವರ ಹೊಸ ಸಿನಿಮಾದ ವಿವರ ಮುಂದಿದೆ ಓದಿ..

  ಪಿ ಆರ್ ಕೆ ಬ್ಯಾನರ್ ನ 3ನೇ ಸಿನಿಮಾ

  ಪಿ ಆರ್ ಕೆ ಬ್ಯಾನರ್ ನ 3ನೇ ಸಿನಿಮಾ

  ನಟ ಪುನೀತ್ ರಾಜ್ ಕುಮಾರ್ ಅವರ ಪಿ ಆರ್ ಕೆ ಬ್ಯಾನರ್ ನ 3ನೇ ಸಿನಿಮಾ ಲಾಂಚ್ ಆಗಿದೆ. ಇಂದು ಚಿತ್ರದ ಮುಹೂರ್ತ ಕಾರ್ಯಕ್ರಮ ನಡೆದಿದ್ದು, ಪುನೀತ್ ಪತ್ನಿ ಅಶ್ವಿನಿ ಹಾಗೂ ಇಡೀ ತಂಡ ಭಾಗಿಯಾಗಿತ್ತು. ಇನ್ನು ಇಂದು ಸೆಟ್ಟೆರಿರುವ ಸಿನಿಮಾಗೆ ಇನ್ನು ನಾಮಕರಣ ಮಾಡಿಲ್ಲ.

  'ಹಂಬಲ್ ಪೊಲಿಟಿಷಿಯನ್ ನಾಗರಾಜ್' ಬಳಿಕ ಡ್ಯಾನಿಶ್ ಸೇಠ್ ಹೊಸ ಚಿತ್ರ

  ಡ್ಯಾನಿಶ್ ಸೇಠ್ ನಾಯಕ

  ಡ್ಯಾನಿಶ್ ಸೇಠ್ ನಾಯಕ

  'ಹಂಬಲ್ ಪೊಲಿಟಿಶಿಯನ್ ನೋಗರಾಜ್' ಸಿನಿಮಾದ ಮೂಲಕ ನಟ ಡ್ಯಾನಿಶ್ ಸೇಠ್ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಆ ಚಿತ್ರದ ನಂತರ ಬಳಿಕ ಮತ್ತೊಂದು ಚಿತ್ರ ಒಪ್ಪಿಕೊಂಡಿದ್ದ ಅವರ ಮೂರನೇ ಸಿನಿಮಾಗೆ ಪುನೀತ್ ರಾಜ್ ಕುಮಾರ್ ಬಂಡವಾಳ ಹಾಕುತ್ತಿದ್ದಾರೆ. ಈ ಹಿಂದೆ ಡ್ಯಾನಿಶ್ ಅವರ 'ಹಂಬಲ್ ಪೊಲಿಟಿಶಿಯನ್ ನೋಗರಾಜ್' ಸಿನಿಮಾದಲ್ಲಿ ಪುನೀತ್ ಒಂದು ಸಣ್ಣ ಪಾತ್ರ ಮಾಡಿದ್ದರು.

  ವಿಡಂಬನಾತ್ಮಕ ಕಥೆ

  ವಿಡಂಬನಾತ್ಮಕ ಕಥೆ

  ಡ್ಯಾನಿಶ್ ಸೇಠ್ ಅಂದರೆ ಮೊದಲು ನೆನಪಾಗುವುದು ಕಾಮಿಡಿ. ತಮ್ಮ ಮೊದಲ ಸಿನಿಮಾದಲ್ಲಿಯೂ ಕಾಮಿಡಿಯ ಮೂಲಕ ಗಮನ ಸೆಳೆದಿದ್ದ ಡ್ಯಾನಿಶ್ ಸೇಠ್ ಈಗ ಅದನ್ನೇ ಮುಂದುವರೆಸಲಿದ್ದಾರೆ. ಚಿತ್ರದಲ್ಲಿ ಹಾಸ್ಯ ಹಾಗೂ ವಿಡಂಬನಾತ್ಮಕ ಕಥೆ ಇದೆಯಂತೆ. ಪಿ ಆರ್ ಕೆ ಬ್ಯಾನರ್ ನಲ್ಲಿ ಬರುತ್ತಿರುವ ಈ ಚಿತ್ರದ ಮೇಲೆ ನಿರೀಕ್ಷೆ ಹುಟ್ಟಿದೆ.

  ಪನ್ನಗ ಭರಣ 2ನೇ ಸಿನಿಮಾ

  ಪನ್ನಗ ಭರಣ 2ನೇ ಸಿನಿಮಾ

  ಈ ಚಿತ್ರವನ್ನು ಖ್ಯಾತ ನಿರ್ದೇಶಕ ಟಿ ಎಸ್ ನಾಗಾಭರಣ ಅವರ ಪುತ್ರ ಪನ್ನಗ ಭರಣ ನಿರ್ದೇಶನ ಮಾಡುತ್ತಿದ್ದಾರೆ. 'ಹ್ಯಾಪಿ ನ್ಯೂ ಹಿಯರ್' ಚಿತ್ರದ ಮೂಲಕ ಡೈರೆಕ್ಷನ್ ಶುರು ಮಾಡಿದ್ದ ಪನ್ನಗ ಭರಣ ಈಗ ಎರಡನೇ ಚಿತ್ರವನ್ನು ಪುನೀತ್ ಬ್ಯಾನರ್ ನಲ್ಲಿ ಮಾಡುವ ದೊಡ್ಡ ಅವಕಾಶವನ್ನು ಪಡೆದುಕೊಂಡಿದ್ದಾರೆ.

  English summary
  Actor Danish Dait playing lead role in Puneeth Rajkumar production 3rd movie. The movie is 3rd movie launched today (December 3rd)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X