»   » ಕುರುಕ್ಷೇತ್ರದಲ್ಲಿ 'ದ್ರೌಪದಿ ವಸ್ತ್ರಾಪಹರಣ' ಮಾಡುವ ದುಶ್ಯಾಸನ ಯಾರು?

ಕುರುಕ್ಷೇತ್ರದಲ್ಲಿ 'ದ್ರೌಪದಿ ವಸ್ತ್ರಾಪಹರಣ' ಮಾಡುವ ದುಶ್ಯಾಸನ ಯಾರು?

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ ಪೌರಾಣಿಕ ಸಿನಿಮಾ 'ಕುರುಕ್ಷೇತ್ರ' ಭರದಿಂದ ಚಿತ್ರೀಕರಣ ಮಾಡುತ್ತಿದೆ. ಈಗಾಗಲೇ ಕುರುಕ್ಷೇತ್ರ ಚಿತ್ರದ ಬಹುತೇಕ ಪಾತ್ರಗಳು ಅಂತಿಮವಾಗಿದ್ದು, ಅರ್ಜುನ ಪಾತ್ರಕ್ಕೆ ಮಾತ್ರ ಸ್ಟಾರ್ ನಟನನ್ನ ಹುಡುಕುತ್ತಿದೆ ಚಿತ್ರತಂಡ.

ಅಂದ್ಹಾಗೆ, 'ಕುರುಕ್ಷೇತ್ರ'ದ ಪ್ರಮುಖ ಸನ್ನಿವೇಶಗಳಲ್ಲಿ ಒಂದಾದ 'ದ್ರೌಪದಿ ವಸ್ತ್ರಾಪಹರಣ' ಚಿತ್ರದ ಪ್ರಮುಖ ಆಕರ್ಷಣೆ. ಹೀಗಾಗಿ, ದ್ರೌಪದಿ ವಸ್ತ್ರಾಪಹರಣ ಮಾಡುವ ದುಶ್ಯಾಸನನ ಪಾತ್ರ ಯಾರು ನಿರ್ವಹಿಸಲಿದ್ದಾರೆ ಎಂಬ ಕುತೂಹಲ ಹಲವರಿಗೆ ಕಾಡುತ್ತಿದೆ. ಈ ಕುತೂಹಲಕ್ಕೆ ಈಗಾಗಲೇ ಬ್ರೇಕ್ ಬಿದ್ದಿದ್ದು, ಕುರುಕ್ಷೇತ್ರಕ್ಕೆ ದುಶ್ಯಾಸನ ಆಯ್ಕೆ ಆಗಿದೆ.

'ಬಾಹುಬಲಿ'ಯನ್ನ ಮೀರಿಸುವಂತಿದೆ 'ಕುರುಕ್ಷೇತ್ರ'ದ ಫಸ್ಟ್ ಲುಕ್ ಟೀಸರ್

Actor Ravi chethan palying dushasana role in Kurukshetra

ಹೌದು, ಕನ್ನಡದ ಪ್ರತಿಭಾನ್ವಿತ ನಟ ರವಿಚೇತನ್, ಮುನಿರತ್ನ ಅವರ ಕುರುಕ್ಷೇತ್ರದಲ್ಲಿ ದುಶ್ಯಾಸನನಾಗಿ ಅಭಿನಯಿಸುತ್ತಿದ್ದಾರೆ. ವಿಷ್ಣುವರ್ಧನ್, ದರ್ಶನ್, ಸುದೀಪ್, ಶಿವರಾಜ್ ಕುಮಾರ್, ಹೀಗೆ ಬಹುತೇಕ ಕನ್ನಡದ ಸ್ಟಾರ್ ನಟರ ಚಿತ್ರಗಳಲ್ಲಿ ರವಿಚೇತನ್ ಪೋಷಕ ನಟನ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

Actor Ravi chethan palying dushasana role in Kurukshetra

ಪಗಡೆ ಆಟದಲ್ಲಿ ಪಾಂಡವರು ವಿರುದ್ಧ ಗೆಲ್ಲುವ ದುರ್ಯೋಧನ, ದ್ರೌಪದಿಯ ವಸ್ತ್ರಾಪಹರಣ ಮಾಡಲು ಸೂಚಿಸುತ್ತಾನೆ. ಸಹೋದರ ದುರ್ಯೋಧನನ ಸೂಚನೆಯಂತೆ ದುಶ್ಯಾಸನ ದ್ರೌಪದಿಯನ್ನ ಮಹಾಸಭೆಗೆ ಎಳೆದುಕೊಂಡು ಬಂದು ವಸ್ತ್ರಾಪಹರಣ ಮಾಡಲು ಮುಂದಾಗುತ್ತಾನೆ. 'ಕುರುಕ್ಷೇತ್ರ' ಯುದ್ಧಕ್ಕೆ ಈ ಒಂದು ಘಟನೆಯೂ ಪ್ರಮುಖ ಕಾರಣವಾಗುತ್ತೆ.

'ಕುರುಕ್ಷೇತ್ರ' ಚಿತ್ರದ ಯಾವ್ಯಾವ ಪಾತ್ರಗಳಲ್ಲಿ ಯಾವ್ಯಾವ ನಟರು ಮಿಂಚಲಿದ್ದಾರೆ ನೋಡಿ..

English summary
Kannada Actor Ravi chethan Has palying dushasana role in Darshan's 50th Movie Kurukshetra.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X