For Quick Alerts
  ALLOW NOTIFICATIONS  
  For Daily Alerts

  ಎರಡು ಅವತಾರ ತಾಳಲಿರುವ ಸ್ಯಾಂಡಲ್ ವುಡ್ 'ಅವತಾರ ಪುರುಷ'

  |

  ಸ್ಯಾಂಡಲ್‌ವುಡ್‌ನ ಅದ್ಯಕ್ಷನಾಗಿರೋ ನಟ ಶರಣ್ ಈಗ ಹೊಸ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಕಾಮಿಡಿ ಕಿಂಗ್ ಶರಣ್ ಅವರು ಅಧ್ಯಕ್ಷ, ರ್ಯಾಂಬೋ, ವಿಕ್ಟರಿ ಚಿತ್ರಗಳ ಮೂಲಕ ಗೆದ್ದು ಈಗ "ಅವತಾರ ಪುರುಷನಾಗಿ" ಆಗಿ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಈ ಮೂಲಕ ಪುಷ್ಕರ್ ಫಿಲ್ಮ್ಸ್ ಮತ್ತೊಮ್ಮೆ ಹೊಸ ವಿಭಿನ್ನ ಸಿನಿಮಾದ ಮೂಲಕ ಪ್ರೇಕ್ಷಕರ ಮನ ಗೆಲ್ಲಲು ತಯಾರಿ ನಡೆಸಿದೆ. ಶರಣ್ ಸಿನಿಮಾ ಅಂದರೆ ಅಲ್ಲಿ ಕಾಮಿಡಿಗೆ ಏನೂ ಕೊರತೆ ಇರಲ್ಲ. ಡಿಫರೆಂಟ್ ಸ್ಟೋರಿ ಬಯಸುವವರಿಗೆ ಕೂಡ ನಿರಾಸೆ ಆಗುವುದಿಲ್ಲ.

  KGF ಹಾದಿ ಹಿಡಿದ ಅವತಾರ ಪುರುಷ!

  ಈ ಸಿನಿಮಾ ಸಾಕಷ್ಟು ವಿಶೇಷತೆ ಗಳಿಂದ ಕೂಡಿದೆ. ಮೊದಲನೆಯದಾಗಿ ಈ ಸಿನಿಮಾ ಕೂಡ KGF ಮಾದರಿಯಲ್ಲೇ 2 ಭಾಗಗಳಲ್ಲಿ ಬರಲಿದೆ. KGF ಈಗಾಗಲೇ ಮೊದಲೇ ಭಾಗದಿಂದಲೇ ಸಾಕಷ್ಟು ಕ್ರೇಜ್ ಹುಟ್ಟು ಹಾಕಿದೆ. ಈಗ 2ನೇ ಭಾಗದ ರಿಲೀಸ್‌ಗೂ ಅಷ್ಟೇ ಕಾತರತೆ ಇದೆ. ಬಾಹುಬಲಿ ಕೂಡ 2 ಭಾಗಗಳಲ್ಲಿ ಬಂದು ಇಡೀ ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿತ್ತು. ಈ ಸ್ಯಾಂಡಲ್‌ವುಡ್‌ನ ಮತ್ತೊಂದು ಸಿನಿಮಾ ಅದರಲ್ಲೂ ಶರಣ್ ಅಭಿನಯದ ಸಿನಿಮಾ ಅವತಾರ ಪುರುಷ 2 ಬಾಗಗಳಲ್ಲಿ ತೆರೆಮೇಲೆ ಬರುತ್ತಿದೆ. ಶರಣ್ ರಾಜ್ ಅವರ ವೃತ್ತಿ ಜೀವನದಲ್ಲಿಯೇ ಇದು ಅತಿ ಹೆಚ್ಚು ಬಜೆಟ್‌ನ ಸಿನಿಮಾ ಆಗಿದೆ. ಬೆಳ್ಳಿ ಪರದೆ ಮೇಲೆ ಪ್ರೇಕ್ಷಕರಿಗೆ ದರ್ಶನ ಕೊಡಲು "ಅವತಾರ ಪುರುಷ" ತಯಾರಿ ನಡೆಸಿದ್ದಾನೆ.

  ಸಿನಿಮಾವನ್ನು ಭರ್ಜರಿಯಾಗಿ ರಿಲೀಸ್ ಮಾಡಲು ತಯಾರಿ ನಡೆಸುತ್ತಿದೆ ಸಿನಿಮಾ ತಂಡ. ನವೆಂಬರ್ ತಿಂಗಳ ಅಂತ್ಯದಲ್ಲಿ ಸಿನಿಮಾ ಬೆಳ್ಳಿ ತೆರೆಗೆ ಅಪ್ಪಳಿಸಲಿದೆ. ಅದಕ್ಕೂ ಮೊದಲೇ ಅಂದರೆ ದೀಪಾವಳಿಗೂ ಮೊದಲೇ ಸಿನಿಮಾತಂಡ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ಕೊಡಲು ಹೊರರಟಿದೆ. ಮೇಕಿಂಗ್ ವಿಡಿಯೋ ರಿಲೀಸ್ ಮಾಡುವ ಪ್ಲಾನ್ ಮಾಡಿಕೊಂಡಿದೆ.

