twitter
    For Quick Alerts
    ALLOW NOTIFICATIONS  
    For Daily Alerts

    ಮತ್ತೆ ಚುನಾವಣೆಗೆ ನಟ ಶಶಿಕುಮಾರ್ ಸಜ್ಜು, ಕ್ಷೇತ್ರ ಯಾವುದು? ಟಿಕೆಟ್ ಸಿಗುತ್ತಾ?

    By ಚಿತ್ರದುರ್ಗ ಪ್ರತಿನಿಧಿ
    |

    ನಟ ಶಶಿಕುಮಾರ್, ಈಗ ಹಿರಿಯ ನಟ ಮಾತ್ರವಲ್ಲ, ರಾಜಕಾರಣಿಯೂ ಸಹ. ಈಗಾಗಲೇ ಒಮ್ಮೆ ಸಂಸದರಾಗಿರುವ ಶಶಿಕುಮಾರ್, ಚುನಾವಣೆ ಸನಿಹವಾಗುತ್ತಿದ್ದಂತೆ ಮತ್ತೆ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.

    ಈ ಬಾರಿ ಮತ್ತೆ ಚುನಾವಣೆಗೆ ಸ್ಪರ್ಧಿಸುವುದಾಗಿ ಖಾತ್ರಿಪಡಿಸಿರುವ ನಟ ಶಶಿಕುಮಾರ್, ಕ್ಷೇತ್ರ ಯಾವುದಾಗಿರಲಿದೆ ಎಂದು ಸಹ ಮಾಧ್ಯಮಗಳ ಬಳಿ ಹೇಳಿಕೊಂಡಿದ್ದಾರೆ.

    ಕನ್ನಡ ಚಿತ್ರರಂಗದ ಖ್ಯಾತ ಕಾಸ್ಟ್ಯೂಮ್ ಡಿಸೈನರ್, ಹಾಸ್ಯ ನಟ ಗಂಡಸಿ ನಾಗರಾಜ್(57) ನಿಧನಕನ್ನಡ ಚಿತ್ರರಂಗದ ಖ್ಯಾತ ಕಾಸ್ಟ್ಯೂಮ್ ಡಿಸೈನರ್, ಹಾಸ್ಯ ನಟ ಗಂಡಸಿ ನಾಗರಾಜ್(57) ನಿಧನ

    ಮುಂಬರುವ ವಿಧಾನಸಭಾ ಚುನಾವಣೆಗೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಅಥವಾ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಮಾಜಿ ಸಂಸದ ಹಾಗೂ ನಟ ಶಶಿಕುಮಾರ್ ಹೇಳಿದ್ದಾರೆ.

    ಚಿತ್ರದುರ್ಗ ನಗರದ ಹೊರವಲಯದಲ್ಲಿರುವ ಮಾದಾರ ಚನ್ನಯ್ಯ ಮಠಕ್ಕೆ ತೆರಳಿ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳನ್ನು ಭೇಟಿ ಮಾಡಿ, ಶ್ರೀಗಳ ಆಶಿರ್ವಾದ ಪಡೆದು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೊಳಕಾಲ್ಮೂರು ಮತ್ತು ಚಳ್ಳಕೆರೆ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡಿದ್ದೇನೆ ಎಂದರು.

    ಹಿಂದೆ 1999 ರಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಸಂಸದನಾಗಿದ್ದೆ. ಇತ್ತ ಮಠದ ಶ್ರೀಗಳನ್ನು ಭೇಟಿ ಮಾಡಿ ತುಂಬಾ ದಿನಗಳು ಕಳೆದಿತ್ತು. ಈ ಹಿನ್ನೆಲೆಯಲ್ಲಿ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಬಂದಿದ್ದೇನೆ ಎಂದರು.

    ಕ್ಷೇತ್ರವನ್ನು ಪಕ್ಷ ನಿರ್ಧಾರ ಮಾಡಲಿದೆ: ಶಶಿಕುಮಾರ್

    ಕ್ಷೇತ್ರವನ್ನು ಪಕ್ಷ ನಿರ್ಧಾರ ಮಾಡಲಿದೆ: ಶಶಿಕುಮಾರ್

    ಜಿಲ್ಲೆಯಲ್ಲಿ ಎರಡು ಪರಿಶಿಷ್ಟ ಪಂಗಡಕ್ಕೆ ಸೇರಿದ ಮೀಸಲು ಕ್ಷೇತ್ರಗಳಿವೆ. ನಾನು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ಪಕ್ಷ ನಿರ್ಧಾರ ಮಾಡುತ್ತದೆ. ಆ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ ಮಾಡಲು ಬಿಜೆಪಿ ಪಕ್ಷದ ಹಿರಿಯ ನಾಯಕರು ತಿಳಿಸಿದ್ದಾರೆ. ಹಾಗಾಗಿ ಪಕ್ಷ ಸಂಘಟನೆ ಬಲಗೊಳಿಸುವ ಕೆಲಸ ಮಾಡುತ್ತೇನೆ ಎಂದರು.

