ಮತ್ತೊಂದು ರೀಮೇಕ್ ಚಿತ್ರಕ್ಕೆ ಶರಣ್ ನಾಯಕ.!
ಸ್ಯಾಂಡಲ್ ವುಡ್ ಸ್ಟಾರ್ ನಟ ಶರಣ್ ಸಿಕ್ಕಾಪಟ್ಟೆ ಬ್ಯುಸಿ ಇದ್ದಾರೆ. ಬ್ಯಾಕ್ ಟು ಬ್ಯಾಕ್ ಚಿತ್ರಗಳು ಮೂಲಕ ಕನ್ನಡ ಪ್ರೇಕ್ಷಕರನ್ನ ರಂಜಿಸುತ್ತಿದ್ದಾರೆ. ಸದ್ಯ, ಶರಣ್ ಹಾಗೂ ಚಿಕ್ಕಣ್ಣ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ 'ರಾಜ್-ವಿಷ್ಣು' ಚಿತ್ರ ಬಿಡುಗಡೆಗೆ ಸಿದ್ದವಾಗುತ್ತಿದೆ. ಈ ಮಧ್ಯೆ ಮತ್ತೊಂದು ರೀಮೇಕ್ ಚಿತ್ರಕ್ಕೆ ಶರಣ್ ನಾಯಕರಾಗುತ್ತಿದ್ದಾರೆ.
ಹೌದು, 'ವಜ್ರಕಾಯ', 'ಚಿಂಗಾರಿ', 'ಭಜರಂಗಿ', 'ಬಿರುಗಾಳಿ' ಅಂತಹ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದ ಯೋಗಾನಂದ್ ಮುದ್ದಾನ್ ಈಗ ನಿರ್ದೇಶಕರಾಗುತ್ತಿದ್ದು, ಇವರ ಮುಂದಿನ ಚಿತ್ರದಲ್ಲಿ ಶರಣ್ ನಾಯಕರಾಗುತ್ತಿದ್ದಾರಂತೆ.

ಅಂದ್ಹಾಗೆ, ಈ ಚಿತ್ರ ತೆಲುಗಿನ ರೀಮೇಕ್ ಆಗಿದ್ದು, ಯಾವ ಚಿತ್ರ ಎಂಬ ಮಾಹಿತಿ ಬಿಟ್ಟುಕೊಟ್ಟಿಲ್ಲ. ಈ ಚಿತ್ರಕ್ಕೆ ತೆಲುಗು ನಿರ್ಮಾಪಕರೇ ಬಂಡವಾಳ ಹಾಕುತ್ತಿದ್ದು, ಕರ್ನಾಟಕ ಹಾಗೂ ಅಮೆರಿಕಾದಲ್ಲಿ ಚಿತ್ರೀಕರಣ ನಡೆಯಲಿದೆಯಂತೆ.
ಇನ್ನು ವಿ.ಹರಿಕೃಷ್ಣ ಸಂಗೀತ ನೀಡಲಿದ್ದು, ಕೆ.ಎಂ ಪ್ರಕಾಶ್ ಸಂಕಲನಕಾರರಾಗಿ ಕೆಲಸ ಮಾಡಲಿದ್ದಾರೆ. ಸದ್ಯ, ಪ್ರಿ-ಪ್ರೊಡಕ್ಷನ್ ಕೆಲಸಗಳನ್ನ ಮುಗಿಸಿರುವ ಚಿತ್ರತಂಡ, ಜುಲೈ ಅಂತ್ಯಕ್ಕೆ ಸಿನಿಮಾ ಶುರು ಮಾಡುವ ಯೋಚನೆಯಲ್ಲಿದೆಯಂತೆ.


Click it and Unblock the Notifications











