For Quick Alerts
  ALLOW NOTIFICATIONS  
  For Daily Alerts

  ನಟ ಪ್ರಮೋದ್ ಶೆಟ್ಟಿ ಮಗುವಿನ ನಾಮಕರಣ ಸಂಭ್ರಮದಲ್ಲಿ ರಕ್ಷಿತ್ ಶೆಟ್ಟಿ

  |

  ಸ್ಯಾಂಡಲ್ ವುಡ್ ನಟ ಮತ್ತು ರಕ್ಷಿತ್ ಶೆಟ್ಟಿ ಗೆಳೆಯ ಪ್ರಮೋದ್ ಶೆಟ್ಟಿ ಮಗುವಿನ ನಾಮಕರಣ ಸಂಭ್ರಮದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಭಾಗಿಯಾಗಿದ್ದಾರೆ. ನಟ ಪ್ರಮೋದ್ ಶೆಟ್ಟಿ ಪತ್ನಿ ನಟಿ ಸುಪ್ರಿತಾ ಶೆಟ್ಟಿ ಇತ್ತೀಚಿಗಷ್ಟೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ನವೆಂಬರ್ 20ರಂದು ಮಧ್ಯಾಹ್ನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು.

  ಸದ್ಯ ಪ್ರಮೋದ್ ಶೆಟ್ಟಿ ದಂಪತಿ ಮಗುವಿನ ನಾಮಕರಣ ಸಂಭ್ರಮದಲ್ಲಿದ್ದಾರೆ. ವಿಶೇಷ ಅಂದರೆ ಪ್ರಮೋದ್ ಶೆಟ್ಟಿ ಮಗನ ನಾಮಕರಣ ಸಂಭ್ರಮದಲ್ಲಿ ನಟ ರಕ್ಷಿತ್ ಶೆಟ್ಟಿ ಭಾಗಿಯಾಗಿ ಸಂತಸವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಗೆಳೆಯನ ಮಗನನ್ನು ಎತ್ತಿಕೊಂಡು ರಕ್ಷಿತ್ ಮುದ್ದಾಡಿದ್ದಾರೆ. ತೊಟ್ಟಿಲ ಶಾಸ್ತ್ರದಲ್ಲಿ ಭಾಗಿಯಾಗಿ ಮಗುವನ್ನು ತೊಟ್ಟಿಲಿಗೆ ಹಾಕಿ ಸಂತಸಪಟ್ಟಿದ್ದಾರೆ.

  ಟೀಸರ್ ಮೂಲಕ ಮಗನ ಹೆಸರನ್ನು ರಿವೀಲ್ ಮಾಡಿದ ರಿ‍ಷಭ್ಟೀಸರ್ ಮೂಲಕ ಮಗನ ಹೆಸರನ್ನು ರಿವೀಲ್ ಮಾಡಿದ ರಿ‍ಷಭ್

  ನಾಮಕರಣ ಸಂಭ್ರಮದಲ್ಲಿ ರಕ್ಷಿತ್ ಶೆಟ್ಟಿ ಸೇರಿದಂತೆ ಸ್ನೇಹಿತರ ಬಳಗ ಭಾಗಿಯಾಗಿತ್ತು. ನಾಮಕರಣದ ಒಂದಿಷ್ಟು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು ವೈರಲ್ ಆಗಿವೆ. ಅಂದ್ಹಾಗೆ ಪ್ರಮೋದ್ ಶೆಟ್ಟಿ ಮತ್ತು ಸುಪ್ರಿತಾ ದಂಪತಿಗೆ ಈಗಾಗಲೆ ಒಬ್ಬಳು ಹೆಣ್ಣುಮಗಳಿದ್ದಾಳೆ.

  ಈಗ ಎರಡನೆ ಮಗು ಆಗಮನವಾಗಿರುವ ಸಂತಸದಲ್ಲಿ ಇದ್ದಾರೆ. ಇತ್ತೀಚೆಗಷ್ಟೇ ಪತ್ನಿ ಸುಪ್ರೀತಾ ಶೆಟ್ಟಿಯ ಸೀಮಂತ ಸಮಾರಂಭವನ್ನ ಪ್ರಮೋದ್ ಶೆಟ್ಟಿ ಅದ್ಧೂರಿಯಾಗಿ ಆಯೋಜಿಸಿದ್ದರು. ಕಿರುತೆರೆ ಮತ್ತು ಚಿತ್ರರಂಗದ ನಟ-ನಟಿಯರು ಸೀಮಂತ ಸಂಭ್ರಮದಲ್ಲಿ ಭಾಗವಹಿಸಿ ಸುಪ್ರೀತಾ ಶೆಟ್ಟಿಗೆ ಹರಸಿದ್ದರು.

  ಸುಪ್ರಿತಾ ಶೆಟ್ಟಿ ಕನ್ನಡ ಕಿರಿತೆರೆಯಲ್ಲಿ ಖ್ಯಾತಿಗಳಿಸಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕುಲವಧು ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದರು. ಪ್ರಮೋದ್ ಶೆಟ್ಟಿ ನಟ ರಕ್ಷಿತ್ ಶೆಟ್ಟಿ ಬಳಗದಲ್ಲಿ ಗುತಿಸಿಕೊಂಡಿದ್ದು ರಕ್ಷಿತ್ ಶೆಟ್ಟಿ ಅಭಿನಯದ ಬಹುತೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

  English summary
  Kannada actor Rakshith Shetty participate in Pramoda shetty's son Naming ceremony.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X