»   » ಅಯ್ಯಯ್ಯಪ್ಪೋ ಸಾಧು ಮಹಾರಾಜ್ ಯಾಕಿಂಗಾದ್ರು.?

ಅಯ್ಯಯ್ಯಪ್ಪೋ ಸಾಧು ಮಹಾರಾಜ್ ಯಾಕಿಂಗಾದ್ರು.?

Posted By:
Subscribe to Filmibeat Kannada

ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಬಹಳ ಬೇಡಿಕೆಯುಳ್ಳ ಹಾಗೂ ಖ್ಯಾತ ಕಾಮಿಡಿ ಕಿಂಗ್ ಆಗಿ ಹೊರಹೊಮ್ಮಿರುವ ನಟ ಸಾಧು ಕೋಕಿಲಾ ಅಲಿಯಾಸ್ ಸಾಧು ಮಹಾರಾಜ್ ಅವರು ಮುಂಬರುವ 'ಪಟಾಕಿ' ಚಿತ್ರದಲ್ಲಿ ಬಹಳ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ.

ನಟ ಕಲ್ಯಾಣ್ ರಾಮ್ ಅವರ ತೆಲುಗಿನ ಸೂಪರ್ ಹಿಟ್ ಚಿತ್ರ 'ಪಟಾಸ್' ಚಿತ್ರದ ರೀಮೇಕ್ ಆಗಿರುವ 'ಪಟಾಕಿ' ಚಿತ್ರದಲ್ಲಿ ನಟ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಡೈಲಾಗ್ ಕಿಂಗ್ ಸಾಯಿಕುಮಾರ್ ಅವರು ಖಡಕ್ ಪೊಲೀಸ್ ಆಫೀಸರ್ ಆಗಿದ್ದಾರೆ. ಗಣೇಶ್ ಅವರಿಗೆ ಇದೆ ಮೊದಲ ಬಾರಿಗೆ 'ಮಾಣಿಕ್ಯ' ಖ್ಯಾತಿಯ ರನ್ಯಾ ಅವರು ಸಾಥ್ ನೀಡಿದ್ದಾರೆ.


Actor Sadhu Kokila turns Mangalamukhi in Kannada Movie 'Pataki'

ವಿಶೇಷವಾಗಿ ಕಾಮಿಡಿ ನಟ ಸಾಧು ಕೋಕಿಲಾ ಅವರು ಮಂಗಳಮುಖಿಯಾಗಿ ಮಿಂಚುವ ಮೂಲಕ ಪ್ರೇಕ್ಷಕರಿಗೆ ಮನರಂಜಿಸಲಿದ್ದಾರೆ. ಈ ಮೊದಲು ಸಾಧು ಅವರು ಶ್ರೀಮುರಳಿ ಅವರ 'ರಥಾವರ' ಚಿತ್ರದಲ್ಲಿ ಮಂಗಳಮುಖಿ ಪಾತ್ರ ವಹಿಸಿ ಹೀಗೆ ಬಂದು ಹಾಗೆ ಹೋಗಿದ್ದರು.


ಆದರೆ ಈ ಚಿತ್ರದಲ್ಲಿ ಮಾತ್ರ ಫುಲ್ ಟೈಮ್ ಮಂಗಳಮುಖಿಯಾಗಿ ಅಭಿಮಾನಿಗಳಿಗೆ ಕಿಕ್ ಕೊಡಲಿದ್ದಾರೆ.[ಇಷ್ಟಪಟ್ಟು ಮಂಗಳಮುಖಿಯಾದೆ, ಎಂದ ಆ ಖಳನಾಯಕ ಯಾರು?]


Actor Sadhu Kokila turns Mangalamukhi in Kannada Movie 'Pataki'

ಈ ಚಿತ್ರದಲ್ಲಿ ಸಾಧು ಕೋಕಿಲಾ ಅವರ ಮಂಗಳಮುಖಿ ಪಾತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಇಡೀ ಚಿತ್ರಕ್ಕೆ ಇವರ ಪಾತ್ರ ಮೇಜರ್ ಟರ್ನಿಂಗ್ ಪಾಯಿಂಟ್ ಆಗಲಿದೆ. ಜೊತೆಗೆ ಸಮಾಜದಲ್ಲಿ ಮಂಗಳಮುಖಿಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಈ ಚಿತ್ರದಲ್ಲಿ ಎತ್ತಿ ತೋರಿಸಲಾಗಿದೆ ಎನ್ನುತ್ತಾರೆ ನಿರ್ದೇಶಕ ಮಂಜು ಸ್ವರಾಜ್.


Actor Sadhu Kokila turns Mangalamukhi in Kannada Movie 'Pataki'

ಈಗಾಗಲೇ 'ಜೂಮ್' ಚಿತ್ರದಲ್ಲಿ ಸಾಧು ಮತ್ತು ಗಣೇಶ್ ಅವರ ಜೋಡಿ ಪ್ರೇಕ್ಷಕರಿಗೆ ಸಖತ್ ಮೋಡಿ ಮಾಡಿದೆ. ಇದೀಗ ಮತ್ತೆ 'ಪಟಾಕಿ' ಮೂಲಕ ಫುಲ್ ಕಾಮಿಡಿ ಕಿಕ್ ಏರಿಸಲಿದ್ದಾರೆ.[ಚಿತ್ರ ವಿಮರ್ಶೆ: 'Zooಮ್' ಮಾಡಿ ನೋಡಿದ್ರೂ, 'ಜುಮ್' ಎನಿಸದು.!]


Actor Sadhu Kokila turns Mangalamukhi in Kannada Movie 'Pataki'

ಗೋಲ್ಡನ್ ಸ್ಟಾರ್ ಗಣೇಶ್ ಅವರು ಇದೇ ಮೊದಲ ಬಾರಿಗೆ ಖಾಕಿ ಖದರ್ ತೋರಿದ್ದು, ಅಗ್ನಿ ಪೊಲೀಸ್ ಗೆಟಪ್ ನಲ್ಲಿ ಸಾಯಿ ಕುಮಾರ್ ಮತ್ತೆ ರಾರಾಜಿಸಿದ್ದಾರೆ. ಗಣೇಶ್ ಮತ್ತು ಸಾಯಿ ಕುಮಾರ್ ಅವರು ಈ ಚಿತ್ರದಲ್ಲಿ ಅಪ್ಪ-ಮಗನ ಪಾತ್ರ ವಹಿಸಿದ್ದಾರೆ. ಸದ್ಯಕ್ಕೆ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಒಂದ್ಸಾರಿ 'ಪಟಾಕಿ' ಝಲಕ್ ನೋಡಿಬಿಡಿ.


English summary
Comedy Actor Sadhu Kokila's character who essays the role of a Mangala Mukhi in Actor Ganesh and Actor Sai Kumar starrer Kannada Movie 'Pataki'. The movie is directed by Manju Swaraj.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada