For Quick Alerts
  ALLOW NOTIFICATIONS  
  For Daily Alerts

  ಹೊಸ ಕ್ರಾಂತಿಗೆ ಸಜ್ಜಾದ ಕಾಮಿಡಿ ಕಿಂಗ್ ಸಾಧುಕೋಕಿಲ!

  |

  ಸಿನಿಮಾ ತಾರೆಯರು ಈಗ ಏನೆ ವಿಚಾರ ಇದ್ದರು ವಿನಿಮಯ ಮಾಡಿಕೊಳ್ಳುವುದು ಮಾತ್ರ ಸೋಷಿಯಲ್ ಮಿಡಿಯಾದ ಮೂಲಕವೆ. ಸಿನಿಮಾ ತಾರೆಯರನ್ನು ಹೆಚ್ಚಿನ ಜನರು ಫಾಲೋ ಮಾಡುತ್ತಾರೆ. ಹಾಗಾಗಿ ಅವರು ಏನೆ ಹೇಳ ಬಯಸಿದರೂ ಕೂಡ, ಸೋಷಿಯಲ್ ಮೀಡಿಯಾದ ಮೂಲಕವೇ ಹೆಚ್ಚು ವಿಚಾರಗಳನ್ನು ಹಂಚಿಕೊಳ್ಳತ್ತಾರೆ.

  ಈಗ ಸೆಲೆಬ್ರೆಟಿಗಳ ಸೋಷಿಯಲ್ ಮಿಡಿಯಾದ ಬಗ್ಗೆ ಮಾತನಾಡೋಕೆ ಕಾರಣ ಇದೆ. ಹೌದು ಈಗಿನ ಕಾಲದಲ್ಲೂ ಕೂಡ ಹಲವು ಸಿನಿಮಾ ಮಂದಿ ಸೋಷಿಯಲ್ ಮಿಡಿಯಾ ಬಳಸುವುದಿಲ್ಲ. ಅದರಲ್ಲೂ ಅನೇಕ ಹಿರಿಯ ಕಲಾವಿದರು ಇದರಿಂದ ದೂರವೇ ಉಳಿದು ಬಿಟ್ಟಿದ್ದಾರೆ.

  ಕಣ್ಮುಂದೆ 'ಪುಷ್ಪ' ಇದ್ದರೂ 'ಕಾಂತಾರ' ಪ್ಯಾನ್ ಇಂಡಿಯಾ ಯಾಕೆ ಆಗಿಲ್ಲ?ಕಣ್ಮುಂದೆ 'ಪುಷ್ಪ' ಇದ್ದರೂ 'ಕಾಂತಾರ' ಪ್ಯಾನ್ ಇಂಡಿಯಾ ಯಾಕೆ ಆಗಿಲ್ಲ?

  ಹೀಗೆ ಇಷ್ಟು ದಿನ ಸೋಷಿಯಲ್ ಮಿಡಿಯಾದಿಂದ ದೂರವೇ ಇದ್ದ ಕಾಮಿಡಿ ಕಿಂಗ್ ಸಾಧುಕೋಕಿಲ ಈಗ ಸಾಮಾಜಿಕ ಜಾಲತಾಣಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಈ ಬಗ್ಗೆ ಸಾಧುಕೋಕಿಲ ಏನಂತಾರೆ ಎನ್ನುವುದನ್ನು ಮುಂದೆ ಓದಿ...

  ಕಾಮಿಡಿ ಕಿಂಗ್ ಸಾಧು ಮಹಾರಾಜ್!

  ಕಾಮಿಡಿ ಕಿಂಗ್ ಸಾಧು ಮಹಾರಾಜ್!

  ಸಾಧುಕೋಕಿಲ ಎನ್ನು ಹೆರಸು ಕೇಳಿದರೆ ಸಾಕು ಹಲವರ ಮೊಗದಲ್ಲಿ ನಗು ಉಕ್ಕುತ್ತದೆ. ಅಷ್ಟರ ಮಟ್ಟಿಗೆ ಸಾಧುಕೋಕಿಲ ಪ್ರೇಕ್ಷಕರನ್ನು ನಕ್ಕು ನಗಿಸಿದ್ದಾರೆ. ಯಾವುದೇ ಪಾತ್ರವಿರಲಿ, ತಮ್ಮ ಪಾತ್ರದ ಮೂಲಕ ಪ್ರೇಕ್ಷಕರನ್ನು ನಗಿಸುತ್ತಾರೆ ಸಾಧು. ಅಭಿನಯದ ಅಂತ ಬಂದಾಗ ಕಾಮಿಡಿ ಮಾಡಿರುವದೇ ಹೆಚ್ಚು. ನೂರಾರು ಸಿನಿಮಾಗಳಲ್ಲಿ ನೂರಾರು ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿ ಖ್ಯಾತಿ ಇವರಿಗೆ ಸಲ್ಲುತ್ತದೆ.

  ವಿದೇಶದಲ್ಲೂ ಹಾರುತ್ತಿದೆ ಕನ್ನಡದ 'ಗಾಳಿಪಟ'!ವಿದೇಶದಲ್ಲೂ ಹಾರುತ್ತಿದೆ ಕನ್ನಡದ 'ಗಾಳಿಪಟ'!

  ಸಾಧುಕೋಕಿಲಾಗೆ ಹೆಚ್ಚಿನ ಡಿಮ್ಯಾಂಡ್!

  ಸಾಧುಕೋಕಿಲಾಗೆ ಹೆಚ್ಚಿನ ಡಿಮ್ಯಾಂಡ್!

