Don't Miss!
- News
Breaking; ಸಹೋದರನ ವಿರುದ್ಧ ಅಭ್ಯರ್ಥಿ ಘೋಷಿಸಿದ ರೆಡ್ಡಿ!
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Automobiles
ಭಾರತದಲ್ಲಿ ಮೊದಲ ಬಾರಿಗೆ 2.5 ಕೋಟಿ ಕಾರುಗಳ ಮಾರಾಟ ಮೈಲಿಗಲ್ಲು ಸಾಧಿಸಿದ ಜನಪ್ರಿಯ ಕಂಪನಿ
- Sports
IND vs NZ: 2ನೇ ಟಿ20 ಪಂದ್ಯದಲ್ಲಿ ಕಳಪೆ ಪಿಚ್ ನಿರ್ಮಾಣ; ಲಕ್ನೋ ಪಿಚ್ ಕ್ಯುರೇಟರ್ ವಜಾ
- Finance
Economic Survey: ಶೇ.6-6.8 ಜಿಡಿಪಿ ಬೆಳವಣಿಗೆ, 3 ವರ್ಷದಲ್ಲೇ ಮಂದಗತಿ
- Technology
ಬಿಎಸ್ಎನ್ಎಲ್ನ ಈ ಪೋಸ್ಟ್ಪೇಯ್ಡ್ ಪ್ಲ್ಯಾನ್ ಬೆಲೆ ಅಗ್ಗ; ಆದ್ರೆ, ರೀಚಾರ್ಜ್ ಕಷ್ಟ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ದರ್ಶನ್ ಜೊತೆ ರವಿಚಂದ್ರನ್: ಕ್ರಾಂತಿಗೆ ಹೊಸ ಕಾಂತಿ!
'ರಾಬರ್ಟ್' ಸಿನಿಮಾದ ಯಶಸ್ಸಿನ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೈಗೆತ್ತಿಕೊಂಡಿರುವ ಚಿತ್ರ 'ಕ್ರಾಂತಿ'. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಈ ಚಿತ್ರ ಅಧಿಕೃತವಾಗಿ ಘೋಷಣೆಯಾಗಿದೆ. 'ಯಜಮಾನ' ಚಿತ್ರದ ನಿರ್ಮಾಪಕಿ ಶೈಲಾಜ ನಾಗ್ 'ಕ್ರಾಂತಿ' ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಇದು ದರ್ಶನ್ ಅವರ 55ನೇ ಸಿನಿಮಾ ಎನ್ನುವುದು ವಿಶೇಷ. ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು, ದೊಡ್ಡ ಮಟ್ಟದಲ್ಲಿ ಟ್ರೆಂಡ್ ಹುಟ್ಟು ಹಾಕಿದೆ. ದರ್ಶನ್ ಅವರು ಈ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಕನ್ನಡ
ನಟರ
ಟ್ರೋಲ್:
ಯಶ್
ಅಭಿಮಾನಿಗಳು
ಮಾಡ್ತಿರೋದು
ಸರಿಯೇ?
ಕ್ರಾಂತಿ ಸಿನಿಮಾದಲ್ಲಿ ಹಲವು ಹೆಸರಾಂತ ಕಲಾವಿದರು ಅಭಿನಯಿಸುತ್ತಾ ಇದ್ದಾರೆ. ಕ್ರಾಂತಿಯ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಕ್ರಾಂತಿ ಸಿನಿಮಾ ಸೆಟ್‌ನಲ್ಲಿ ಪ್ರತ್ಯಕ್ಷವಾಗಿದ್ದಾರೆ. ದರ್ಶನ್ ಮತ್ತು ರವಿಚಂದ್ರನ್ ಫೋಟೊ ಸದ್ಯ ಎಲ್ಲೆಡೆ ವೈರಲ್ ಆಗಿದೆ.

ಕ್ರಾಂತಿಯಲ್ಲಿ ದರ್ಶನ್ ಜೊತೆಗೆ ರವಿಚಂದ್ರನ್!
ಕ್ರಾಂತಿ ಸಿನಿಮಾ ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿದೆ. ದೊಡ್ಡ ದೊಡ್ಡ ಕಲಾವಿದರು ಚಿತ್ರದಲ್ಲಿ ಇದ್ದಾರೆ. ಅದರಲ್ಲಿ ನಟ ರವಿಚಂದ್ರನ್ ಕೂಡ ಇದ್ದಾರೆ. ಕ್ರಾಂತಿ ಬಳಗ ಸೇರಿದ್ದಾರೆ ನಟ ರವಿಚಂದ್ರನ್. ಸೆಟ್‌ನಲ್ಲಿ ರವಿಚಂದ್ರನ್ ಮತ್ತು ದರ್ಶನ್ ಒಟ್ಟಿಗೆ ತೆಗೆಸಿಕೊಂಡಿರುವ ಫೋಟೊ ವೈರಲ್ ಆಗಿದೆ. ಇವರ ಜೊತೆಗೆ ಫೋಟೋದಲ್ಲಿ ನಿರ್ಮಾಪಕ ಸುಪ್ರಿತ್ ಕೂಡ ಕಾಣಿಸಿಕೊಂಡಿದ್ದಾರೆ.
ದರ್ಶನ್
ಜೊತೆಗೆ
ಇಟ್ಟ
ಮೊದಲ
ಹೆಜ್ಜೆ
ನೆನೆದ
'ಬುಲ್
ಬುಲ್'
ರಚಿತಾ
ರಾಮ್!

