For Quick Alerts
  ALLOW NOTIFICATIONS  
  For Daily Alerts

  Avatara Purusha Teaser: 'ಅವತಾರ ಪುರುಷ'ನ ಹೊಸ ಟೀಸರ್‌ನಲ್ಲಿ ಹೊಸ ಅವತಾರ ರಿವೀಲ್!

  |

  ನಟ ಶರಣ್ ಮತ್ತು ಆಶಿಕಾ ರಂಗನಾಥ್ ಅಭಿನಯದ 'ಅವತಾರ ಪುರುಷ' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. 'ಅವತಾರ ಪುರುಷ' ಚಿತ್ರದ ರಿಲೀಸ್ ದಿನಾಂಕವನ್ನು ಈಗಾಗಲೇ ಸಿನಿಮಾ ತಂಡ ಪ್ರಕಟ ಮಾಡಿದೆ. ಸಿನಿಮಾ ಮೇ 6 ರಂದು ರಿಲೀಸ್ ಆಗಲಿದೆ. ಈಗಾಗಲೇ ಈ ಹಿಂದೆ ಚಿತ್ರದ ಟೀಸರ್ ಮತ್ತು ಹಾಡುಗಳು ರಿಲೀಸ್ ಆಗಿವೆ. ಈ ಮೂಲಕ ಸಿನಿಮಾ ಹೇಗೆ ಇರಲಿದೆ ಎನ್ನುವ ಬಗ್ಗೆ ಸಾಕಷ್ಟು ಸುಳಿವು ಕೊಟ್ಟಿದೆ.

  ಈ ಮೊದಲು 'ಅವತಾರ ಪುರುಷ' ಸಿನಿಮಾ ಕಾಮಿಡಿ ಜಾನರ್ ಸಿನಿಮಾ ಎಂದು ಗುರುತಿಸಲಾಗಿತ್ತು. ಆದರೆ ಈ ಚಿತ್ರದಲ್ಲಿ ಮತ್ತೊಂದು ವಿ‍ಶೇಷತೆ ಇದೆ. 'ಅವತಾರ ಪುರುಷ' ಸಿನಿಮಾದಲ್ಲಿ ಇರುವ ಮತ್ತೊಂದು ಕಥೆಯನ್ನು ಸದ್ಯ ರಿಲೀಸ್ ಆಗಿರುವ ಟೀಸರ್ ಬಿಚ್ಚಿಟ್ಟಿದೆ.

  ಸಾವು- ಬದುಕಿನ ಮಧ್ಯೆ 'ಅವತಾರ ಪುರುಷ' ಪುಷ್ಕರ್ ಮಲ್ಲಿಕಾರ್ಜುನಯ್ಯ!ಸಾವು- ಬದುಕಿನ ಮಧ್ಯೆ 'ಅವತಾರ ಪುರುಷ' ಪುಷ್ಕರ್ ಮಲ್ಲಿಕಾರ್ಜುನಯ್ಯ!

  ಈ ಟೀಸರ್‌ನಲ್ಲಿ ಕ್ಲಾಕ್ ಮ್ಯಾಜಿಕ್, ಅಂದರೆ ವಾಮಾಚಾರದ ಬಗ್ಗೆ ಹೇಳಲಾಗಿದೆ. ಸಿನಿಮಾದಲ್ಲಿ ವಾಮಾಚಾರದ ಬಗ್ಗೆಯೂ ಕಥೆ ಇದೆ. ಹಾಗಾಗಿ ಈ ಭಾಗವನ್ನು ಈ ಟೀಸರ್‌ನಲ್ಲಿ ಬಿಚ್ಚಿಡಲಾಗಿದೆ. ಜೊತೆಗೆ ನಟ ಶರಣ್ ಕಾಮಿಡಿ ಪಂಚ್ ಕೂಡ ಇದೆ. ಹಿರಿಯ ನಟ ಸಾಯಿ ಕುಮಾರ್ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಅವರ ಪಾತ್ರವನ್ನು ಕೂಡ ಈ ಟೀಸರ್‌ನಲ್ಲಿ ಪರಿಚಯ ಮಾಡಲಾಗಿದೆ.

  ಸಿನಿಮಾ ವಿಚಾರಕ್ಕೆ ಬರುವುದಾದರೆ 'ಅವತಾರ ಪುರುಷ' ಸಿನಿಮಾ ಇದೇ ವರ್ಷ ಮೇ 6ರಂದು ರಿಲೀಸ್ ಆಗುತ್ತಿದೆ. ತಮ್ಮ ಟ್ವೀಟ್‌ನಲ್ಲಿಯೇ ನಿರ್ಮಾಪಕ ಮಲ್ಲಿಕಾರ್ಜುನ್ ರಿಲೀಸ್ ದಿನಾಂಕವನ್ನು ಪ್ರಕಟ ಮಾಡಿದ್ದಾರೆ. ಈಗಾಗಲೇ ಚಿತ್ರದ ಎಲ್ಲಾ ಕೆಲಸಗಳು ಮುಗಿದಿದ್ದು, ಸಿನಿಮಾ ರಿಲೀಸ್ ಆಗುವುದೊಂದೇ ಬಾಕಿ ಇದೆ. ಶರಣ್ ಕಾಮಿಡಿ ಕಿಕ್‌ ಜೊತೆಗೆ ನಟಿ ಆಶಿಕಾ ರಂಗನಾಥ್ ಗ್ಲಾಮರ್ ಮಿಕ್ಸ್ ಆಗಿದೆ. ಶರಣ್ ಅಭಿಮಾನಿಗಳು ಚಿತ್ರಕ್ಕಾಗಿ ಕಾಯುತ್ತಿದ್ದಾರೆ.

  ಇದು ಕಾಮಿಡಿ, ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳನ್ನು ಒಳಗೊಂಡ ಚಿತ್ರ. 'ಅವತಾರ ಪುರುಷ' ಚಿತ್ರದ ಹಾಡುಗಳು ವಿಭಿನ್ನವಾಗಿ ಗಮನ ಸೆಳೆದಿವೆ. 'ಲಡ್ಡು ಬಂದು ಬಾಯಿಗೆ ಬಿತ್ತಾ' ಹಾಡು ಜಾಹೀರಾತುಗಳನ್ನು ಸೇರಿಸಿ ಮಾಡಲಾಗಿದೆ. ಜನಪ್ರಿಯವಾಗಿರುವ ವಿವಿಧ ಜಾಹೀರಾತು ತುಣುಕುಗಳನ್ನು ಸೇರಿಸಿ ಹಾಡು ಮಾಡಲಾಗಿದೆ. ಇನ್ನು ಚಿತ್ರದ ಟೀಸರ್ ಕೂಡ ನಿರೀಕ್ಷೆ ಹುಟ್ಟಿಸಿದೆ.

  English summary
  Actor Sharan Starrer Avatara Purusha Movie New Content Reveale In New Teaser,
  Tuesday, March 22, 2022, 10:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X