Don't Miss!
- Automobiles
ಪೆಟ್ರೋಲ್ ಬೆಲೆ ಏರಿಕೆ ಚಿಂತೆ ಬಿಡಿ: ರೂ.1 ಲಕ್ಷ ಇದ್ರೆ ಆಕ್ಟಿವಾವನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಬ
- News
Breaking; ಸರ್ಕಾರಿ ನೌಕರರ ವರ್ಗಾವಣೆ ಹೊಸ ಸುತ್ತೋಲೆ
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- Finance
Economic Survey 2022-23: ಆರ್ಥಿಕ ಸಮೀಕ್ಷೆಯ ಪ್ರಮುಖಾಂಶ ಇಲ್ಲಿದೆ
- Sports
WIPL 2023: ಮಹಿಳಾ ಐಪಿಎಲ್ನಲ್ಲಿ ಗುಜರಾತ್ ಜೈಂಟ್ಸ್ ತಂಡದ ಮೆಂಟರ್ ಆಗಿ ಮಿಥಾಲಿ ರಾಜ್ ನೇಮಕ
- Lifestyle
ಥೈರಾಯ್ಡ್ ನಿಯಂತ್ರಣಕ್ಕೆ ಕೊತ್ತಂಬರಿ ಹೇಗೆ ಸಹಕಾರಿ ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಂಕ್ರಾಂತಿ ಹಬ್ಬಕ್ಕೆ ಬರಲಿದೆ 'ಅವತಾರ ಪುರುಷ'!
ನಟ ಕಾಮಿಡಿ ಕಿಂಗ್ ಶರಣ್ ಅವತಾರ ಪುರುಷನಾಗಿ ಹೊಸ ಅವತಾರ ತಾಳಿದ್ದಾರೆ. 'ಅವತಾರ ಪುರುಷ' ಈಗಾಗಲೇ ರಿಲೀಸ್ ಆಗಿರುವ ಫಸ್ಟ್ ಲುಕ್ ಹಾಗೂ ಟೀಸರ್‌ನಿಂದ ಸದ್ದು ಮಾಡುತ್ತಿದೆ. ಈ ಸಿನಿಮಾದಲ್ಲಿ ಶರಣ್ ಬರೋಬ್ಬರಿ 10 ಅವತಾರವೆತ್ತಿ ತೆರೆಮೇಲೆ ವಿಜೃಂಭಿಸಲಿದ್ದಾರೆ.
ಹಿಂದೆಂದೂ ಇಂತಹದ್ದೊಂದು ಪ್ರಯತ್ನಕ್ಕೆ ಶರಣ್ ಮುಂದಾಗಿರಲಿಲ್ಲ. ಹತ್ತು ಅವರಾತಗಳಲ್ಲಿ ನಟ ಶರಣ್ ಬೆಳ್ಳಿ ತೆರೆಯ ಮೇಲೆ ರಾರಾಜಿಸಲು ತಯಾರಾಗಿದ್ದಾರೆ. ಶರಣ್ ಚಿತ್ರಗಳು ಅಂದರೆ ಅಲ್ಲಿ ನಗುವಿಗೇನು ಕಡಿಮೆ ಇರುವುದಿಲ್ಲ. ಅದರಲ್ಲೂ ನಿರ್ದೇಶಕ ಸಿಂಪಲ್ ಸುನಿ ನಿರ್ದೇಶನ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.
ಈ ಚಿತ್ರ ರಿಲೀಸ್ ಬಗ್ಗೆ ಸಾಕಷ್ಟು ಕುತೂಹಲ ಮನೆ ಮಾಡಿದೆ. ಚಿತ್ರ ರಿಲೀಸ್ ಯಾವಾಗ ಎಂದು ಎಲ್ಲರೂ ಚಿತ್ರ ತಂಡವನ್ನು ಪ್ರಶ್ನೆ ಮಾಡುತ್ತಿದ್ದಾರೆ. ಇದೀಗ ಇದಕ್ಕೆ ಉತ್ತರ ಸಿಕ್ಕಿದೆ. ಮುಂದಿನ ವರ್ಷ ಆರಂಭದಲ್ಲಿ ಚಿತ್ರ ರಿಲೀಸ್ ಮಾಡಲು ಚಿತ್ರ ತಂಡ ಪ್ಲ್ಯಾನ್ ಮಾಡುತ್ತಿದೆ.

ಸಂಕ್ರಾಂತಿಗೆ ಬರಲಿದೆ ಅವತಾರ ಪುರುಷ!
ಇದೇ ವರ್ಷ ಡಿಸೆಂಬರ್ 10 ರಂದು ಶರಣ್ 10 ಅವತಾರಗಳಲ್ಲಿ ಪ್ರೇಕ್ಷಕರ ಮುಂದೆ ಹಾಜರಾಗಬೇಕಿತ್ತು. ಆದರೆ ಅದು ಸಾಧ್ಯ ಆಗಿಲ್ಲ. ಚಿತ್ರದ ರಿಲೀಸ್ ಮುಂದೆ ಹೋಗಿದೆ. ಚಿತ್ರ ಯಾವಾಗ ರಿಲೀಸ್ ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. 'ಅವತಾರ ಪುರುಷ' ಚಿತ್ರ ಮುಂದಿನ ವರ್ಷ 2022ರ ಸಂಕ್ರಾಂತಿಗೆ ರಿಲೀಸ್ ಮಾಡುವ ಯೋಜನೆಯಲ್ಲಿದೆ. ಆದರೆ ದಿನಾಂಕವನ್ನು ಇನ್ನು ಬಹಿರಂಗ ಪಡಿಸಿಲ್ಲ.

