For Quick Alerts
  ALLOW NOTIFICATIONS  
  For Daily Alerts

  ಶಿವಣ್ಣನ ಸಿನಿಮಾದ ಹಾಡಿಗೆ ಧ್ವನಿಯಾದ ನಟ ರವಿಶಂಕರ್

  |

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ರುಸ್ತುಂ' ಚಿತ್ರದ ಮೇಕಿಂಗ್ ಫೋಟೊಗಳು ಅಭಿಮಾನಿಗಳ ಮೆಚ್ಚುಗೆ ಪಡೆದಿವೆ. ಸೆಂಚುರಿ ಸ್ಟಾರ್ ಹೊಸ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಚಿತ್ರದ ಮೇಕಿಂಗ್ ಫೋಟೊಗಳು ಸಖತ್ ವೈರಲ್ ಆಗಿವೆ. ಇದರ ಜೊತೆಗೀಗ ಚಿತ್ರದ ಟೈಟಲ್ ಟ್ರ್ಯಾಕ್ ಅನ್ನು ಖ್ಯಾತ ಖಳ ನಟ ರವಿಶಂಕರ್ ಹಾಡಿದ್ದಾರೆ ಅನ್ನುವ ವಿಚಾರ ಮತ್ತಷ್ಟು ಕುತೂಹಲ ಮೂಡಿಸಿದೆ.

  ಹೌದು, ಶಿವರಾಜ್ ಕುಮಾರ್ ಚಿತ್ರಕ್ಕೆ ಸಕಲಕಲಾವಲ್ಲಭ ರವಿಶಂಕರ್ ದ್ವನಿ ನೀಡಿದ್ದಾರಂತೆ. ಈ ಹಿಂದೆ ರವಿಶಂಕರ್ 'ಜಿಗರ್ ಥಂಡ' ಚಿತ್ರದ ಒಂದು ಹಾಡಿಗೆ ಕಂಠದಾನ ಮಾಡಿದ್ದರು. ಈಗ ಸ್ಟಾರ್ ನಟನ ಚಿತ್ರಕ್ಕೆ ಧ್ವನಿಯಾಗುತ್ತಿರವುದು ವಿಶೇಷ. ಟೈಟಲ್ ಟ್ರ್ಯಾಕ್ ಅಂದಮೇಲೆ ಒಂದಿಷ್ಟು ಜೋಷ್ ಮತ್ತು ಅಬ್ಬರ ಹಾಡಿನಲ್ಲಿರುತ್ತೆ. ಈ ಹಾಡು ರವಿಶಂಕರ್ ಗಡಸು ದ್ವನಿಯಲ್ಲಿ ಮೂಡಿಬರಲಿದೆ ಅಂದಮೇಲೆ ಹಾಡಿಗೆ ಮತ್ತಷ್ಟು ಕಳೆ ಬಂದಿರುತ್ತೆ. 'ರುಸ್ತುಂ' ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನಿರ್ದೇಶನವಿದೆ.

  ಒಂದೆಡೆ ಶಿವಣ್ಣನ ಡ್ಯಾನ್ಸ್ ಮತ್ತೊಂದೆಡೆ ರವಿಶಂಕರ್ ದ್ವನಿಯಲ್ಲಿ ಮೂಡಿ ಬರುವ ಹಾಡು ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡುವಲ್ಲಿ ಯಾವುದೆ ಅನುಮಾನವಿಲ್ಲ. ಈಗಾಗಲೇ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿ ಇರುವ ರವಿಶಂಕರ್, ಅಭಿನಯದ ಜೊತೆಗೆ ಈಗ ಗಾಯಕ ಕೂಡ ಆಗಿರುವುದು ಸಂತಸ ತಂದಿದೆ.

  ಇನ್ನು 'ರುಸ್ತುಂ' ಚಿತ್ರದಲ್ಲಿ ಶಿವಣ್ಣ ಮತ್ತಷ್ಟು ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಮೇಕಿಂಗ್ ಫೋಟೊ ಸಿಕ್ಕಾಪಟ್ಟೆ ವೈರಲ್ ಆಗಿವೆ. 'ರುಸ್ತುಂ' ಸಾಹಸ ನಿರ್ದೇಶಕ ರವಿವರ್ಮ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಚೊಚ್ಚಲ ಸಿನಿಮಾ. ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್, ರಚಿತಾ ರಾಮ್ ಮತ್ತು ಮಯೂರಿ ಮೂವರು ನಾಯಕಿಯರು ಕಾಣಿಸಿಕೊಂಡಿದ್ದಾರೆ. ಇನ್ನೂ ವಿಶೇಷ ಅಂದ್ರೆ ಖ್ಯಾತ ನಟ ವಿವೇಕ್ ಒಬೆರಾಯ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.

  English summary
  Famous actor Ravi Shankar singing a song for Shivaraj Kumar starrer 'Rustum' movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X