Don't Miss!
- News
ವಂಚನೆ ಪ್ರಕರಣ: ಮತ್ತೋರ್ವ ನಟಿಯನ್ನು ಮದುವೆಯಾಗಲು ಬಯಸಿದ್ದ ಸುಕೇಶ್!
- Automobiles
ಭಾರತದಲ್ಲಿ ಹೊಸ ಅಧ್ಯಾಯ ಬರೆಯಲು ಸಿದ್ಧವಾಗಿವೆ ಮಾರುತಿ ಸುಜುಕಿ ಕಾರುಗಳು
- Sports
ಮತ್ತೊಮ್ಮೆ ನಮಗೆ ಆತನೇ ಬಲು ದೊಡ್ಡ ಕಂಟಕ: ಭಾರತೀಯ ಆಟಗಾರನ ಬಗ್ಗೆ ಆಸಿಸ್ ಕ್ರಿಕೆಟಿಗನ ಆತಂಕ!
- Finance
ಅದಾನಿ ಗ್ರೂಪ್ ವಿರುದ್ಧ ಆರೋಪ: 'ನಾವು ಜಾಗರೂಕರಾಗಿದ್ದೇವೆ' ಎಂದ ಭಾರತದ ಉನ್ನತ ಬ್ಯಾಂಕ್ಗಳು
- Technology
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
- Lifestyle
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಾಣಾ ದಗ್ಗುಬಾಟಿಯ ಮೊದಲ ಲವ್ ಸ್ಟೋರಿ ಸಾಯಿ ಪಲ್ಲವಿ ಜೊತೆ!
ನಟ ರಾಣಾ ದಗ್ಗುಬಾಟಿ ಆಗಸ್ಟ್20, 2020ರಂದು ಮಿಹಿಕಾ ಬಜಾಜ್ ಅನ್ನು ವಿವಾಹವಾದರು. ಇದು ಪ್ರೇಮ ವಿವಾಹವಾಗಿದ್ದು, ಬಹು ಸಮಯ ರಾಣಾ ಹಾಗೂ ಮಿಹಿಕಾ ಪ್ರೀತಿಸುತ್ತಿದ್ದರು.
ಆದರೆ ಇತ್ತೀಚೆಗೆ ಸ್ವತಃ ರಾಣಾ ದಗ್ಗುಬಾಟಿಯೇ, 'ನನ್ನ ಮೊದಲ ಪ್ರೇಮಕತೆ ಸಾಯಿ ಪಲ್ಲವಿ ಜೊತೆ' ಎಂದು ಹೇಳಿಕೊಂಡಿದ್ದಾರೆ. ಆದರೆ ಈ ಪ್ರೇಮಕತೆ ನಿಜ ಜೀವನದ ಪ್ರೇಮಕತೆಯಲ್ಲ ಬದಲಿಗೆ ಸಿನಿಮಾ ಪ್ರೇಮ ಕತೆ.
ಸಾಯಿ
ಪಲ್ಲವಿಯನ್ನು
ಮನಸಾರೆ
ಹೊಗಳಿದ
ರಶ್ಮಿಕಾ
ಮಂದಣ್ಣ
ಸಾಯಿ ಪಲ್ಲವಿ ಹಾಗೂ ರಾಣಾ ದಗ್ಗುಬಾಟಿ 'ವಿರಾಟ ಪರ್ವಂ' ತೆಲುಗು ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದು ಸಿನಿಮಾ ಬಿಡುಗಡೆ ಹಲವು ಕಾರಣಗಳಿಂದ ತಡವಾಗುತ್ತಿದೆ. ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಿದ್ದು, ರಾಣಾ ದಗ್ಗುಬಾಟಿಗೆ ಆಗಾಗ್ಗೆ 'ವಿರಾಟ ಪರ್ವಂ' ಸಿನಿಮಾದ ಬಗ್ಗೆ ಪ್ರಶ್ನೆಗಳು ಎದುರಾಗುತ್ತಲೇ ಇರುತ್ತವೆ.

''ದಕ್ಷಿಣ ಭಾರತ ಚಿತ್ರರಂಗಕ್ಕೆ ಸಿಕ್ಕ ಉಡುಗೊರೆ ಸಾಯಿ ಪಲ್ಲವಿ''
''ಜನ ನನಗೆ ಹೇಳುತ್ತಿರುತ್ತಾರೆ, ನೀವು 'ಭೀಮ್ಲಾ ನಾಯಕ್' ಸಿನಿಮಾದಲ್ಲಿ ಪವನ್ ಕಲ್ಯಾಣ್ ಜೊತೆ ನಟಿಸುತ್ತಿದ್ದೀರಿ. 'ವಿರಾಟ ಪರ್ವಂ' ಸಿನಿಮಾದಲ್ಲಿ ಲೇಡಿ ಪವನ್ ಕಲ್ಯಾಣ್ ಜೊತೆ ನಟಿಸುತ್ತಿದ್ದೀರಿ ಎಂದು. ಸಾಯಿ ಪಲ್ಲವಿಯಂಥಹಾ ಅದ್ಭುತ ನಟಿಯೊಂದಿಗೆ ನಟಿಸುವುದು ಅದ್ಭುತ ಅನುಭವ. ದಕ್ಷಿಣ ಭಾರತ ಚಿತ್ರರಂಗಕ್ಕೆ ಸಿಕ್ಕ ಉಡುಗೊರೆ ಸಾಯಿ ಪಲ್ಲವಿ'' ಎಂದು ಸಾಯಿ ಪಲ್ಲವಿಯನ್ನು ಹೊಗಳಿದ್ದಾರೆ ರಾಣಾ.

