»   » ಆಸ್ಪತ್ರೆಯಿಂದ ಮನೆಗೆ ಮರಳಿದ ರಾಘವೇಂದ್ರ ರಾಜ್

ಆಸ್ಪತ್ರೆಯಿಂದ ಮನೆಗೆ ಮರಳಿದ ರಾಘವೇಂದ್ರ ರಾಜ್

Posted By:
Subscribe to Filmibeat Kannada

ವರನಟ ಡಾ.ರಾಜ್ ಕುಮಾರ್ ಅವರ ಎರಡನೇ ಮಗ ನಟ, ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ (48) ಅವರು ಸಂಪೂರ್ಣವಾಗಿ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದ ಕಾರಣ ನರವ್ಯೂಹದ ಶಸ್ತ್ರಚಿಕಿತ್ಸೆಗೆ ಅವರು ಒಳಗಾಗಿದ್ದರು.

ಮೊದಲು ಅವರನ್ನು ಯಶವಂತಪುರದ ಕೊಲಂಬಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅಲ್ಲಿಂದ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಈಗವರು ಸಂಪೂರ್ಣ ಚೇತರಿಸಿಕೊಂಡಿದ್ದು ಆಸ್ಪತ್ರೆಯಿಂದ ಭಾನುವಾರ (ನ.10) ಸಂಜೆ ಡಿಸ್ಚಾರ್ಜ್ ಆಗಿದ್ದಾರೆ.

Raghavendra Rajkumar

ಅಕ್ಟೋಬರ್ 16ರಂದು ರಾಘವೇಂದ್ರ ರಾಜ್ ಅವರು ಸದಾಶಿವನಗರದ ತಮ್ಮ ನಿವಾಸದಲ್ಲಿ ವ್ಯಾಯಾಮ ಮಾಡುತ್ತಿರಬೇಕಾದರೆ ಕುಸಿದು ಬಿದ್ದಿದ್ದರು. ಕೂಡಲೆ ಅವರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೆದುಳಿನ ನರವ್ಯೂಹದಲ್ಲಿ ರಕ್ತಹೆಪ್ಪುಗಟ್ಟಿದ್ದನ್ನು ವೈದ್ಯರು ಪತ್ತೆಹಚ್ಚಿ ಶಸ್ತ್ರಚಿಕಿತ್ಸೆಯನ್ನೂ ಮಾಡಿದ್ದರು.

ವಜ್ರೇಶ್ವರಿ ಕಂಬೈನ್ಸ್ ನ ಸಕಲ ವಹಿವಾಟುಗಳನ್ನು ರಾಘಣ್ಣ ನೋಡಿಕೊಳ್ಳುತ್ತಿದ್ದು, ಪುನೀತ್ ಅವರಿಗೆ ಮಾರ್ಗದರ್ಶನ ನೀಡುತ್ತಿದ್ದರು. ಸದಾ ಲವಲವಿಕೆಯಿಂದ ಪುಟಿಯುತ್ತಿದ್ದ ರಾಘಣ್ಣನ ಆರೋಗ್ಯದಲ್ಲಿ ಇದ್ದಕ್ಕಿದ್ದಂತೆ ಈ ರೀತಿ ಆಗಿದ್ದು ರಾಜ್ ಕುಟುಂಬ ಹಾಗೂ ಕನ್ನಡ ಚಿತ್ರೋದ್ಯಮ ಶಾಕ್ ಗೆ ಗುರಿಯಾಗಿತ್ತು.

ರಾಘಣ್ಣ ಆಸ್ಪತ್ರೆಯಲ್ಲಿದ್ದಾಗ ಹಿರಿಯ ಕಲಾವಿದೆ ಲೀಲಾವತಿ ಅವರ ಪುತ್ರ ವಿನೋದ್ ರಾಜ್ ಹಾಗೂ ಚಿತ್ರರಂಗದ ಹಲವರು ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ್ದರು. ರಾಘಣ್ಣ ಆರೋಗ್ಯದ ಬಗ್ಗೆ ಯಾವುದೇ ಕಳವಳ ಬೇಡ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮಾಧ್ಯಮಗಳಿಗೆ ಆಗಾಗ ವಿವರ ನೀಡುತ್ತಿದ್ದರು. (ಏಜೆನ್ಸೀಸ್)

English summary
Kannada actor, producer Raghavendra Rajkumar has been discharged from the Manipal hospital on Sunday (11th November) evening. The actor is healthy and sturdy. Raghavendra Rajkumar was admitted to Columbia Asia Hospital after the doctors diagnosed a brain clot and operated him.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada