For Quick Alerts
  ALLOW NOTIFICATIONS  
  For Daily Alerts

  ಸೆಪ್ಟೆಂಬರ್ 7ಕ್ಕೆ ಹಾಸ್ಯನಟ ಶರಣ್ 100ನೇ ಚಿತ್ರ

  By Rajendra
  |

  ಕಡೆಗೂ ಹಾಸ್ಯನಟ ಶರಣ್ ಅಭಿನಯದ 100ನೇ ಚಿತ್ರ 'ರ್‍ಯಾಂಬೋ' ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಅಟ್ಲಾಂಟಾ ನಾಗೇಂದ್ರ ಹಾಗೂ ಶರಣ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರ ಸೆಪ್ಟೆಂಬರ್ 7, 2012ರಂದು ಬಿಡುಗಡೆಯಾಗುತ್ತಿದೆ.

  ಚಿತ್ರದ ಟ್ರೇಲರ್ ಗಳು ಈಗಾಗಲೆ ಪ್ರೇಕ್ಷಕರನ್ನು ಸೆಳೆದಿದೆ. ಹಾಸ್ಯದ ಜೊತೆಗೆ ಒಂದಷ್ಟು ಸಸ್ಪೆನ್ಸ್ ಇರುವ ಕಾರಣ ಚಿತ್ರದ ಬಗ್ಗೆ ಕುತೂಹಲ ಇದ್ದೇ ಇದೆ. ಅರ್ಜುನ್ ಜನ್ಯಾ ಸಂಗೀತ ಸಂಯೋಜನೆಯ ಹಾಡುಗಳು ಈಗಾಗಲೆ ಎಲ್ಲರ ಕಿವಿಗೆ ಬೀಳುತ್ತಿವೆ.

  "ಮನೆತಂಕ ಬಾರೆ..." ಎಂಬ ಹಾಡಂತೂ ಲಿಸ್ಟ್ ನಲ್ಲಿ ಟಾಪ್ ನಲ್ಲಿದೆ. ಲಡ್ಡು ಫಿಲಂಸ್ ಬ್ಯಾನರ್ ನಲ್ಲಿ ನಿರ್ಮಿಸಿರುವ ಈ ಚಿತ್ರಕ್ಕೆ ಎಂಎಸ್ ಶ್ರೀನಾಥ್ ಆಕ್ಷನ್ ಕಟ್ ಹೇಳಿದ್ದಾರೆ. ಕತೆ, ಚಿತ್ರಕತೆ ಕೂಡ ನಿರ್ದೇಶಕರದ್ದೆ. ಚಿತ್ರದ ಟ್ರೇಲರ್ ಗಳಿಗೆ ವ್ಯಕ್ತವಾಗಿರುವ ಪ್ರತಿಕ್ರಿಯೆಗೆ ಚಿತ್ರತಂಡ ಫುಲ್ ಖುಷ್ ಆಗಿದೆ.

  ಮಾಧುರಿ, ತಬಲಾ ನಾಣಿ, ರಂಗಾಯಣ ರಘು, ಸಾಧು ಕೋಕಿಲ, ಶ್ರುತಿ, ಉಮಾಶ್ರೀ, ಉಮೇಶ್, ಕಾಶಿ, ಧರ್ಮ, ಕುರಿಗಳು ಪ್ರತಾಪ್ ಚಿತ್ರದ ತಾರಾಬಳಗದಲ್ಲಿದ್ದಾರೆ. ಮೂಲಗಳ ಪ್ರಕಾರ ಚಿತ್ರದ ಬಜೆಟ್ ರು.4 ಕೋಟಿ ಎನ್ನಲಾಗಿದೆ.

  ಈ ಚಿತ್ರದ ಇನ್ನೊಂದು ವಿಶೇಷ ಎಂದರೆ ಸೂಪರ್ 35 ಎಂಎಂ ಕ್ಯಾಮೆರಾ ಬಳಸಿ ಒಟ್ಟು 55 ದಿನಗಳ ಕಾಲ 47 ತಾಣಗಳಲ್ಲಿ ಚಿತ್ರೀಕರಣ ನಡೆಸಿರುವುದು. ಈಗಾಗಲೆ ಚಿತ್ರದ ಆಡಿಯೋ ಬಿಡುಗಡೆಯಾಗಿದ್ದು ಕ್ಯಾಚಿ ಟ್ಯೂನ್ ಗಳಿಂದ ಎಲ್ಲರನ್ನು ರಂಜಿಸುತ್ತಿದೆ.

  ಇನ್ನೊಂದು ವಿಶೇಷ ಎಂದರೆ ಇದೊಂದು ತ್ರಿಡಿ ಚಿತ್ರ. ಆದರೆ ಈ ತ್ರಿಡಿ ಚಿತ್ರಕ್ಕೆ ತ್ರಿಡಿ ಕನ್ನಡಕ ಬೇಕಾಗಿಲ್ಲ. ಬರಿಗಣ್ಣಿನಿಂದಲೇ ನೋಡಬಹುದು. ಅದು ಹೇಗೆ ಅಂತೀರಾ. ನೀವೆಲ್ಲಾ ತಿಳಿದುಕೊಂಡಿರುವಂತೆ ಇದು ಕನ್ನಡಕ ಹಾಕಿಕೊಂಡು ನೋಡುವ ತ್ರಿಡಿ ಚಿತ್ರವಲ್ಲ. ಶರಣ್ ಅವರೇ ಹೇಳುವಂತೆ ತ್ರಿಡಿ ಎಂದರೆ 'ದಗಲ್ಬಾಜಿ, ದಗಾಕೋರ, ಡೌವ್ ರಾಜ'. ಇವೇ ಆ ಮೂರು ತ್ರಿ'ಡಿ'ಗಳು! (ಒನ್ ಇಂಡಿಯಾ ಕನ್ನಡ)

  English summary
  Kannada films comedy actor Sharan's 100th film Rambo all set to release on 7th August 2012. The film is sure to entertain his fans from the very first scene to the end.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X