Don't Miss!
- News
ಕಾಂಗ್ರೆಸ್ ಮಾತಿಗೂ ಹಾಗೂ ಕೃತಿಗೂ ವ್ಯತ್ಯಾಸವಿದೆ: ಬಸವರಾಜ ಬೊಮ್ಮಾಯಿ
- Finance
ಫೆಬ್ರವರಿ 1ರಿಂದ ಯಾವೆಲ್ಲ ಹಣಕಾಸು ನಿಯಮ ಬದಲಾವಣೆಯಾಗಲಿದೆ?
- Sports
IND vs NZ: ದ್ವಿಶತಕ ಬಾರಿಸಿದ ನಂತರ ಇಶಾನ್ ಕಿಶನ್ ಗ್ರಾಫ್ ಏರುತ್ತದೆ ಎಂದು ಭಾವಿಸಿದ್ದೆ; ಗೌತಮ್ ಗಂಭೀರ್
- Technology
ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ, ನೀವು Rank ಪಡೆಯಲು ಈ ಆಪ್ಗಳನ್ನು ಬಳಕೆ ಮಾಡಿ!
- Automobiles
ಭಾರತದಲ್ಲಿ ಅಬ್ಬರಿಸಲು ಬಿಡುಗಡೆಯಾಯ್ತು ಹೀರೋ Xoom 110 ಸ್ಕೂಟರ್: ಬೆಲೆ ರೂ.68,599...!
- Lifestyle
ಸಮಂತಾ ಮಯೋಸೈಟಿಸ್ನಿಂದ ಚೇತರಿಸಿಕೊಳ್ಳಲು ಪಾಲಿಸುತ್ತಿರುವ ಡಯಟ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪ್ರೇಮಲೋಕ ಚಿತ್ರದ ಹಾಡಿನ ರಹಸ್ಯ ಬಿಚ್ಚಿಟ್ಟ ರವಿಚಂದ್ರನ್: ಸಿಂಗಾಪುರದಿಂದ ಬಂದಿತ್ತು ವಿಶೇಷ ಉಡುಪು!
ಕ್ರೇಜಿಸ್ಟಾರ್ ರವಿಚಂದ್ರನ್ ಏನೇ ಮಾಡಿದರು ಡಿಫ್ರೆಂಟ್ ಅದು ಅವರ ಮೊದಲ ಚಿತ್ರದಿಂದಲೂ ಸಾಬೀತಾಗಿದೆ. ಇಂದಿಗೂ ರವಿಚಂದ್ರನ್ ನಿರ್ದೇಶನ ಮಾಡ್ತಿದ್ದಾರೆ ಅಂದರೆ ಸಾಕು ಅಲ್ಲಿ ಎಲ್ಲಿಲ್ಲದ ಕ್ರೇಜ್ ಹುಟ್ಟಿಕೊಳ್ಳುತ್ತದೆ. ರವಿಚಂದ್ರನ್ ಎನ್ನುವ ಹೆಸರಿಗೇನೆ ಒಂದು ತೂಕ ಇದೆ.
ಇತ್ತೀಚೆಗೆ ರವಿಚಂದ್ರನ್ ಎಲ್ಲೆಡೆ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿದ್ದಾರೆ. ಆಗಾಗ ಅವರ ಮಾತುಗಳು ಕಿವಿಗೆ ಬೀಳುತ್ತವೆ. ರವಿಚಂದ್ರನ್ ಏನೋ ಹೇಳಿದ್ದಾರೆ ಅಂದರೆ ಅದು ಯಾವ ವಿಚಾರವೇ ಆಗಿರಲಿ ಜನ ಅದನ್ನು ಆಲಿಸುತ್ತಾರೆ. ಯಾಕೆಂದರೆ ರವಿಚಂದ್ರನ್ ಹಾಕುವ ಪಾಯಿಂಟ್ ಎಂದಿಗೂ ಪರ್ಫೆಕ್ಟ್ ಅನಿಸುತ್ತೆ.
ಇತ್ತೀಚೆಗೆ ರವಿಚಂದ್ರನ್ ಖಾಸಗಿ ವಾಹಿನಿ ಒಂದರ ರಿಯಾಲಿಟಿ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಅಲ್ಲಿ ಅದೆಷ್ಟೋ ವಿಚಾರಗಳನ್ನು ಕ್ರೇಜಿಸ್ಟಾರ್ ತೆರೆದಿಟ್ಟಿದ್ದಾರೆ. ಸಾಕಷ್ಟು ಆಶ್ಚರ್ಯಕರ ಸಂಗತಿಗಳನ್ನು ರವಿಚಂದ್ರನ್ ಬಿಚ್ಚಿಟ್ಟಿದ್ದಾರೆ.

