For Quick Alerts
  ALLOW NOTIFICATIONS  
  For Daily Alerts

  ಚಿತ್ರರಂಗಕ್ಕೆ ನಟ ಶರಣ್ ಪುತ್ರಿ ಪುಣ್ಯ ಪದಾರ್ಪಣೆ

  |

  ಕನ್ನಡದ ಸ್ಟಾರ್ ನಟರಾದ ದರ್ಶನ್, ಉಪೇಂದ್ರ, ಗಣೇಶ್, ಪ್ರೇಮ್ ಹೀಗೆ ಸಾಕಷ್ಟು ಕಲಾವಿದರ ಮಕ್ಕಳು ಚಿತ್ರರಂಗಕ್ಕೆ ಬಂದಿದ್ದಾರೆ. ಇದೀಗ ನಟ ಶರಣ್ ಪುತ್ರಿ ಅಪ್ಪನ ಜೊತೆಗೆ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  ಶರಣ್ ಅಭಿನಯದ 'ಅವತಾರ್ ಪುರುಷ' ಸಿನಿಮಾದಲ್ಲಿ ಅವರ ಮಗಳು ಪುಣ್ಯ ಸಹ ನಟಿಸುತ್ತಿದ್ದಾರೆ. ಈ ವಿಷಯವನ್ನು ಚಿತ್ರದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಹಾಗೂ ನಿರ್ದೇಶಕ ಸುನಿ ಹಂಚಿಕೊಂಡಿದ್ದಾರೆ.

  ಹುಟ್ಟುಹಬ್ಬದ ದಿನ 'ಅವತಾರ್ ಪುರುಷ'ನಾದ ಶರಣ್

  ಪುಣ್ಯ ಅವರ ಫಸ್ಟ್ ಲುಕ್ ಸಹ ರಿಲೀಸ್ ಆಗಿದೆ. ಸ್ಕೂಲ್ ಯೂನಿಫಾಮ್ ಹಾಕಿ ಮುದ್ದಾಗಿ ಪುಣ್ಯ ಕಾಣಿಸಿಕೊಂಡಿದ್ದಾರೆ. ಪುಣ್ಯ ಹುಟ್ಟುಹಬ್ಬದ ವಿಶೇಷವಾಗಿ ಪೋಸ್ಟರ್ ಹೊರಬಂದಿದೆ.

  ಮಗಳ ಚಿತ್ರರಂಗದ ಆಗಮನದ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಶರಣ್ ''ನಿಮ್ಮ ಪ್ರೀತಿ ಮತ್ತು ಆಶೀರ್ವಾದ ಪುಣ್ಯ ಮೇಲೆ ಇರಲಿ'' ಎಂದಿದ್ದಾರೆ.

  ತಮ್ಮ 'ಚಮಕ್' ಸಿನಿಮಾದಲ್ಲಿ ಗಣೇಶ್ ಪುತ್ರಿ ಚಾರಿತ್ಯರನ್ನು ಪರಿಚಯ ಮಾಡಿದ್ದ ಸುನಿ ಈಗ ಶರಣ್ ಮಗಳನ್ನು ಕ್ಯಾಮರಾ ಮುಂದೆ ಕರೆ ತಂದಿದ್ದಾರೆ.

  'ಅವತಾರ್ ಪುರುಷ' ಸಿನಿಮಾದ ಚಿತ್ರೀಕರಣ ಸದ್ಯ ನಡೆಯುತ್ತಿದೆ. ಚಿತ್ರದಲ್ಲಿ ಶರಣ್ ಗೆ ಚುಟು ಚುಟು ಹುಡುಗಿ ಆಶಿಕಾ ರಂಗನಾಥ್ ಜೋಡಿಯಾಗಿದ್ದಾರೆ.

  English summary
  Kannada actor Sharan daughter punya playing special role in 'Avathar purusha' movie. The movie is directing by suni.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X