ಮೋಡಿ ಮಾಡಲಿರುವ ಶರಣ್, ಆಶಿಕಾ ಜೋಡಿ!
ಇದು ಕಾಮಿಡಿ, ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳನ್ನು ಒಳಗೊಂಡ ಚಿತ್ರ. ಹಾಗಾಗಿ ಈ ಚಿತ್ರ ವಿಭಿನ್ನವಾಗಿ ನಿಲ್ಲಲಿದೆ. ನಟ ಶರಣ್ ಜೊತೆಗೆ ನಟಿ ಆಶಿಕಾ ರಂಗನಾಥ್ ಕಮಾಲ್ ಮಾಡಲಿದ್ದಾರೆ. ಈ ಹಿಂದೆ ಈ ಜೋಡಿ ಒಟ್ಟಿಗೆ ನಟಿಸಿ ಗೆದ್ದಿದೆ. ಈಗ ಮತ್ತೊಂದು ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರ್ತಿದೆ. ಸದ್ಯ ಚಿತ್ರದ ರಿಲೀಸ್ ದಿನಾಂಕಕ್ಕಾಗಿ ಶರಣ್ ಅಭಿಮಾನಿಗಳು ಕಾಯುತ್ತಿದ್ದಾರೆ. ಸದ್ಯದಲ್ಲಿಯೆ ಚಿತ್ರ ಹೊಸ ಬಿಡುಗಡೆ ದಿನಾಂಕವನ್ನು ಚಿತ್ರತಂಡ ರಿವೀಲ್ ಮಾಡಲಿದೆ. ಆದರೆ ಸಂಕ್ರಾಂತಿಗೆ ಬಹುತೇಕ ಚಿತ್ರ ರಿಲೀಸ್ ಆಗುವುದು ಪಕ್ಕಾ ಆಗಿದೆ.

ಹಾಡುಗಳ ಮೂಲಕ ಗಮನ ಸೆಳೆದ 'ಅವರಾತ ಪುರುಷ'!
ಅವತಾರ ಪುರುಷ ಚಿತ್ರದ ಹಾಡುಗಳು ವಿಭಿನ್ನವಾಗಿ ಗಮನ ಸೆಳೆದಿವೆ. 'ಲಡ್ಡು ಬಂದು ಬಾಯಿಗ್ ಬಿತ್ತಾ' ಹಾಡು ಜಾಹೀರಾತುಗಳನ್ನು ಸೇರಿಸಿ ಮಾಡಲಾಗಿದೆ. ಜನಪ್ರಿಯವಾಗಿರುವ ವಿವಿಧ ಜಾಹೀರಾತು ತುಣುಕುಗಳನ್ನು ಸೇರಿಸಿ ಹಾಡು ಮಾಡಲಾಗಿದೆ. ಎಲ್ಲ ಜಾಹೀರಾತಿನಲ್ಲಿಯೂ ಶರಣ್ ಹಾಗೂ ಆಶಿಕಾ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಹಾಡು ವಿಭಿನ್ನವಾಗಿ ಗಮನ ಸೆಳೆದಿದ್ದು, ಈಗಾಗಲೇ ಚಿತ್ರ ಪ್ರೇಮಿಗಳಿಗೆ ಇಷ್ಟ ಆಗಿದೆ.

10 ಅವತಾರ ಎತ್ತಲಿದ್ದಾರೆ ನಟ ಶರಣ್!
ಸದ್ಯ ನಟ ಶರಣ್ ತಮ್ಮ ಒಂದು ಅವತಾರದ ಫೋಟೊವನ್ನು ಹಂಚಿಕೊಂಡು ತಲೆಗೆ ಹುಳ ಬಿಟ್ಟಿದ್ದಾರೆ. ಇನ್ನು ಚಿತ್ರದಲ್ಲಿ ಇವರ ಹತ್ತು ಅವತಾರಗಳು ಹೇಗೆ ಇರಬಹುದು ಎನ್ನುವುದನ್ನು ಊಹಿಸಿಕೊಳ್ಳಿ ಸಾಕು. ನಟ ಶರಣ್ ಈ ಚಿತ್ರಕ್ಕಾಗಿ ಹಲವು ವೇಷಗಳನ್ನು ತೊಟ್ಟಿದ್ದಾರೆ. ಅದಕ್ಕಾಗಿ ಸಾಕಷ್ಟು ಶ್ರಮ ವಹಿಸಿದ್ದಾರೆ. ಸಿನಿಮಾಗಳ ಹೊರತಾಗಿ ನಿಜ ಜೀವನದಲ್ಲಿ ನಟಿಸಬೇಕಾದ ಸಂದರ್ಭ ಎದುರಾದರೆ ಏನಾಗುತ್ತದೆ ಎಂಬುದು ಈ ಚಿತ್ರದ ಒನ್‌ಲೈನ್ ಕಥೆ. ಜೊತೆಗೆ ಬ್ಲ್ಯಾಕ್ ಮ್ಯಾಜಿಕ್‌ನ ಕುರಿತಾದ ಒಂದಷ್ಟು ವಿಚಾರಗಳು ಚಿತ್ರದಲ್ಲಿ ಇವೆ.