For Quick Alerts
  ALLOW NOTIFICATIONS  
  For Daily Alerts

  ಮೋಹನ್ ಲಾಲ್ ಭೇಟಿ ಮಾಡಿದ ನಟ ಸಂಚಾರಿ ವಿಜಯ್

  |

  ನಟ ಸಂಚಾರಿ ವಿಜಯ್ ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್ ರನ್ನು ಭೇಟಿ ಮಾಡಿದ್ದಾರೆ. ಮೆಚ್ಚಿನ ನಟನನ್ನು ಭೇಟಿ ಮಾಡಿದ ಖುಷಿಯನ್ನು ಸಂಚಾರಿ ವಿಜಯ್ ಟ್ವಿಟ್ಟರ್ ಹಂಚಿಕೊಂಡಿದ್ದಾರೆ.

  ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಬಗ್ಗೆ ಮೋಹನ್ ಲಾಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಬ್ಬ ಲೆಜೆಂಡರಿ ನಟ ತಮ್ಮ ಬಗ್ಗೆ ಮಾತನಾಡಿದ್ದನ್ನು ಕೇಳಿದ ಸಂಚಾರಿ ವಿಜಯ್ ತುಂಬ ಸಂತಸದಲ್ಲಿ ಇದ್ದಾರೆ. ಮೋಹನ್ ಲಾಲ್ ಮೆಚ್ಚುಗೆ ಪಡೆದ ಸಂಚಾರಿ ವಿಜಯ್ ಗೆ ಮಾತೇ ಬಾರದಂತೆ ಆಗಿದೆ.

  ಅಂತೂ 'ಇರುವೆ' ಪಾತ್ರಕ್ಕೆ ಡಬ್ಬಿಂಗ್ ಮಾಡಿ ಮುಗಿಸಿದ ಸಂಚಾರಿ ವಿಜಯ್

  ಬೆಂಗಳೂರಿನಲ್ಲಿ ಮೋಹನ್ ಲಾಲ್ ರನ್ನು ಸಂಚಾರಿ ವಿಜಯ್ ಭೇಟಿ ಮಾಡಿದ್ದು, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಸಿನಿಮಾದ ಚಿತ್ರೀಕರಣಕ್ಕಾಗಿ ಮೋಹನ್ ಲಾಲ್ ಬೆಂಗಳೂರಿಗೆ ಬಂದಿದ್ದರು. ಅವರ 'ಬಿಗ್ ಬ್ರದರ್' ಸಿನಿಮಾದ ಶೂಟಿಂಗ್ ಹೆಚ್ ಎಮ್ ಟಿ ಫ್ಯಾಕ್ಟರಿ ಬಳಿ ನಡೆಯುತ್ತಿದೆ. ಸಂಚಾರಿ ವಿಜಯ್ ಸಿನಿಮಾದ ಚಿತ್ರೀಕರಣ ಕೂಡ ಅಲ್ಲಿಯೇ ನಡೆಯುತ್ತಿತ್ತು.

  ಅಂದಹಾಗೆ, ಮೋಹನ್ ಲಾಲ್ 'ಮೈತ್ರಿ' ಸಿನಿಮಾದ ಮೂಲಕ ಕನ್ನಡ ಚಿತ್ರದಲ್ಲಿ ಮೊದಲ ಬಾರಿಗೆ ನಟಿಸಿದ್ದರು. ಪುನೀತ್ ರಾಜ್ ಕುಮಾರ್ ಈ ಸಿನಿಮಾ ನಾಯಕನಾಗಿದ್ದರು.

  ಹೇಗಿತ್ತು ಗೊತ್ತೆ ರಾಷ್ಟ್ರ ಪ್ರಶಸ್ತಿ ವಿಜೇತ ನಟನ ಆಡಿಷನ್ ಅನುಭವ

  ಸಂಚಾರಿ ವಿಜಯ್ ಸದ್ಯ ಪ್ರೊಡಕ್ಷನ್ ನಂಬರ್ 1 ಎಂಬ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಶೂಟಿಂಗ್ ವೇಳೆ ಮೋಹನ್ ಲಾಲ್ ರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದೆ.

  English summary
  National award winner, Kannada actor Sanchari Vijay met mollywood super star Mohanlal.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X