''ಇದು ನನ್ನ ವೃತ್ತಿ ಜೀವನದ ಮೊದಲ ಪ್ರೇಮಕಥಾ ಸಿನಿಮಾ''
'ವಿರಾಟ ಪರ್ವಂ' ಸಿನಿಮಾದ ಬಗ್ಗೆ ಮಾತನಾಡಿರುವ ರಾಣಾ ದಗ್ಗುಬಾಟಿ, ''ವಿರಾಟ ಪರ್ವಂ' ಸಿನಿಮಾವು 1970-80ರ ದಶಕದ ಕತೆಯನ್ನು ಹೊಂದಿದೆ. ಸಾಯಿ ಪಲ್ಲವಿಯ ಪ್ರಿಯಕರನ ಪಾತ್ರದಲ್ಲಿ ನಾನು ನಟಿಸಿದ್ದೇನೆ. ಈ ವರೆಗಿನ ನನ್ನ ವೃತ್ತಿ ಜೀವನದಲ್ಲಿ ಇದು ನನ್ನ ಮೊದಲನೇಯ ಅಪ್ಪಟ ಪ್ರೇಮ ಕತೆ ಸಿನಿಮಾ. ನನ್ನ ಮೊದಲ ಪ್ರೇಮ ಕತೆ ಸಾಯಿ ಪಲ್ಲವಿ ಜೊತೆ ಆಗಿರುವುದು ಖುಷಿಯ ವಿಚಾರ'' ಎಂದಿದ್ದಾರೆ ರಾಣಾ ದಗ್ಗುಬಾಟಿ.

ಸಾಯಿ ಪಲ್ಲವಿ ಹೆಸರು ಟೈಟಲ್‌ಕಾರ್ಡ್‌ನಲ್ಲಿ ಮೊದಲು!
'ವಿರಾಟ ಪರ್ವಂ' ಸಿನಿಮಾದಲ್ಲಿ ಸಾಯಿ ಪಲ್ಲವಿ ಅತ್ಯದ್ಭುತವಾಗಿ ನಟಿಸಿದ್ದಾರೆ ಎನ್ನಲಾಗುತ್ತಿದೆ. ಸ್ವತಃ ರಾಣಾ ದಗ್ಗುಬಾಟಿ ಸಾಯಿ ಪಲ್ಲವಿಯ ನಟನೆಗೆ ಮಾರು ಹೋಗಿದ್ದು, 'ವಿರಾಟ ಪರ್ವಂ' ಸಿನಿಮಾದ ಟೈಟಲ್ ಕಾರ್ಡ್‌ನಲ್ಲಿ ನನ್ನ ಹೆಸರು ಬರುವುದಕ್ಕೆ ಮುನ್ನ ಸಾಯಿ ಪಲ್ಲವಿ ಹೆಸರು ಹಾಕಿ ಎಂದು ಚಿತ್ರತಂಡಕ್ಕೆ ಹೇಳಿದ್ದಾರಂತೆ. ಸಿನಿಮಾಗಳ ಟೈಟಲ್ ಕಾರ್ಡ್‌ಗಳಲ್ಲಿ ಹೀರೋಗಳ ಹೆಸರು ಮೊದಲು ಬರುವುದು ಸಾಮಾನ್ಯ ಆದರೆ 'ವಿರಾಟ ಪರ್ವಂ'ನಲ್ಲಿ ಸಾಯಿ ಪಲ್ಲವಿ ಹೆಸರು ಮೊದಲಿಗೆ ಬರಲಿದೆ. ಅವರ ಪ್ರತಿಭೆಗೆ ಸಂದ ಗೌರವವಿದು.

ಸಿನಿಮಾ ಬಿಡುಗಡೆ ಯಾವಾಗ?
'ವಿರಾಟ ಪರ್ವಂ' ಸಿನಿಮಾವು ನಕ್ಸಲ್ ಕತೆಯನ್ನು ಹೊಂದಿದೆ. ರಾಣಾ ದಗ್ಗುಬಾಟಿ ನಕ್ಸಲ್ ಯುವಕನ ಪಾತ್ರದಲ್ಲಿ ನಟಿಸಿದ್ದಾರೆ. ಸಾಯಿ ಪಲ್ಲವಿ ಆ ಯುವಕನ ಪ್ರೇಯಸಿ, ಸಿನಿಮಾದಲ್ಲಿ ನಟಿ ಪ್ರಿಯಾಮಣಿ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾವು 2021ರ ಏಪ್ರಿಲ್ 21 ಕ್ಕೆ ಬಿಡುಗಡೆ ಆಗಬೇಕಿತ್ತು ಆದರೆ ಕೋವಿಡ್ ಕಾರಣದಿಂದ ಸಿನಿಮಾ ಬಿಡುಗಡೆ ತಡವಾಗುತ್ತಲೇ ಬರುತ್ತಿದೆ. ಈ ವರೆಗೆ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗಿಲ್ಲ. ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ.