»   » ಬರಿಗಾಲಲ್ಲಿ ಚಾಮುಂಡೇಶ್ವರಿ ಬೆಟ್ಟ ಹತ್ತಿದ ಪುನೀತ್

ಬರಿಗಾಲಲ್ಲಿ ಚಾಮುಂಡೇಶ್ವರಿ ಬೆಟ್ಟ ಹತ್ತಿದ ಪುನೀತ್

Posted By: ಯಶಸ್ವಿನಿ
Subscribe to Filmibeat Kannada

ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಕನಸಿನ ಶಕ್ತಿಧಾಮ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮ ನಿಮಿತ್ತ ಮೈಸೂರಿಗೆ ಆಗಮಿಸಿದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲುಗಳ ಮೂಲಕ ತೆರಳಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಶಕ್ತಿಧಾಮದ ನೂತನ ಕಟ್ಟಡ ಹಾಗೂ ವಿವಿಧ ಸೌಲಭ್ಯಗಳ ಉದ್ಘಾಟನೆ ನೇರವೇರಿಸಿದ್ದು, ಆ ಕಾರ್ಯಕ್ರಮ ನಿಮಿತ್ತ ಮೈಸೂರಿಗೆ ಬಂದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ತಾಯಿ ಚಾಮುಂಡೇಶ್ವರಿಯ ಸನ್ನಿಧಾನಕ್ಕೆ ಬರಿಗಾಲಿನಲ್ಲಿ ಮೆಟ್ಟಿಲುಗಳ ಮೂಲಕ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

Actor Punith Rajkumar climbs chamundeshwari hills by bare foot

ದೇವಸ್ಥಾನಕ್ಕೆ ಪುನೀತ್ ದಿಢೀರ್ ಭೇಟಿ ಕಂಡು ಅಭಿಮಾನಿಗಳು ತುಂಬಾ ಖುಷಿ ಪಟ್ಟಿದ್ದಾರೆ. ಅಷ್ಟೇ ಅಲ್ಲ ಅಭಿಮಾನಿಗಳು ಪುನೀತ್ ರಾಜಕುಮಾರ್ ಬೆಟ್ಟ ಹತ್ತಿ ಇಳಿಯುವವರೆಗೂ ಜೊತೆಯಲ್ಲಿ ಸಾಥ್ ನೀಡಿದ್ದಾರೆ. ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದಾಗಲೆಲ್ಲಾ ಪ್ರತಿ ಬಾರಿಯೂ ನಟ ಪುನೀತ್ ರಾಜ್ ಕುಮಾರ್ ಬರಿಗಾಲಲ್ಲೇ ಬೆಟ್ಟ ಹತ್ತಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆಯುತ್ತಾರೆ.

ಈ ವೇಳೆ ನಟ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳಾದ ಬಿಬಿ ಕೇರಿಯ ಸುರೇಶ್, ರಾಜು ಮತ್ತಿತರರಿದ್ದರು

English summary
Kannada movie actor Punith Rajkumar climbs Chmundeshwari hills by bare foot in Mysuru. Fans also accompanied him. Every time when he visits Chamundeshwari hills climb in bare foot. Story first published: Saturday, March 10, 2018.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada