For Quick Alerts
  ALLOW NOTIFICATIONS  
  For Daily Alerts

  ನಿಮ್ಮ ಮುಖದಲ್ಲಿ ನೋವಿನ ನೆರಳು ನೋಡಿ ತುಂಬಾ ದುಃಖವಾಯಿತು: ಜಗ್ಗೇಶ್ ಬಗ್ಗೆ ಶಶಿಕುಮಾರ್ ಮಾತು

  |

  ಚಿತ್ರೀಕರಣದಲ್ಲಿದ್ದ ಹಿರಿಯ ನಟ ಜಗ್ಗೇಶ್ ವಿರುದ್ಧ ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿ, ನಿಂದಿಸಿದ ಘಟನೆ ಬಗ್ಗೆ ಯಾರು ತುಟಿ ಬಿಚ್ಚುತ್ತಿಲ್ಲ. ಈ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಅಚ್ಚರಿಗೆ ಕಾರಣವಾಗಿದೆ.

  ಜಗ್ಗೇಶ್, ದರ್ಶನ್ ವಿವಾದದ ಬಗ್ಗೆ ಮಾತನಾಡಿದ ಶಶಿಕುಮಾರ್ | Filmibeat Kannada

  ಈ ಬಗ್ಗೆ ಹಿರಿಯ ನಟ ಮತ್ತು ಜಗ್ಗೇಶ್ ಸ್ನೇಹಿತ ಶಶಿ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಯಾವಾಗಲು ನಕ್ಕು ನಗಿಸುತ್ತಿದ್ದ ನಿಮ್ಮ ಮುಖದಲ್ಲಿ ನೋವಿನ ನೆರಳು ನೋಡಿ ದುಃಖವಾಗುತ್ತಿದೆ ಎಂದು ಹೇಳಿದ್ದಾರೆ.

  ಇನ್ಮುಂದೆ ಚಿತ್ರರಂಗದ ಯಾರ ಹುಟ್ಟುಹಬ್ಬ, ಸಿನಿಮಾ, ಸ್ನೇಹ, ಕಾರ್ಯಕ್ರಮಗಳಲ್ಲಿ ನಾನು ಇರಲ್ಲ- ನಟ ಜಗ್ಗೇಶ್

  ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಶಶಿಕುಮಾರ್, 'ಯಾವಾಗಲು ನಕ್ಕು ನಗುಸುತ್ತಿದ್ದ ನಿಮ್ಮ ಮುಖದಲ್ಲಿ ನೋವಿನ ನೆರಳು ಕಾಣುತ್ತಿದೆ, ನಮಗೆ ತುಂಬಾ ದುಃಖವಾಯಿತು. ಆದ್ರೆ ಎಲ್ಲದಕ್ಕೂ ಒಂದು ಒಳ್ಳೆ ಕಾಲ ಅನ್ನುವುದು ಇದ್ದೇ ಇರುತ್ತದೆ. ನಿಮ್ಮ ಮಾತು, ನಿಮ್ಮ ನಗು, ನಿಮ್ಮ ಸಲಹೆ, ನಿಮ್ಮ ಪ್ರೀತಿಗೆ ನಾವು ಕನ್ನಡಿಗರು ಸದಾ ಚಿರಋಣಿ' ಎಂದಿದ್ದಾರೆ.

  ಇನ್ನೂ ಈ ಬಗ್ಗೆ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸಹ ಪ್ರತಿಕ್ರಿಯೆ ನೀಡಿದ್ದಾರೆ. 'ಕನ್ನಡ ಚಿತ್ರರಂಗ ಕುಟುಂಬವಿದ್ದಂತೆ, ಕೋವಿಡ್ ನಿಂದ ಈಗಷ್ಟೆ ಪುನಶ್ಚೇತನಗೊಳ್ಳುತ್ತಿದೆ ಈ ಮಧ್ಯೆ ವಿವಾದಗಳು ಬೇಡ. ಚಿತ್ರರಂಗದ ಬೆಳವಣಿಗೆಗಾಗಿ ದುಡಿಯೋಣ. ಈ ಕಹಿ ವಿವಾದವನ್ನು ಸಂಬಂಧಪಟ್ಟವರು ಮರೆತರೆ ಒಳಿತು' ಎಂದು ಸಲಹೆ ನೀಡಿದ್ದಾರೆ.

  ಈ ಘಟನೆಯಿಂದ ನೊಂದಿರುವ ನಟ ಜಗ್ಗೇಶ್ ಇನ್ಮುಂದೆ ಚಿತ್ರರಂಗದ ಯಾವುದೇ ಹುಟ್ಟುಹಬ್ಬ, ಸಿನಿಮಾ, ಸ್ನೇಹ, ಕಾರ್ಯಕ್ರಮ, ಭೇಟಿ, ಹರಟೆಯಲ್ಲಿ ಭಾಗಿಯಾಗುವುದಿಲ್ಲ ಎಂದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್,

  'ಆತ್ಮೀಯರೆ ನನಗೆ ನೀವು ನಿಮಗೆ ನಾನು ಇನ್ನುಮುಂದೆ. ಇನ್ನು ಮುಂದೆ ನನ್ನ ಉದ್ಯಮದ ಯಾರ ಹುಟ್ಟುಹಬ್ಬ, ಸಿನಿಮಾ, ಸ್ನೇಹ, ಕಾರ್ಯಕ್ರಮ, ಭೇಟಿ, ಹರಟೆ ನನ್ನಿಂದ ಇರುವುದಿಲ್ಲ. ಮುಂದೆ ನನ್ನ ಸಿನಿಮಾ ನನ್ನ ztv showಗೆ ಮೀಸಲು ಬದುಕು. ಕಾರಣ ತುಂಬ ತಾಮಸವಾಗಿದೆ ನಮ್ಮರಂಗ, ದೊಡ್ಡವರು ಬದುಕಿದಾಗಲೆ ಅಪಮಾನಿಸಿ ದೊಡ್ಡವರಾಗುವ ಹುನ್ನಾರ ಪುರುಷರ ಸಾಮ್ರಾಜ್ಯ ಆಗಿದೆ ರಂಗ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರತಿಕ್ರಿಯೆ ನೀಡುತ್ತಾರಾ? ಎನ್ನುವುದನ್ನು ಕಾದುನೋಡಬೇಕು.

  English summary
  Actor Shashikumar Reaction on Jaggeh Upset over Darshan Fans attack.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X