For Quick Alerts
  ALLOW NOTIFICATIONS  
  For Daily Alerts

  'ನಟರಾಜ ಸರ್ವಿಸ್' ಸ್ಟೇಷನ್ ನಲ್ಲಿ ಭರ್ಜರಿ ಟಪ್ಪಾಂಗುಚ್ಚಿ, ಡಾನ್ಸ್.!

  By Suneetha
  |

  'ಗೂಗ್ಲಿ' ನಿರ್ದೇಶಕ ಪವನ್ ಒಡೆಯರ್ ಅವರು ಆಕ್ಷನ್-ಕಟ್ ಹೇಳುತ್ತಿರುವ 'ನಟರಾಜ ಸರ್ವಿಸ್' ಚಿತ್ರದ ಶೂಟಿಂಗ್ ಭರ್ಜರಿಯಾಗಿ ಸಾಗುತ್ತಿದ್ದು, ಈಗಾಗಲೇ ನಮ್ಮ ರಾಜಧಾನಿ ಬೆಂಗಳೂರು ನಗರದಲ್ಲಿ ಹಾಡೊಂದರ ಚಿತ್ರೀಕರಣ ಸಂಪೂರ್ಣಗೊಂಡಿದೆ.

  'ಅಶ್ವಿನಿ ನಕ್ಷತ್ರ' ಹಾಗೂ 'ಕೃಷ್ಣಲೀಲಾ' ಖ್ಯಾತಿಯ ನಟಿ ಮಯೂರಿ ಅವರು ಕಾಮಿಡಿ ಕಿಂಗ್ ಶರಣ್ ಅವರಿಗೆ ಸಾಥ್ ನೀಡಲಿದ್ದು, ನಿನ್ನೆ (ನವೆಂಬರ್ 25) ಮಯೂರಿ ಅವರು ಶೂಟಿಂಗ್ ಸೆಟ್ ನಲ್ಲಿ ಹಾಜರಿದ್ದರು. ಎನ್ ಎಸ್ ರಾಜಕುಮಾರ್ ಅವರ ನಿರ್ಮಾಣದಲ್ಲಿ ಈ ಚಿತ್ರ ಮೂಡಿಬರುತ್ತಿದೆ.[ಒಡೆಯರ್, 'ನಟರಾಜ ಸರ್ವಿಸ್' ಸ್ಟೇಷನ್ ಗೆ, ವಿಲನ್ ಫಿಕ್ಸ್!]

  ಚಿತ್ರದ ಮೊದಲ ನೋಟವನ್ನು ಈಗಾಗಲೇ ಬಿಡುಗಡೆ ಮಾಡಿರುವ ಚಿತ್ರತಂಡ, 'ನಟರಾಜ ಸರ್ವಿಸ್' ಕಥೆಯ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹ;ಲ ಮೂಡಿಸಿದೆ. 'ಚಿತ್ರತಂಡದವರ ಆಸಕ್ತಿಯನ್ನು ಕೆರಳಿಸಲು ಹಾಡಿನ ಚಿತ್ರೀಕರಣ ಆರಂಭಿಸಿದೆವು. ಇದು ಪಕ್ಕಾ ಟಪಾಂಗುಚ್ಚಿ ಹಾಡು. ಇದನ್ನು ನಾನೇ ಬರೆದಿದ್ದೇನೆ' ಎಂದು ಚಿತ್ರದ ಮೊದಲ ಶಾಟ್ ಬಗ್ಗೆ ವಿವರಿಸುತ್ತಾರೆ ನಿರ್ದೇಶಕ ಪವನ್ ಒಡೆಯರ್ ಅವರು.

  ಅಂದಹಾಗೆ ನಟರಾಜ ಪೆನ್ಸಿಲ್ ನಲ್ಲಿ ಸ್ಕ್ರಿಪ್ಟ್ ಬರೆಯುತ್ತಿರುವಾಗ ಪವನ್ ಅವರಿಗೆ 'ನಟರಾಜ ಸರ್ವಿಸ್' ಶೀರ್ಷಿಕೆ ಹೊಳೆಯಿತಂತೆ. ಹೀರೋ ಹೆಸರು ನಟರಾಜ, ಹೀಗೇ ಯೋಚನೆ ಮಾಡುವಾಗ ನಾನು ಬರೆಯುತ್ತಿದ್ದ ಪೆನ್ಸಿಲ್ ಹೆಸರು ಕೂಡ ನಟರಾಜ, ಆದ್ದರಿಂದ ಈ ಶೀರ್ಷಿಕೆ ಹೊಳೆಯಿತು' ಎಂದು ನಿರ್ದೇಶಕ ಪವನ್ ಅವರು ಚಿತ್ರದ ಶೀರ್ಷಿಕೆ ಬಗ್ಗೆ ವಿವರಿಸುತ್ತಾರೆ.['ಜೆಸ್ಸಿ' ಮುಗೀತು, 'ನಟರಾಜ ಸರ್ವಿಸ್' ಸ್ಟೇಷನ್ ಓಪನ್ ಆಯ್ತು!]

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅರ್ಪಿಸುವ 'ನಟರಾಜ ಸರ್ವಿಸ್' ಚಿತ್ರಕ್ಕೆ ನೃತ್ಯ ನಿರ್ದೇಶಕರಾಗಿ ಮುರಳಿ ಅವರು ಕೆಲಸ ಮಾಡುತ್ತಿದ್ದು, ಅನೂಪ್ ಸೀಳಿನ್ ಅವರ ಸಂಗೀತ ನಿರ್ದೇಶನವಿದೆ. ಜೊತೆಗೆ ಅರುಳ್ ಕೆ.ಸೋಮಸಂದರಂ ಅವರು ಕ್ಯಾಮರ ಕೈ ಚಳಕ ತೋರಿದ್ದಾರೆ.

  ಒಟ್ನಲ್ಲಿ 'ಬುಲೆಟ್ ಬಸ್ಯಾ' ಚಿತ್ರದ ನಂತರ ಮತ್ತೊಮ್ಮೆ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಲು ಕಾಮಿಡಿ ಕಿಂಗ್ ಶರಣ್ ಅವರು ಗ್ಲಾಮರ್ ಬೊಂಬೆ ಮಯೂರಿ ಜೊತೆ 'ನಟರಾಜ ಸರ್ವೀಸ್' ಸ್ಟೇಷನ್ ಓಪನ್ ಮಾಡಿ ಅಭಿಮಾನಿಗಳಲ್ಲಿ ಕಿಕ್ ಏರಿಸಿದ್ದಾರೆ.

  English summary
  Pavan Wadeyar’s upcoming film Nataraja Service is going through brisk shooting with the crew currently involved in filming a song sequence in Bengaluru. The film, presented by Puneeth Rajkumar, has Sharan in the lead and is produced by NS Rajkumar. Mayuri, who is paired opposite Sharan as the female lead, joined the sets yesterday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X