For Quick Alerts
  ALLOW NOTIFICATIONS  
  For Daily Alerts

  ಇನ್ಸ್ಟಾಗ್ರಾಮ್ ಗೆ ಬಂದ ನಟ ರಾಮ್ ಚರಣ್ ತೇಜ

  |

  ಇತ್ತೀಚಿಗಷ್ಟೆ ಕನ್ನಡ ನಟ ಧ್ರುವ ಸರ್ಜಾ ಇನ್ಸ್ಟಾಗ್ರಾಮ್ ಗೆ ಬಂದಿದ್ದರು. ಅದರ ಬಳಿಕ ಟಾಲಿವುಡ್ ನಟ ರಾಮ್ ಚರಣ್ ತೇಜ ಸಹ ಇನ್ಸ್ಟಾಗ್ರಾಮ್ ಖಾತೆ ತೆರೆದಿದ್ದಾರೆ.

  ಫೇಸ್ ಬುಕ್ ಖಾತೆ ಹೊಂದಿದ್ದ ಅವರು ಇನ್ಸ್ಟಾಗ್ರಾಮ್ ಮತ್ತು ಟ್ವಿಟ್ಟರ್ ಬಗ್ಗೆ ಅಷ್ಟು ಆಸಕ್ತಿ ತೋರಿಸಿರಲಿಲ್ಲ. ಆದರೆ, ಹೊಸ ಇನ್ಸ್ಟಾಗ್ರಾಮ್ ಖಾತೆ ತೆರೆಯುವ ಮೂಲಕ ಅಭಿಮಾನಿಗಳ ಜೊತೆಗೆ ಸಂಪರ್ಕದಲ್ಲಿ ಇರುವ ನಿರ್ಧಾರ ಮಾಡಿದ್ದಾರೆ.

  ಐಶ್ವರ್ಯ ರೈ-ರಾಮ್ ಚರಣ್ ಬಗ್ಗೆ ಇಂಥದೊಂದು ಸುದ್ದಿ! ನಿಜವೇ?

  alwaysramcharan ರಾಮ್ ಚರಣ್ ಅವರ ಯುಸರ್ ನೇಮ್ ಆಗಿದೆ. ಎರಡು ದಿನಕ್ಕೆ 2 ಲಕ್ಷದ 16 ಸಾವಿರ ಫಾಲೋವರ್ಸ್ ಅನ್ನು ರಾಮ್ ಚರಣ್ ಪಡೆದಿದ್ದಾರೆ. ಸದ್ಯಕ್ಕೆ, ತಮ್ಮ ಖಾತೆಯಲ್ಲಿ ಒಂದು ಫೋಟೋ ಪೋಸ್ಟ್ ಮಾಡಿದ್ದಾರೆ. ತಮ್ಮ ಮೊದಲ ಫೋಟೋಗೆ 1 ಲಕ್ಷದ 65 ಸಾವಿರಕ್ಕೂ ಹೆಚ್ಚು ಮೆಚ್ಚುಗೆ ಸಿಕ್ಕಿದೆ.

  ಇನ್ಸ್ಟಾಗ್ರಾಮ್ ಖಾತೆ ತೆರೆದ ಬಗ್ಗೆ ವಿಡಿಯೋ ಮೂಲಕ ತಿಳಿಸಿರುವ ರಾಮ್ ಚರಣ್ ಇನ್ನು ''ಮುಂದೆ ಹೊಸ ವೇದಿಕೆಯ ಮೂಲಕ ಅಭಿಮಾನಿಗಳ ಜೊತೆಗೆ ಸಂಪರ್ಕದಲ್ಲಿ ಇರುತ್ತೇನೆ. ಸಾಕಷ್ಟು ಮನರಂಜನೆಯನ್ನು ನಿರೀಕ್ಷೆ ಮಾಡುತ್ತೇನೆ.'' ಎಂದು ಹೇಳಿದ್ದಾರೆ.

  ಕನ್ನಡಕ್ಕೆ ಡಬ್ ಆಗಿದೆ 'ರಂಗಸ್ಥಳಂ', ಯಾವಾಗ ಬಿಡುಗಡೆ ?

  ರಾಜಮೌಳಿ ನಿರ್ದೇಶನದ 'ಆರ್ ಆರ್ ಆರ್' ಸಿನಿಮಾದಲ್ಲಿ ರಾಮ್ ಚರಣ್ ನಟಿಸುತ್ತಿದ್ದಾರೆ. ಅವರ 'ರಂಗಸ್ಥಳಂ' ಚಿತ್ರ ರಂಗಸ್ಥಳ ಹೆಸರಿನಲ್ಲಿ ಇದೇ ವಾರ ಕನ್ನಡಕ್ಕೆ ಡಬ್ ಆಗಿ ಬಿಡುಗಡೆ ಆಗುತ್ತಿದೆ.

  English summary
  Telugu actor Ram Charan Teja enters to instagram world. He opened his new instagram account.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X