ಕ್ರಾಂತಿ ಚಿತ್ರದಲ್ಲಿನ ರವಿಚಂದ್ರನ್ ಲುಕ್ ರಿವೀಲ್!
ನಟ ರವಿಚಂದ್ರನ್ ಕ್ರಾಂತಿ ಚಿತ್ರದಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಲುಕ್ ರಿವೀಲ್ ಆಗಿದೆ. ವೈರಲ್ ಫೋಟೋದಲ್ಲಿ ನಟ ರವಿಚಂದ್ರನ್ ಪಂಚೆ, ಶರ್ಟು ತೊಟ್ಟು, ಕೊರಳಲ್ಲಿ ರುದ್ರಾಕ್ಷಿ ಧರಿಸಿದ್ದಾರೆ. ಹಾಗಾಗಿ ಕ್ರಾಂತಿ ಚಿತ್ರದಲ್ಲಿ ದರ್ಶನ್ ಅವರ ಅಪ್ಪ ಅಥವಾ ಅಣ್ಣನ ಪಾತ್ರದಲ್ಲಿ ರವಿಚಂದ್ರನ್ ಅಭಿನಯಿಸಿರಬಹುದು. ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ನೀಡಬೇಕಿದೆ.

ಇತ್ತೀಚೆಗೆ ಅಭಿರಾಮಿ 'ಕ್ರಾಂತಿ' ಚಿತ್ರತಂಡ ಸೇರಿದ್ದಾರೆ!
ಇತ್ತೀಗೆ ನಟಿ ಅಭಿರಾಮಿ 'ಕ್ರಾಂತಿ' ಚಿತ್ರದ ಸೆಟ್‌ನಲ್ಲಿ ಪ್ರತ್ಯಕ್ಷವಾಗಿದ್ದರು. ದರ್ಶನ್ ಜೊತೆಗಿನ ಫೋಟೋವನ್ನು ಅಭಿರಾಮಿ ಹಂಚಿಕೊಂಡಿದ್ದರು. ನಟಿ ಅಭಿರಾಮಿ 'ಕ್ರಾಂತಿ' ಚಿತ್ರದಲ್ಲಿ ನಟಿಸುತ್ತಾರೆ ಎನ್ನಲಾಗಿದೆ. ಈ ಹಿಂದೆ ನಟ ದರ್ಶನ್ ಜೊತೆಗೆ ಲಾಲಿ ಹಾಡು ಚಿತ್ರದಲ್ಲಿ ಅಭಿರಾಮಿ ಕಾಣಿಸಿಕೊಂಡಿದ್ದರು. ಈಗ ಎರಡು ದಶಕಗಳ ಬಳಿಕ ಅಭಿರಾಮಿ ದರ್ಶನ್ ಜೊತೆಗೆ ಮತ್ತೆ ಸಿನಿಮಾ ಮಾಡುತ್ತಿದ್ದಾರೆ ಎನ್ನು ಚರ್ಚೆ ಹುಟ್ಟಿದೆ.
'ಕ್ರಾಂತಿ'ಯಲ್ಲಿ
ಅಭಿನಯ,
ಅಭಿರಾಮಿ
ಮಾತು:
ದರ್ಶನ್
ಭೇಟಿಯ
ಕಾರಣ
ಇಲ್ಲಿದೆ

'ರಾಜವೀರ ಮದಕರಿ ನಾಯಕ' ಜಾಗಕ್ಕೆ 'ಕ್ರಾಂತಿ' ಎಂಟ್ರಿ!
ದರ್ಶನ್ ನಟನೆಯ ಈ ಹಿಂದಿನ ಸಿನಿಮಾ 'ರಾಬರ್ಟ್' ದೊಡ್ಡ ಯಶಸ್ಸು ಗಳಿಸಿದೆ. ಅದಾದ ಬಳಿಕ 'ರಾಜವೀರ ಮದಕರಿ ನಾಯಕ' ಸಿನಿಮಾದ ಚಿತ್ರೀಕರಣ ಆರಂಭಿಸಿದ್ದರು ದರ್ಶನ್. ಆದರೆ ಆ ಸಿನಿಮಾದ ಚಿತ್ರೀಕರಣವನ್ನು ನಿಲ್ಲಿಸಲಾಗಿದೆ. 'ರಾಜವೀರ ಮದಕರಿ ನಾಯಕ' ಸಿನಿಮಾವನ್ನು ಹಿರಿಯ ನಿರ್ದೇಶಕ ರಾಜೇಂದ್ರ ಬಾಬು ನಿರ್ದೇಶನ ಮಾಡುತ್ತಿದ್ದು, ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ. ಹಾಗಾಗಿ ಈಗ ಕ್ರಾಂತಿ ಸಿನಿಮಾವನ್ನು ದರ್ಶನ್ ಆರಂಭಿಸಿದ್ದು, ಶೂಟಿಂಗ್‌ನಲ್ಲಿ ಬ್ಯೂಸಿ ಆಗಿದ್ದಾರೆ.