For Quick Alerts
  ALLOW NOTIFICATIONS  
  For Daily Alerts

  ಅಗಲಿದ ತಾಯಿಗಾಗಿ ಗುಡಿ ಕಟ್ಟಿದ ಕನ್ನಡದ ನಟ

  |

  ತಾಯಿಯ ಮಹತ್ವ, ಘನತೆ ಸಾರುವ ಸಾಕಷ್ಟು ಸಿನಿಮಾಗಳು ಬಂದುಹೋಗಿವೆ. ನಟರುಗಳು ತಾಯಿಯ ಬಗ್ಗೆ ಪುಟಗಟ್ಟಲೆ ಡೈಲಾಗ್‌ಗಳನ್ನು ಹೊಡೆದಿದ್ದಾರೆ. ಆದರೆ ಇಲ್ಲೊಬ್ಬ ನಟ ತನ್ನ ತಾಯಿಯ ನೆನಪಿಗೆ ಗುಡಿಯನ್ನೇ ಕಟ್ಟಿದ್ದಾರೆ.

  ಹೌದು, ಪ್ರಸ್ತುತ ಮುಂಬೈನಲ್ಲಿ ನೆಲೆಸಿರುವ, ಕನ್ನಡಿಗರೇ ಆದ ರಾಜಶೇಖರ್ ಕೋಟ್ಯಾನ್ ಅವರು ತಮ್ಮ ಅಗಲಿದ ತಾಯಿ ಕಲ್ಯಾಣಿ ಪೂಜಾರ್ತಿ ಅವರ ನೆನಪಿಗಾಗಿ ತಮ್ಮ ಹುಟ್ಟೂರಿನಲ್ಲಿ ಗುಡಿಯನ್ನು ಕಟ್ಟಿ, ತಾಯಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ.

  ತುಳು, ಕನ್ನಡ, ಹಿಂದಿ, ತಮಿಳು ಸಿನಿಮಾಗಳಲ್ಲಿ ನಟಿಸಿರುವ ರಾಜಶೇಖರ್ ಕೋಟ್ಯಾನ್, ಸಿನಿಮಾ ನಿರ್ದೇಶನವನ್ನೂ ಮಾಡಿದ್ದಾರೆ. ಇವರು, ನಟ ದರ್ಶನ್ ಅವರ ಗೆಳೆಯರೂ ಹೌದು. ಇವರು ತಮ್ಮ ಹುಟ್ಟೂರು ಉಡುಪಿಯ ಸಾಂತೂರಿನಲ್ಲಿ ಅಮ್ಮನ ಪುತ್ಥಳಿ ಪ್ರತಿಷ್ಟಾಪಿಸಿ ಪ್ರತಿನಿತ್ಯ ಪೂಜೆ ಮಾಡುತ್ತಿದ್ದಾರೆ.

  ಮಾತಾಡೋರು ಇದ್ರೇನೆ ಅವರು ಬದುಕಿದ್ದಾರೆ ಅನೋದು ಗೊತ್ತಾಗೋದು | Filmibeat Knnada

  ಅಮ್ಮನ ಪುತ್ಥಳಿಯನ್ನು ರಾಜಸ್ಥಾನದ ಕುಶಲಕರ್ಮಿಗಳಿಂದ ಮಾಡಿಸಿಕೊಂಡಿದ್ದಾರೆ ರಾಜಶೇಖರ್. ಸುಮಾರು 6 ಲಕ್ಷರೂಪಾಯಿ ಪುತ್ಥಳಿಗೆ ಖರ್ಚು ಮಾಡಿದ್ದಾರೆ ಇವರು. ಅಮ್ಮನು ಸದಾ ನನ್ನ ಜೊತೆಗೇ ಇರಬೇಕೆಂಬುದು ನನ್ನ ಬಯಕೆಯಾಗಿತ್ತು. ಹಾಗಾಗಿ ಅಮ್ಮನ ಪುತ್ಥಳಿ ನಿರ್ಮಿಸಿ, ಪ್ರತಿನಿತ್ಯ ನಾನೇ ಪೂಜೆ ಮಾಡುತ್ತಿದ್ದೇನೆ ಎಂದಿದ್ದಾರೆ ರಾಜಶೇಖರ್ ಕೋಟ್ಯಾನ್.

  English summary
  Actor Rajashekhar Kotyan build a temple in memory of his mother Kalyani Poojarthi. He performing pooja very day in temple.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X