ಸಿನಿಮಾಗಾಗಿ ಏನು ಬೇಕಾದರೂ ಮಾಡುವ ಕ್ರೇಜಿ ವ್ಯಕ್ತಿ ಕ್ರೇಜಿಸ್ಟಾರ್!
ರವಿಚಂದ್ರನ್ ಅವರಿಗೆ ಕ್ರೇಜಿ ಸ್ಟಾರ್ ಎನ್ನುವ ಬಿರುದು ಸುಖಾ ಸುಮ್ಮನೆ ಬಂದಿಲ್ಲ. ಯಾಕೆಂದರೆ ಸಿನಿಮಾ ವಿಚಾರ ಅಂತ ಬಂದರೆ ರವಿಚಂದ್ರನ್ ಅಷ್ಟೊಂದು ಕ್ರೇಜಿ. ಬೆಳ್ಳಿ ಪರದೆಯ ಫ್ರೇಮ್‌ಗೆ ಎನೆಲ್ಲಾ ಬೇಕೋ ಅದನ್ನೆಲ್ಲಾ ಚಾಚು ತಪ್ಪದೆ ಮಾಡುತ್ತಿದ್ದರು. ಹಾಗಾಗಿಯೇ ಅವರ ಸಿನಿಮಾಗಳು ಚಿತ್ರರಂಗದ ದಿಕ್ಕನ್ನೇ ಬದಲಿಸುತ್ತಾ ಬಂತು. ಅಂದು ರವಿಚಂದ್ರನ್ ಅವರು ಮಾಡಿದ ಸಿನಿಮಾಗಳು ಇಂದು ಸಿನಿಮಾ ಮಂದಿಗೆ ಸಿನಿಮಾ ಪಾಠ ಅಂದರೆ ತಪ್ಪಾಗಲಾರದು. ಯಾಕೆಂದರೆ ಒಂದು ಸಿನಿಮಾದ ಎಲ್ಲಾ ಆಯಾಮಗಳನ್ನು ರವಿಚಂದ್ರನ್ ಅವರ ಸಿನಿಮಾಗಳಲ್ಲಿ ನಾವು ನೋಡಬಹುದು. ಅಷ್ಟೇ ಅಲ್ಲಾ ತೆರೆಯ ಮೇಲೆ ಅದನ್ನು ನಾವು ಅನುಭವಿಸಬಹುದು.

ಪ್ರೇಮಲೋಕದ ಹಾಡಿಗಾಗಿ ಸಿಂಗಾಪುರದಿಂದ ಬಂದಿತ್ತು 24 ಸಾವಿರದ ಅಂಗಿ!
ಖಾಸಗಿ ವಾಹಿನಿ ಕಾರ್ಯಕ್ರಮ ಒಂದರಲ್ಲಿ 'ಪ್ರೇಮ ಲೋಕ' ಚಿತ್ರದ 'ಬನ್ನಿ ಗೆಳೆಯರೆ' ಹಾಡನ್ನು ಹಾಡಲಾಯಿತು. ಈ ಹಾಡಿನ ಕುರಿತು ರವಿಚಂದ್ರನ್ ಸಾಕಷ್ಟು ಸ್ವಾರಸ್ಯಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಈ ಹಾಡಿನಲ್ಲಿ ರವಿಚಂದ್ರನ್ ಬಳಸಿದ ಹಳದಿ ಬಣ್ಣದ ಅಂಗಿ (ಪುಲ್ ಓವರ್)ಯನ್ನು ನಾವೆಲ್ಲಾ ಹಾಡಿನಲ್ಲಿ ನೋಡಿದ್ದೇವೆ. ಆದರೆ ಈ ಒಂದು ಅಂಗಿಗೆ ಆ ಕಾಲದಲ್ಲೇ ರವಿಚಂದ್ರನ್ 24 ಸಾವಿರ ಹಣ ಕೊಟ್ಟಿದ್ದಾರೆ. ಈ ಹಾಡಿಗಾಗಿ ಸಿಂಗಾಪುರದಿಂದ ಈ ಶರ್ಟ್ ತರಿಸಿದ್ದರಂತೆ. ಈ ವಿಷಯ ಕೇಳಿ ಅವರ ತಂದೆ ಎನ್.ವೀರಸ್ವಾಮಿ ಅವರೂ ಕೂಡ ಅಚ್ಚರಿ ಪಟ್ಟಿದ್ದರಂತೆ. ಈ ವಿಚಾರವನ್ನು ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ರವಿಚಂದ್ರನ್ ರಿವೀಲ್ ಮಾಡಿದ್ದಾರೆ. 1987ರಲ್ಲೇ ಸಿನಿಮಾಗಾಗಿ ರವಿಮಾಮ ಇಷ್ಟೆಲ್ಲಾ ಖರ್ಚು ಮಾಡುತ್ತಿದ್ದರು. ಅಂದರೆ ಅವರು ಅಂದುಕೊಂಡ ಹಾಗೆ ಸಿನಿಮಾ ಮೂಡಿ ಬರಲು ಅವರು ಎನು ಬೇಕಾದರು ಮಾಡಲು ಸಿದ್ಧವಾಗಿರುತ್ತಿದ್ದರು.

