For Quick Alerts
  ALLOW NOTIFICATIONS  
  For Daily Alerts

  ಅಂಬರೀಶ್ ವರ್ಷದ ಪುಣ್ಯ ತಿಥಿ: ಅಭಿಮಾನಿಗಳಿಗೆ ಅಂಬಿ ಕುಟುಂಬದ ಆಹ್ವಾನ

  |

  ರೆಬಲ್ ಸ್ಟಾರ್ ಅಂಬರೀಶ್ ನಿಧನ ಹೊಂದಿ ಒಂದು ವರ್ಷ ಆಗುತ್ತಾ ಬಂತು. ಇದೇ ತಿಂಗಳು 24ಕ್ಕೆ ಮಂಡ್ಯದ ಗಂಡು ಅಂಬರೀಶ್, ಕುಟುಂಬದವರು, ಸ್ನೇಹಿತರು ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿ ಒಂದು ವರ್ಷವಾಗುತ್ತಿದೆ. ಅಂಬರೀಶ್ ವರ್ಷದ ಪುಣ್ಯತಿಥಿಗೆ ಕುಟುಂಬದವರು ಅಭಿಮಾನಿಗಳಿಗೆ ಆಹ್ವಾನ ನೀಡಿದ್ದಾರೆ.

  ಇದೆ ತಿಂಗಳು 14ಕ್ಕೆ ಅಂದರೆ ನಾಳೆ ಅಂಬರೀಶ್ ವರ್ಷದ ಪುಣ್ಯ ತಿಥಿಯನ್ನು ಆಚರಿಸಲು ಕುಟುಂಬದವರು ನಿರ್ಧರಿಸಿದ್ದಾರೆ. ನವೆಂಬರ್ 14 ಗುರುವಾರ ವರ್ಷದ ಪುಣ್ಯತಿಥಿಗೆ ಒಳ್ಳೆಯದಿನವಾದ ಕಾರಣ 10 ದಿನಗಳ ಮುಂಚಿತವಾಗಿಯೆ ಪುಣ್ಯಕಾರ್ಯ ಮಾಡಲಾಗುತ್ತಿದೆ. ಈ ಕಾರ್ಯದಲ್ಲಿ ಕುಟುಂಬದ ಜೊತೆಗೆ ಚಿತ್ರರಂಗದ ಗಣ್ಯರು, ಸ್ನೇಹಿತರು ಭಾಗಿಯಾಗಲಿದ್ದಾರೆ.

  ಅಂಬಿ ಮೀಸೆ ಮೇಲೆ ಕೈಯಿಟ್ಟ ಯಶ್ ಮಗಳು: ಫೋಟೋ ವೈರಲ್ಅಂಬಿ ಮೀಸೆ ಮೇಲೆ ಕೈಯಿಟ್ಟ ಯಶ್ ಮಗಳು: ಫೋಟೋ ವೈರಲ್

  ಪುಣ್ಯ ತಿಥಿ ಕಾರ್ಯ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಗೇಟ್ ನಂ.4 ವೃಕ್ಷಹಾಲ್, ಗಾಯತ್ರಿ ವಿಹಾರ್ ನಲ್ಲಿ ನಡೆಯಲಿದೆ. ಈಗಾಗಲೆ ಪುಣ್ಯಕಾರ್ಯಕ್ಕೆ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿದೆ.

  "ಸ್ನೇಹ ಜೀವಿ ಸ್ಮರಣಾರ್ಥ ಆಮಂತ್ರಣ ಸ್ನೇಹ ಸಾಗರ, ಪ್ರೀತಿ ಅಜರಾಮರ ಎನ್ನುವುದನ್ನು ಜಗತ್ತಿಗೆ ಸಾರಿದವರು ಈ ಮಣ್ಣಿನ ಹೆಮ್ಮೆಯ ಕುವರ ರೆಬಲ್ ಸ್ಟಾರ್ ಡಾ.ಅಂಬರೀಶ್ ರವರ ಸ್ಮರಣೀಯ ದಿನ. ಅವರ ಹೃದಯವಾಸಿಗಳಾದ ನಿಮ್ಮೆಲ್ಲರಿಗೂ ಆತ್ಮೀಯ ಆಹ್ವಾನ" ಎಂದು ಬರೆದು ಎಲ್ಲರಿಗೂ ಆಹ್ವಾನ ನೀಡಲಾಗಿದೆ.

  English summary
  Kannada actor Rebel star Ambareesh first year death anniversary ceremony tomorrow.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X