  ಸಾಧುಕೋಕಿಲ ಅವರಿಗೆ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಭಾರಿ ಬೇಡಿಕೆ ಇದೆ. ಸ್ಟಾರ್ ನಟರ ಸಿನಿಮಾಗಳಲ್ಲಿ ಇವರಿಗೆ ಒಂದು ಪಾತ್ರ ಸದಾ ಮಿಸಲಿರುತ್ತದೆ. ಒಂದು ರೀತಿಯಲ್ಲಿ ಸಾಧುಕೋಕಿಲ ಸಿನಿಮಾದ ಎರಡನೇ ಹೀರೋ ಎಂದೇ ಹೇಳಬಹುದು. ಹೀರೋ ಎಂಟ್ರಿಗೆ ಚಪ್ಪಾಳೆ ಬೀಳುತ್ತೋ ಇಲ್ವೋ, ಇವರ ಎಂಟ್ರಿಗೆ ಮಾತ್ರ ಶಿಳ್ಳೆ, ಚಪ್ಪಾಳೆ ಫಿಕ್ಸ್. ಹಾಗಾಗಿ ಸಿನಿಮಾದಲ್ಲಿ ಸಾಧುಕೋಕಿಲ ಇದ್ದಾರೆ ಎಂದರೆ, ಅವರ ಪಾತ್ರದ ಪರಿಚಯವನ್ನು ವಿಶೇಷವಾಗಿ ಮಾಡಿಕೊಡಲಾಗುತ್ತದೆ.

  ನಿರ್ದೇಶಕ, ಸಂಗೀತ ನಿರ್ದೇಶಕ!

  ನಿರ್ದೇಶಕ, ಸಂಗೀತ ನಿರ್ದೇಶಕ!

  ಸಾಧುಕೋಕಿಲ ಸಿನಿಮಾಗಳಲ್ಲಿ ಕಾಮಿಡಿ ಪಾತ್ರ ಮಾಡುವುದು ಮಾತ್ರವಲ್ಲ, ನಿರ್ದೇಶಕನಾಗಿ, ಸಂಗೀತ ನಿರ್ದೇಶಕನಾಗಿ ಗೆದ್ದಿದ್ದಾರೆ. 'ರಕ್ತ ಕಣ್ಣೀರು', 'ಅನಾಥರು', 'ಸುಂಟರಗಾಳಿ' ಸೇರಿದಂತೆ 10ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ ಸಾಧುಕೋಕಿಲ. ಇನ್ನು ಸಂಗೀತ ನಿರ್ದೇಶಕನಾಗಿಯೂ ಗೆದ್ದಿದ್ದಾರೆ. ಹಲವಾರು ಸಿನಿಮಾಗಳಿಗೆ ಸಂಗೀತ ಮಾಡುವುದ ಮೂಲಕ ಸೈ ಎನಿಸಿಕೊಂಡಿದ್ದಾರೆ ಸಾಧು. ಜೊತೆಗೆ ಕೆಲವು ಸಿನಿಮಾಗಳಿಗೆ ಬಂಡವಾಳ ಹೂಡಿ, ನಿರ್ಮಾಪಕನೂ ಆಗಿದ್ದಾರೆ ಸಾಧುಕೋಕಿಲ.

  ವಿಡಿಯೋ ಮೂಲಕ ಸಾಧು ಮನವಿ!

  ಈಗ ಸೋಷಿಯಲ್ ಮೀಡಿಯಾಗೆ ಎಮಟ್ರಿ ಕೊಡುವ ಮೂಲಕ ಸಾಧುಕೋಕಿಲ, ಜನರಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿರುವ ಸಾಧುಕೋಕಿಲ " ನನ್ನ ಎಲ್ಲಾ ಸ್ನೇಹಿತರು ಮತ್ತು ಅಭಿಮಾನಿಗಳಿಗೆ ನಮಸ್ಕಾರ, ನಾನು ಇಲ್ಲಿ ತನಕ ಸೋಷಿಯಲ್ ಮೀಡಿಯಾದಲ್ಲಿ ಇರಲಿಲ್ಲ. ಈಗ ಕೊನೆಗೂ ಸೋಷಿಯಲ್ ಮೀಡಿಯಾಗೆ ಎಂಟ್ರಿ ಕೊಡ್ತಿದ್ದೇನೆ. ಈ ಮೂಲ ಇನ್ನು ಮುಂದೆ ನನ್ನ ಸಿನಿಮಾ ಮಾಹಿತಿ ಮತ್ತು ಆಗೂ, ಹೋಗುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಇದು ನನ್ನ ಅಫೀಷಿಯಲ್ ಪೇಜ್. ಸಿನಿಮಾಗಳಿಗೆ ಚಪ್ಪಾಳೆ ತಟ್ಟಿ ಹೇಗೆ ನ್ನ ಬೆಳೆಸಿದಿರೋ, ಇಲ್ಲಿ ನಿಮ್ಮ ಸಹಕಾರ ಇರಲಿ" ಎಂದು ಹೇಳಿಕೊಂಡಿದ್ದಾರೆ.

  Recommended Video

  Daali Dhanajay | ಆ ಒಂದು ದಿನ ನನ್ನ ಜೀವನದಲ್ಲೆ ಮರೆಯಲ್ಲಾ| Patte Murugan *Interview | Filmibeat Kannada
  English summary
  Actor Sadhu Kokila Enter To Social Media And Uploaded New Video, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X