For Quick Alerts
  ALLOW NOTIFICATIONS  
  For Daily Alerts

  ರವಿಶಂಕರ್ ಹುಟ್ಟುಹಬ್ಬ; ಸೀರಿಯಲ್ ಸೆಟ್ ಚಂದ್ರಪ್ಪನಾಗಿ ಎಂಟ್ರಿ ಕೊಟ್ಟ ಆರ್ಮುಗಂ

  |

  ಮಲ್ಟಿ ಟ್ಯಾಲೆಂಟೆಡ್ ಅರ್ಮುಗಂ ರವಿ ಶಂಕರ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 54ನೇ ವತಂಸಕ್ಕೆ ಕಾಲಿಟ್ಟಿರುವ ನಟ ರವಿಶಂಕರ್ ಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ. ನಟ ರವಿಶಂಕರ್ ಕೇವಲ ಖಳಟನಾಗಿ ಮಾತ್ರವಲ್ಲದೆ, ಹಾಸ್ಯ ಕಲಾವಿದನಾಗಿ, ಪೋಷಕನಟನಾಗಿ, ಗಾಯಕನಾಗಿ ಗುರುಸಿಕೊಂಡಿದ್ದಾರೆ.

  ಭಿನ್ನ ವಿಭಿನ್ನ ಪಾತ್ರಗಳಲ್ಲಿ ನಟಿಸುವ ಮೂಲಕ ರವಿಶಂಕರ್ ಚಿತ್ರರಸಿಕರ ಮನಗೆದ್ದಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವ ನಟ ರವಿಶಂಕರ್ ತರಹೇವಾರಿ ಪಾತ್ರಗಳ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಅರ್ಮುಗಂ ಅಂತನೆ ಖ್ಯಾತಿಗಳಿಸಿರುವ ರವಿಶಂಕರ್ ಹುಟ್ಟಹಬ್ಬದ ದಿನ ಸೀರಿಯಲ್ ಸೆಟ್ ಚಂದ್ರಪ್ಪನಾಗಿ ಚಿತ್ರರಸಿಕರ ಮುಂದೆ ಬಂದಿದ್ದಾರೆ.

  ತೆಲುಗು ಟಿವಿ ಶೋನಲ್ಲಿ 'ಆರ್ಮುಗ' ರವಿಶಂಕರ್, ಕಿಚ್ಚ ಸುದೀಪ್ ಬಗ್ಗೆ ಹೇಳಿದ್ದೇನು?ತೆಲುಗು ಟಿವಿ ಶೋನಲ್ಲಿ 'ಆರ್ಮುಗ' ರವಿಶಂಕರ್, ಕಿಚ್ಚ ಸುದೀಪ್ ಬಗ್ಗೆ ಹೇಳಿದ್ದೇನು?

  ಹೌದು, ರವಿಶಂಕರ್ ಹೊಸ ಸಿನಿಮಾದಲ್ಲಿ ಸೀರಿಯಲ್ ಸೆಟ್ ಚಂದ್ರಪ್ಪ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚೇತಕ್ ಸ್ಕೂಟರ್ ಮೇಲೆ ಸೀರಿಯಲ್ ಸೆಟ್, ಮೈಕ್ ಸೆಟ್ ಹೊತ್ತುಕೊಂಡು ಹೋಗುತ್ತಿರುವ ರವಿಶಂಕರ್ ಲುಕ್ ರಿಲೀಸ್ ಆಗಿದೆ. ರವಿಶಂಕರ್ ಹೊಸ ಗೆಟಪ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

  ಅಂದಹಾಗೆ ರವಿಶಂಕರ್ ಸೀರಿಯಲ್ ಸೆಟ್ ಚಂದ್ರಪ್ಪ ಆಗಿರುವುದು 'ತಲ್ವಾರ್ ಪೇಟೆ' ಸಿನಿಮಾಗಾಗಿ. ತಲ್ವಾರ್ ಪೇಟೆ ಚಿತ್ರ ಈಗಾಗಲೇ ಸದ್ದಿಲ್ಲದೆ ಬಹುತೇಕ ಚಿತ್ರೀಕರಣ ಮಾಡಿ ಮುಗಿಸಿದೆ. ಚಿತ್ರದಲ್ಲಿ ನಾಯಕನಾಗಿ ವಸಿಷ್ಠ ಸಿಂಹ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಸೋನಲ್ ಮಂಥೆರೋ ನಟಿಸಿದ್ದಾರೆ.

  Recommended Video

  ಒಂದೇ ವಾರದಲ್ಲಿ ದಾಖಲೆಯ ಕಲೆಕ್ಷನ್ ಮಾಡಿತ್ತು ಮಠ ಸಿನಿಮಾ | Elldelu Manjunatha | Filmibeat Kannada

  ಕೆ ಲಕ್ಷ್ಮಣ್ ಮತ್ತು ಶ್ರೀರಾಮ್ ಸಹೋದರರು ಆಕ್ಷನ್ ಕಟ್ ಹೇಳಿದ್ದಾರೆ. ರವಿ ಶಂಕರ್ ಹುಟ್ಟುಹಬ್ಬದ ಪ್ರಯುಕ್ತ ಸೀರಿಯಲ್ ಸೆಟ್ ಚಂದ್ರಪ್ಪನ ಲುಕ್ ರಿವೀಲ್ ಮಾಡಲಾಗಿದೆ. ರವಿಶಂಕರ್ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮತ್ತಷ್ಟು ಉತ್ತಮ ಸಿನಿಮಾಗಳನ್ನು ಮಾಡುತ್ತಾ, ಅಭಿಮಾನಿಗಳನ್ನು ರಂಜಿಸುತ್ತಿರಲಿ ಎನ್ನುವುದು ಅಭಿಮಾನಿಗಳ ಆಶಯ.

  English summary
  Kannada Actor Ravishankar palying Serial set Chandrappa role in Talwar pete. Ravishankar's Serial set Chandrappa look revealed on his birthday.
  Saturday, November 28, 2020, 11:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X