ಕಾರ್ಯಕ್ರಮದಲ್ಲಿ ಅಪ್ಪು ನೆನೆದ ಕ್ರೇಜಿಸ್ಟಾರ್!
ನಟ, ನಿರ್ದೇಶಕ, ನಿರ್ಮಾಪಕ ಮಾತ್ರವಲ್ಲ ಒಂದು ಸಿನಿಮಾಗೆ ಜೀವತುಂಬುವ ಜಾದೂಗಾರ ಈ ಕ್ರೇಜಿಸ್ಟಾರ್. ಇಂದಿಗೂ ಎಲ್ಲರನ್ನು ಸೆಳೆಯುವ ಆ 'ಪ್ರೇಮಲೋಕ' ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಮಾಡಿದ ಚಿತ್ರ. ಈ ಚಿತ್ರದ ಹಾಡಿನ ಬಗ್ಗೆ ರವಿಚಂದ್ರನ್ ಯಾರಿಗೂ ಗೊತ್ತಿರದ ವಿಶೇಷ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ಕಾರ್ಯಕ್ರಮದಲ್ಲಿ ದಿವಂಗತ ಪುನೀತ್ ರಾಜ್‌ಕುಮಾರ್ ಅವರನ್ನು ಕುರಿತು ಮಾತನಾಡಿದ್ದಾರೆ. ಅಪ್ಪು ಬಿಟ್ಟು ಹೋದ ಸಂದೇಶದ ಬಗ್ಗೆಯೂ ರವಿಚಂದ್ರನ್ ಮಾತನಾಡಿದ್ದಾರೆ.

ವಾರ್ತಾ ವಾಚಕರಿಗೆ ರವಿಚಂದ್ರನ್ ಕಿವಿಮಾತು!
ರವಿಚಂದ್ರನ್ ವಿಭಿನ್ನ ಅಂತ ಸುಮ್ಮನೆ ಹೇಳೋಕಾಗಲ್ಲ. ಅವರು ಹೇಳುವ ಮಾತುಗಳು ಸತ್ಯಕ್ಕೆ ಸದಾ ಹತ್ತಿರ. ಹಾಗಾಗಿ ಅವರ ಮಾತುಗಳು ಎಲ್ಲರೂ ಒಪ್ಪುವಂತೆ ಇರುತ್ತವೆ. ಇತ್ತೀಚೆಗೆ ರವಿಚಂದ್ರನ್ ವಾರ್ತಾ ವಾಚಕರು (ನ್ಯೂಸ್ ಆಂಕರ್)ಗಳ ಕುರಿತಾಗಿ ಮಾತನಾಡಿದ್ದರು. ನಡೆದಿರುವ ನೈಜ ಘಟನೆಗಳನ್ನು ಹೇಳುವಾಗ, ಆ ಫೀಲ್ ಇರಬೇಕು. ಧಾರಾವಾಹಿ ನಟರಂತೆ ವಾರ್ತಾ ವಾಚಕರು ಇಂದು ಸುದ್ದಿ ಓದುವಾಗ ಅಭಿನಯಿಸುತ್ತಾರೆ. ಅದು ಆಗಬಾರದು. ಜೀವನ ನಾಟಕ ಎನಿಸಿಬಾರದು ಎಂದು ಹೇಳಿದ್ದರು. ರವಿಚಂದ್ರನ್ ಅವರ ಈ ಮಾತುಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿ ಬಿಟ್ಟಿದ್ದವು.
ಇತ್ತಿಚೆಗೆ ಸಿನಿಮಾ ತಾರೆಯ ಉಡುಪುಗಳ ಬೆಲೆಯ ಬಗ್ಗೆ ಚರ್ಚೆ ಆಗುತ್ತಿರುತ್ತದೆ. ಆದರೆ ರವಿಚಂದ್ರನ್ ಆ ಕಾಲಕ್ಕೆ ಒಂದು ಪ್ರಾಪರ್ಟಿಗಾಗಿ ಸಾಕಷ್ಟು ಖರ್ಚು ಮಾಡಿ ಸಿನಿಮಾ ಫ್ರೇಮ್‌ನ ಅಂದವನ್ನು ಹೆಚ್ಚು ಮಾಡುತ್ತಿದ್ದರು. ಅವರ ಡೆಡಿಕೇಷನ್ ಸಿನಿಮಾ ಮಾಡಲು ಮುಂದಾಗುವ ಎಲ್ಲರಿಗೂ ಒಂದು ಪಾಠವೇ ಸರಿ.