    ಪಕ್ಷೇತರವಾಗಿ ಸ್ಪರ್ಧಿಸುವುದಿಲ್ಲ: ಶಶಿಕುಮಾರ್

    ಪಕ್ಷೇತರವಾಗಿ ಸ್ಪರ್ಧಿಸುವುದಿಲ್ಲ: ಶಶಿಕುಮಾರ್

    ಇನ್ನು ಟಿಕೆಟ್ ಹೈಕಮಾಂಡ್ ನಿರ್ಧಾರ ಮಾಡಲಿದೆ. ಚಳ್ಳಕೆರೆ ಮತ್ತು ಮೊಳಕಾಲ್ಮೂರು ಎರಡು ಕ್ಷೇತ್ರಗಳ ಎಲ್ಲಿ ನೀಡಿದರೂ ಸ್ಪರ್ಧಿಸಿ ಗೆಲುವು ಸಾಧಿಸುತ್ತೇನೆ. ಭಾರತೀಯ ಜನತಾ ಪಾರ್ಟಿ ರಾಷ್ಟ್ರೀಯ ಪಕ್ಷ, ಪ್ರಧಾನಿ ನರೇಂದ್ರ ಮೋದಿ ಜೀ ಯವರು ಉತ್ತಮ ಕಾರ್ಯಕ್ರಮ ನೀಡುತ್ತಿದ್ದಾರೆ. ಹಾಗಾಗಿ ನಾನು ಪಕ್ಷದಲ್ಲಿ ಸೇರ್ಪಡೆಯಾಗಿದ್ದೇನೆ. ಶ್ರೀರಾಮುಲು ಮೊಳಕಾಲ್ಮೂರಲ್ಲಿ ಸ್ಪರ್ಧೆ ಮಾಡಿದ್ರೆ, ನಾನು ಚಳ್ಳಕೆರೆ ನಿಲ್ಲುವೆ ಎಂದಿದ್ದಾರೆ.

    ಚಳ್ಳಕೆರೆ-ಮೊಳಕಾಲ್ಮೂರು ಮಧ್ಯಭಾಗದಲ್ಲಿ ಮನೆ!

    ಚಳ್ಳಕೆರೆ-ಮೊಳಕಾಲ್ಮೂರು ಮಧ್ಯಭಾಗದಲ್ಲಿ ಮನೆ!

    ಗ್ರಾಮ ಪಂಚಾಯತಿ ಮಟ್ಟದಿಂದ ನಾನು ಪಕ್ಷ ಸಂಘಟನೆ ಮಾಡುತ್ತಿದ್ದೇನೆ. ಎಲ್ಲಾ ರೀತಿಯಲ್ಲಿ ಕೆಲಸ ಮಾಡಿ ತಯಾರಾಗಿದ್ದೇನೆ. ಪಕ್ಷೇತರವಾಗಿ ಸ್ಪರ್ಧೆ ಮಾಡುವ ಪ್ರಶ್ನೇ ಇಲ್ಲ, ಪಕ್ಷದ ನಿರ್ಧಾರವೇ ಅಂತಿಮ. ಕಳೆದ ಬಾರಿಯಾದಂತೆ, ಈ ಬಾರಿ ಆಗಲು ಸಾಧ್ಯ ಇಲ್ಲ. ಚಳ್ಳಕೆರೆ ಮತ್ತು ಮೊಳಕಾಲ್ಮೂರು ಮಧ್ಯ ಭಾಗದಲ್ಲಿ ಮನೆ ನೋಡಿದ್ದೇನೆ. ಜನವರಿ ಸಂಕ್ರಾಂತಿ ಮುಗಿದ ನಂತರ ಮನೆಯಲ್ಲಿ ಇರುತ್ತೇನೆ ಎಂದು ನಟ ಶಶಿಕುಮಾರ್ ತಿಳಿಸಿದರು.

    ಹಲವು ಪಕ್ಷ ಬದಲಿಸಿರುವ ಶಶಿಕುಮಾರ್

    ಹಲವು ಪಕ್ಷ ಬದಲಿಸಿರುವ ಶಶಿಕುಮಾರ್

    ಶಶಿಕುಮಾರ್ ಇದೇ ವರ್ಷಾರಂಭದಲ್ಲಿ ಬಿಜೆಪಿ ಪಕ್ಷ ಸೇರ್ಪಡೆಗೊಂಡಿದ್ದಾರೆ. 1999 ರಲ್ಲಿ ಜೆಡಿಯು ಟಿಕೆಟ್‌ನಿಂದ ಚುನಾವಣೆಗೆ ಸ್ಪರ್ಧಿ ಗೆದ್ದು ಸಂಸದರಾಗಿದ್ದರು. ಬಳಿಕ ಜೆಡಿಎಸ್‌ಗೆ ಬಂದು 2004 ರಲ್ಲಿ ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸಿ ಸೋತರು. ಬಳಿಕ ಕಾಂಗ್ರೆಸ್‌ ಸೇರ್ಪಡೆಗೊಂಡರು. 2018 ರಲ್ಲಿ ಮೊಳಕಾಲ್ಮೂರು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನೀಡದ ಕಾರಣ ಮತ್ತೆ ಜೆಡಿಎಸ್‌ಗೆ ಮರಳಿದರು. ಈಗ ಬಿಜೆಪಿಗೆ ಸೇರ್ಪಡೆಗೊಂಡಿದ್ದು ಮೊಳಕಾಲ್ಮೂರು ಅಥವಾ ಚಳ್ಳಕೆರೆಗಳಿಂದ ಟಿಕೆಟ್ ಬಯಸಿದ್ದಾರೆ.

    English summary
    Actor Shashi Kumar said he is ready to contest next assembly election from Molakalmuru constituency. He is with BJP this time.
    Thursday, December 15, 2022, 7:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X