  ಆಶಿಕಾ ರಂಗನಾಥ್ ಹಾಗೂ ಶರಣ್ ಜೋಡಿಯಾಗಿರುವ ಈ ಸಿನಿಮಾದ ಪೋಸ್ಟರ್ ಗಳು, ಟೀಸರ್ ಗಳು ಸಾಕಷ್ಟು ಕುತೂಹಲ ಹುಟ್ಟು ಹಾಕಿವೆ. ಅಲ್ಲದೇ ಅಭಿಮಾನಿಗಳ ಕಾತರತೆಯನ್ನೂ ಹೆಚ್ಚಿಸಿವೆ. ಸಿನಿಮಾದ ಪ್ಲಾಟ್ ಹೇಗಿರಲಿದೆ ಎಂಬ ಸಾಕಷ್ಟು ಕ್ಯೂರಿಯಾಸಿಟಿ ಮೂಡಿದೆ. ಜೊತೆಗೆ ವಿಭಿನ್ನ ಟೈಟಲ್ ಹಾಗೂ ಟ್ಯಾಗ್ ಲೈನ್ ಕುತೂಹಲವನ್ನು ದುಪ್ಪಟ್ಟಾಗಿಸಿದೆ.

  ಸಿನಿಮಾ ಹಾರರ್ ಕಾಮಿಡಿ ಎಲಿಮೆಂಟ್ ಹೊಂದಿದೆ. ಥ್ರಿಲ್ಲಿಂಗ್ , ಸಸ್ಪೆನ್ಸ್‌ , ಟ್ವಿಸ್ಟ್‌ ಗಳ ಹೂರಣ ಚಿತ್ರದಲ್ಲಿ ಇರಲಿದೆ. ಅದರಲ್ಲಿ ಯಾವುದೇ ಅನುಮಾನ ಬೇಡ ಅನ್ನೋದನ್ನು ಚಿತ್ರದ ತುಣುಕುಗಳು ಹೇಳುತ್ತಿವೆ. ಒಟ್ಟಾರೆಯಾಗಿ ಸಿನಿ ಪ್ರಿಯರಿಗೆ "ಅವತಾರ ಪುರುಷ" ಸಖತ್ ಎಂಟರ್ ಟೈನ್ ಮಾಡೋದ್ರಲ್ಲಿ ಡೌಟ್‌ ಇಲ್ಲ.

  ಡಿಫರೆಂಟ್ ಕಥೆ, ಸ್ಕ್ರೀನ್ ಪ್ಲೇ ಗಳ ಮೂಲಕವೇ ಜನರ ಮನ ಸೆಳೆಯುವ ನಿರ್ದೇಶಕ ಸಿಂಪಲ್ ಸುನಿ "ಅವತಾರ ಪುರುಷ" ನಿಗೆ ಆಕ್ಷನ್ ಕಟ್ ಹೇಳಿದ್ದಾರೆ.

  Actor Sharan Starrer Avathara Purusha Movie Is In Kgf Way

  ಸಿನಿಮಾದಲ್ಲಿ ಸಾಯಿಕುಮಾರ್, ಸುಧಾರಾಣಿ, ಅಯ್ಯಪ್ಪ, ಭವ್ಯ, ಕಾಮಿಡಿ ಕಿಂಗ್ ಸಾಧುಕೋಕಿಲ, ಶ್ರೀನಗರ ಕಿಟ್ಟಿ ಸೇರಿದಂತೆ ಇನ್ನೂ ದೊಡ್ಡ ತಾರಾಬಳಗವೇ ಇದೆ.

  ಹಾರರ್‌ ಕಹಾನಿಯ ಈ ಚಿತ್ರವನ್ನ ಎರಡು ಭಾಗಗಳ್ಲಿ ತೆರೆಗೆ ಬರುತ್ತಿದೆ. ಕೆಜಿಎಫ್‌ ಸೂತ್ರವನ್ನ ಅಳವಡಿಸಿಕೊಳ್ಳುತ್ತಿರುವ ಚಿತ್ರತಂಡ ದೊಡ್ಡ ಮಟ್ಟದಲ್ಲೇ ಯೋಜನೆ ಹಾಕಿಕೊಂಡಿದೆ. ಈ ಚಿತ್ರದ ಬಳಿಕ ನಟ ಶರಣ್ ಮತ್ತೊಂದು ಮಜಲನ್ನು ತಲುಪಲಿದ್ದಾರೆ ಎಂಬ ಭರವಸೆ ಚಿತ್ರತಂಡಕ್ಕೆ ಇದೆ.

  English summary
  Kannada Movie Avatara Purusha Will Release In Two Part,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X