twitter
    For Quick Alerts
    ALLOW NOTIFICATIONS  
    For Daily Alerts

    ಪುನೀತ್‌ಗೆ ಭಾರತ ರತ್ನ ಯಾಕೆ ಕೊಡಬಾರದು?: ಶರತ್ ಕುಮಾರ್

    |

    ಪುನೀತ್ ನಮನ ಕಾರ್ಯಕ್ರಮದಲ್ಲಿ ಗಣ್ಯರು ಅಪ್ಪುವಿನ ಗುಣಗಾನ ಮಾಡಿದ್ದಾರೆ. ಪವರ್ ಸ್ಟಾರ್ ಪವರ್ ಏನು ಅನ್ನುವುದನ್ನು ಜಗತ್ತಿಗೆ ಸಾರಿ ಹೇಳಿದ್ದಾರೆ. ಪರಮಾತ್ಮನ ಸಮಾಜಮುಖಿ ಕೆಲಸಗಳನ್ನು ಹೊಗಳಿಕೊಂಡಾಡಿದ್ದಾರೆ. ರಾಜಕೀಯ ಮುಖಂಡರು ಹಾಗೂ ಚಿತ್ರರಂಗದ ಕಲಾವಿದರು ಹೇಳಿದ ಒಂದೊಂದು ಮಾತು ಅಭಿಮಾನಿಗಳು ಕಣ್ಣಲ್ಲಿ ನೀರಾಡುವಂತೆ ಮಾಡಿದೆ.

    ಪುನೀತ್ ನಮನ ಕಾರ್ಯಕ್ರಮದಲ್ಲಿ ತಮಿಳು ನಟ ಶರತ್ ಕುಮಾರ್ ಅಪ್ಪು ಜೊತೆ ಕಳೆದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ರಾಜಕುಮಾರ ಸಿನಿಮಾದಲ್ಲಿ ಶರತ್ ಕುಮಾರ್ ಅಪ್ಪು ತಂದೆಯ ಪಾತ್ರದಲ್ಲಿ ನಟಿಸಿದ್ದರು. ಈಗ ಜೇಮ್ಸ್ ಸಿನಿಮಾದಲ್ಲೂ ನಟಿಸುತ್ತಿದ್ದರು. ಹೀಗಾಗಿ ಪುನೀತ್ ಹಾಗೂ ಶರತ್ ಕುಮಾರ್ ನಡುವೆ ಒಂದೊಳ್ಳೆ ಬಾಂಧವ್ಯವಿದೆ. ಪುನೀತ್‌ರನ್ನು ತೀರಾ ಹತ್ತಿರದಿಂದ ಬಲ್ಲವರಾಗಿದ್ದರಿಂದ ಭಾವನಾತ್ಮಕವಾಗಿ ಅಪ್ಪುಗೆ ನುಡಿ ನಮನ ಸಲ್ಲಿಸಿದ್ದಾರೆ.

    ಅಪ್ಪುಗೆ ಭಾರತ ರತ್ನ ಯಾಕೆ ಕೊಡಬಾರದು?

    ಅಪ್ಪುಗೆ ಭಾರತ ರತ್ನ ಯಾಕೆ ಕೊಡಬಾರದು?

    ಪುನೀತ್ ರಾಜ್‌ಕುಮಾರ್ ಮಾಡಿದ ಸಮಾಜಮುಖಿ ಕೆಲಸಗಳು ಅವರ ನಿಧನದ ನಂತರ ಲೋಕಕ್ಕೆ ತಿಳಿಯುತ್ತಿದೆ. ಸಾವಿನಲ್ಲೂ ಎರಡು ಕಣ್ಣುಗಳನ್ನು ದಾನ ಮಾಡಿ ಸಾರ್ಥಕತೆ ಮೆರೆದ ಜೀವ ಅದು. ಅದೆಷ್ಟೋ ಜನರ ಬಾಳಿಗೆ ಬೆಳಕಾಗಿದ್ದರು. ಯಾವ ನಟನೂ ಮಾಡದಷ್ಟು ಸಮಾಜಮುಖಿ ಕೆಲಸಗಳನ್ನು ಪುನೀತ್ ರಾಜ್‌ಕುಮಾರ್ ಮಾಡಿದ್ದಾರೆ. ಕರ್ನಾಟಕ ಸರ್ಕಾರ ಪುನೀತ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವುದಾಗಿ ಘೋಷಿಸಿದೆ. ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇದೇ ವೇಳೆ ಅವರಿಗೆ ಭಾರತ ರತ್ನ ಯಾಕೆ ಕೊಡಬಾರದು? ಅವರಿಗೆ ಭಾರತ ರತ್ನ ಪ್ರಶಸ್ತಿ ಕೊಡಿಸಿ" ಎಂದು ಸಿಎಂ ಬಳಿ ಶರತ್ ಕುಮಾರ್ ಮನವಿ ಮಾಡಿಕೊಂಡಿರು.

