For Quick Alerts
  ALLOW NOTIFICATIONS  
  For Daily Alerts

  ಹ್ಯಾಪಿ ಬರ್ತಡೇ ವಿನುಮಗನೇ: ಪುತ್ರನಿಗೆ ರಾಘವೇಂದ್ರ ರಾಜ್ ಕುಮಾರ್ ವಿಶ್

  |

  ಡಾ.ರಾಜ್ ಕುಮಾರ್ ಕುಟುಂಬದ ಕುಡಿ, ನಟ ಮತ್ತು ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಅವರ ಹಿರಿಯ ಪುತ್ರ ವಿನಯ್ ರಾಜ್‌ಕುಮಾರ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ವಿನಯ್ ರಾಜ್ ಕುಮಾರ್ ಪ್ರತಿವರ್ಷ ಅಭಿಮಾನಿಗಳ ಮಧ್ಯೆ ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಎಲ್ಲಾ ಸಂಭ್ರಮ, ಸಡಗರಗಳಿಗೆ ಬ್ರೇಕ್ ಬಿದ್ದಿದೆ.

  ಕೊರೊನಾ ಭೀಕರತೆ ಎಲ್ಲಾ ಸಂಭ್ರಮ, ಸಡಗರವನ್ನು ಕಿತ್ತುಕೊಂಡಿದೆ. ಆದರೆ ವಿನಯ್‌ಗೆ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳು, ಸ್ನೇಹಿತರು ಮತ್ತು ಕುಟುಂಬದವರು ವಿಶ್ ಮಾಡುತ್ತಿದ್ದಾರೆ. ಮುದ್ದಿನ ಮಗನ ಹುಟ್ಟುಹಬ್ಬಕ್ಕೆ ಡಾ.ರಾಜ್ ಕುಮಾರ್ ಹಾಡನ್ನು ರಾಘವೇಂದ್ರ ರಾಜ್ ಕುಮಾರ್ ಶೇರ್ ಮಾಡುವ ಮೂಲಕ ಶುಭಾಶಯ ತಿಳಿಸಿದ್ದಾರೆ.

  ವಿನಯ್ ರಾಜ್ ಕುಮಾರ್ ಹೊಸ ಸಿನಿಮಾಗೆ ನಾಯಕಿಯಾದ ಕಾಜಲ್ವಿನಯ್ ರಾಜ್ ಕುಮಾರ್ ಹೊಸ ಸಿನಿಮಾಗೆ ನಾಯಕಿಯಾದ ಕಾಜಲ್

  ವಿನಯ್ ರಾಜ್ ಕುಮಾರ್ ಚಿಕ್ಕ ಮಗುವಾಗಿದ್ದಾಗಿನಿಂದ ಫೋಟೋಗಳನ್ನು ರಾಘಣ್ಣ ಹಂಚಿಕೊಂಡಿದ್ದಾರೆ. ಪತ್ನಿ ಮತ್ತು ಇಬ್ಬರು ಮಕ್ಕಳ ಜೊತೆ ಇರುವ ಸುಂದರ ಕ್ಷಣಗಳನ್ನು ಶೇರ್ ಮಾಡಿದ್ದಾರೆ. 'ಹುಟ್ಟುಹಬ್ಬದ ಶುಭಾಶಯಗಳು ವಿನು ಮಗನೇ' ಎಂದು ವಿಶ್ ಮಾಡಿದ್ದಾರೆ.

  ಇನ್ನು ವಿನಯ್ ರಾಜ್ ಕುಮಾರ್ ಸಹೋದರ ಯುವರಾಜ್ ಕುಮಾರ್ ಸಹ ಪ್ರೀತಿಯ ಅಣ್ಣನಿಗೆ ಶುಭಾಶಯ ತಿಳಿಸಿದ್ದಾರೆ. ವಿನಯ್ ಜೊತೆ ಇರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಬಣ್ಣದ ಲೋಕದಲ್ಲಿ ದೊಡ್ಡ ಸಕ್ಸಸ್‌ಗಾಗಿ ಕಾಯುತ್ತಿರುವ ವಿನಯ್ ರಾಜ್ ಕುಮಾರ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

  ಬಾಲಕಲಾವಿದನಾಗಿ ಚಿತ್ರರಂಗಕ್ಕೆ ಪ್ರವೇಶ ಮಾಡಿದ ವಿನಯ್ ರಾಜ್ ಕುಮಾರ್ 5 ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಳಿಕ ಸಿದ್ಧಾರ್ಥ ಸಿನಿಮಾ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟಿದ್ದಾರೆ. ಮೊದಲ ಸಿನಿಮಾ ಹೇಳಿಕೊಳ್ಳುವಷ್ಟು ಹೆಸರು ತಂದುಕೊಟ್ಟಿಲ್ಲ. ಬಳಿಕ ಬಂದ ರನ್ ಆಂಟೋನಿ ಸಿನಿಮಾ ಕೂಡ ಸೋಲಿನ ದಾರಿಯಲ್ಲೇ ಸಾಗಿದೆ.

  ಸದ್ಯ ವಿನಯ್ 10, ಗ್ರಾಮಾಯಣ, ಅಂದೊಂದಿತ್ತು ಕಾಲ, ಪೆಪೆ ಸಿನಿಮಾಗಳ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ಮೂರು ಸಿನಿಮಾಗಳ ಮೇಲು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾಗಳಲ್ಲಿ ಒಂದು ಸಿನಿಮಾವಾದರೂ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಹಾವಳಿ ಸಿನಿಮಾ ಬಿಡುಗಡೆಯನ್ನು ಮುಂದಕ್ಕೆ ತಳ್ಳಿದೆ.

  Recommended Video

  Indira Gandhi ವಿರುದ್ಧ ಚುನಾವಣೆಗೆ ಸ್ಪರ್ಧಿಸಲು ರಾಜಕುಮಾರ್ ನಿರಾಕರಿಸಿದ್ದು ಹೇಗೆ? | Filmibeat kannada

  ಇತ್ತೀಚಿಗಷ್ಟೆ ಬಹುನಿರೀಕ್ಷೆಯ ಪೆಪೆ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಮೊದಲ ಬಾರಿಗೆ ವಿನಯ್ ರಾಜ್ ಕುಮಾರ್ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸಳೆದಿದ್ದಾರೆ. ಇನ್ನು ಸಿನಿಮಾ ಹೇಗಿರಲಿದೆ ಎನ್ನುವುದು ಅಭಿಮಾನಿಗಳ ಕುತೂಹಲ.

  English summary
  Sandalwood Actor Raghavendra Rajkumar birthday wishes to his son Vinay Rajkumar.
  Friday, May 7, 2021, 10:30
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X