    'ಪುನೀತ್ ನನಗೆ ಶ್ರದ್ಧಾಂಜಲಿ ಹೇಳಲು ಬರಬೇಕಿತ್ತು'

    'ಪುನೀತ್ ನನಗೆ ಶ್ರದ್ಧಾಂಜಲಿ ಹೇಳಲು ಬರಬೇಕಿತ್ತು'

    " ನನ್ನ ವಯಸ್ಸು ಈಗ 67. ಪುನೀತ್ ರಾಜ್‌ಕುಮಾರ್ ನನಗೆ ಶ್ರದ್ಧಾಂಜಲಿ ಹೇಳಲು ಬರಬೇಕಿತ್ತು. ಆದರೆ, ಪುನೀತ್ ರಾಜ್‌ಕುಮಾರ್ ಅವರಿಗೆ ನಾನು ಶ್ರದ್ಧಾಂಜಲಿ ಹೇಳಲು ಬರುವಂತಾಯ್ತು. ಇಂತಹದ್ದೊಂದು ಸಂದರ್ಭ ಬರುತ್ತೆ ಅಂತ ನನಗೆ ಊಹಿಸಿರಲಿಲ್ಲ. ಅವರಿಗಾಗಿ ನನ್ನ ಪ್ರಾಣವನ್ನೇ ಕೊಡುತ್ತಿದ್ದೆ." ಎಂದು ಶರತ್ ಕುಮಾರ್ ಭಾವುಕರಾಗಿ ನುಡಿದಿದ್ದಾರೆ. ಇದೇ ವೇಳೆ ಸಚಿವ ಆರ್ ಅಶೋಕ್ ಕೂಡ ಪುನೀತ್ ನಮನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ವೇಳೆ ಪುನೀತ್ ಸಾವಿನ ಸುದ್ದಿ ಕೇಳಿದಾಗ ಶಾಕ್ ಆಗಿತ್ತು ಎಂದಿದ್ದಾರೆ.

    ಪುನೀತ್ ತೀರಿಕೊಂಡಿದ್ದಾರೆ ಅನ್ನುವುದನ್ನ ನಂಬಿರಲಿಲ್ಲ

    ಪುನೀತ್ ತೀರಿಕೊಂಡಿದ್ದಾರೆ ಅನ್ನುವುದನ್ನ ನಂಬಿರಲಿಲ್ಲ

    "ಸಿ ಎಂ ಬಸವರಾಜ ಬೊಮ್ಮಾಯಿ ಆ ದಿನ ಸಚಿವ ಆರ್ ಅಶೋಕ್‌ರನ್ನು ಕರೆದು ಪುನೀತ್ ರಾಜ್‌ಕುಮಾರ್ ತೀರಿ ಹೋಗಿದ್ದಾರೆ ಎಂದಿದ್ದರು. ಆಗ ನಾನು ಇದು ತಮಾಷೆ ಮಾಡ್ತಿದ್ದಾರೆ ಎಂದುಕೊಂಡಿದ್ದೆ. ಆಗ ಎಸ್‌ಪಿಯನ್ನು ಕರೆದು ನಿಜ ಸ್ಥಿತಿಯನ್ನು ತಿಳಿಸಿದ್ದರು. ಅಂದು ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿದಾಗ, ಇಷ್ಟೊಂದು ಮಂದಿ ಬರ್ತಾರೆ ಅಂತ ಅಂದುಕೊಂಡಿರಲಿಲ್ಲ. ಜನರು ಸಾಗರ ನೋಡಿದರೆ, ಅವರು ಮಾಡಿದ ಕೆಲಸ ಏನು ಅಂತ ಗೊತ್ತಾಗುತ್ತೆ." ಎಂದು ಪುನೀತ್ ನಿಧನ ಹೊಂದಿದ ದಿನಗಳನ್ನು ನೆನಪಿಸಿಕೊಂಡರು.

    ದೀಪವು ನಿನ್ನದೆ.. ಗಾಳಿವೂ ನಿನ್ನದೆ

    ದೀಪವು ನಿನ್ನದೆ.. ಗಾಳಿವೂ ನಿನ್ನದೆ

    "ನಾನು ರಾಜ್‌ಕುಮಾರ್ ಅವರ ಅಭಿಮಾನಿ. ಅವರು ನಮ್ಮ ಮನೆಗೆ ಬಂದಿದ್ದರು. ಆಗ ಪಾರ್ವತಮ್ಮ ರಾಜ್‌ಕುಮಾರ್ ನನ್ನ ಬಳಿ ಪೊಲೀಸ್ ಪಾತ್ರ ಮಾಡಿಸುತ್ತೇನೆ ಎಂದು ಹೇಳಿದ್ದರು. ಅಲ್ಲಿಂದ ಅವರ ಕುಟುಂಬದೊಂದಿಗೆ ನಂಟಿದೆ. ಕವಿಯೊಬ್ಬರು ಹೇಳಿದ್ದಾರೆ. ದೀಪವು ನಿನ್ನದೆ.. ಗಾಳಿಯೂ ನಿನ್ನದೆ.. ಆರದಿರಲಿ ಬದುಕು

    English summary
    South Indian actor Sharath kumar says to give Bharatha Rathna to Puneeth Rajkumar. Also minister R Ashok remember Puneeth Rajkumar death day.
    Wednesday, November 17, 2021, 9:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X